السؤال
س١٩: ما هو التواضع؟
ಪ್ರಶ್ನೆ 19. ವಿನಯ ಎಂದರೇನು?
الجواب
ج:هو أن لا يرى الإنسان نفسه على الناس، فلا يستحقر الناس ولا يرفض الحق.
- قال تَعَالَى:
﴿وَعِبَادُ الرَّحْمَنِ الَّذِينَ يَمْشُونَ عَلَى الْأَرْضِ هَوْنًا﴾
[الفرقان: ٦٣]،
أي: متواضعين.
- وقالَ رسولُ اللهِ ﷺ:
«وما تَواضَعَ أحَدٌ للهِ إلَّا رَفَعَهُ اللهُ»
رواه مسلم.
- وقال صلى الله عليه وسلم:
«إنَّ اللهَ أَوْحى إليَّ أنْ تَواضَعُوا، حتَّى لا يَفخَرَ أحَدٌ على أحَدٍ، ولا يَبْغيَ أحَدٌ على أحَدٍ»
ಉತ್ತರ: ವಿನಯ ಎಂದರೆ ತಾನು ಇತರರಿಗಿಂತ ಮೇಲು ಎಂದು ಭಾವಿಸದಿರುವುದು, ಜನರನ್ನು ತಿರಸ್ಕಾರದಿಂದ ಕಾಣದಿರುವುದು ಮತ್ತು ಸತ್ಯವನ್ನು ತಿರಸ್ಕರಿಸದಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಪರಮ ದಯಾಮಯನ ದಾಸರು ಭೂಮಿಯಲ್ಲಿ ವಿನಯದೊಂದಿಗೆ ಚಲಿಸುವವರಾಗಿರುವರು.”
[ಸೂರತ್ ಅಲ್-ಫುರ್ಖಾನ್: 63]
ಅಂದರೆ ವಿನಯವಂತರಾಗಿ ಚಲಿಸುವರು.
- ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:
“ಅಲ್ಲಾಹನಿಗಾಗಿ ವಿನಯ ತೋರುವವರ ಸ್ಥಾನವನ್ನು ಅಲ್ಲಾಹು ಎತ್ತರಿಸದೇ ಇರಲಾರನು.”
[ಮುಸ್ಲಿಮ್].
ಪ್ರವಾದಿ ﷺ ರವರು ಹೇಳಿದರು:
“ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಜಂಭ ತೋರದೆ, ಮತ್ತು ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡದೆ, ನೀವೆಲ್ಲರೂ ವಿನಯವಂತರಾಗಬೇಕೆಂದು ಅಲ್ಲಾಹು ನನಗೆ ದೇವವಾಣಿ ಅವತೀರ್ಣಗೊಳಿಸಿದ್ದಾನೆ.”
[ಅಲ್-ಫುರ್ಕಾನ್: 63]