السؤال
س١٨: ما هو الاستهزاء؟
ಪ್ರಶ್ನೆ 18. ಅಪಹಾಸ್ಯ ಎಂದರೇನು?
الجواب
ج:هو السخرية من أخيك المسلم وتحقيره، وهذا لا يجوز.
قال تَعَالَى في النهي عن ذلك:
﴿يَٰٓأَيُّهَا ٱلَّذِينَ ءَامَنُواْ لَا يَسۡخَرۡ قَوۡمٞ مِّن قَوۡمٍ عَسَىٰٓ أَن يَكُونُواْ خَيۡرٗا مِّنۡهُمۡ وَلَا نِسَآءٞ مِّن نِّسَآءٍ عَسَىٰٓ أَن يَكُنَّ خَيۡرٗا مِّنۡهُنَّۖ وَلَا تَلۡمِزُوٓاْ أَنفُسَكُمۡ وَلَا تَنَابَزُواْ بِٱلۡأَلۡقَٰبِۖ بِئۡسَ ٱلِٱسۡمُ ٱلۡفُسُوقُ بَعۡدَ ٱلۡإِيمَٰنِۚ وَمَن لَّمۡ يَتُبۡ فَأُوْلَٰٓئِكَ هُمُ ٱلظَّٰلِمُونَ﴾
[الحجرات: ١١].
ಉತ್ತರ: ಅಪಹಾಸ್ಯ ಎಂದರೆ ನಿನ್ನ ಮುಸ್ಲಿಂ ಸಹೋದರನನ್ನು ಗೇಲಿ ಮಾಡುವುದು ಮತ್ತು ತುಚ್ಛವಾಗಿ ಕಾಣುವುದು. ಇದು ಧರ್ಮಸಮ್ಮತವಲ್ಲ.
ಇದನ್ನು ವಿರೋಧಿಸುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಓ ಸತ್ಯವಿಶ್ವಾಸಿಗಳೇ! ಒಂದು ಜನತೆಯು ಇನ್ನೊಂದು ಜನತೆಯನ್ನು ಅಪಹಾಸ್ಯ ಮಾಡದಿರಲಿ. ಇವರು (ಅಪಹಾಸ್ಯಕ್ಕೊಳಗಾದವರು) ಅವರಿಗಿಂತಲೂ ಉತ್ತಮರಾಗಿರಬಹುದು. ಸ್ತ್ರೀಯರ ಪೈಕಿ ಒಂದು ಗುಂಪು ಇನ್ನೊಂದು ಗುಂಪಿನ ಸ್ತ್ರೀಯರನ್ನು ಅಪಹಾಸ್ಯ ಮಾಡದಿರಲಿ. ಇವರು (ಅಪಹಾಸ್ಯಕ್ಕೊಳಗಾದವರು) ಅವರಿಗಿಂತಲೂ ಉತ್ತಮರಾಗಿರಬಹುದು. ನೀವು ಪರಸ್ಪರ ಚುಚ್ಚಿ ಮಾತನಾಡದಿರಿ. ನೀವು ಅಡ್ಡಹೆಸರುಗಳಿಂದ ಕರೆದು ಪರಸ್ಪರ ಅವಮಾನ ಮಾಡದಿರಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ಕೆಟ್ಟ ಹೆಸರು (ಕರೆಯುವುದು) ಎಷ್ಟು ನೀಚವಾದುದು! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರು ಅಕ್ರಮಿಗಳಾಗಿರುವರು.”
[ಸೂರ ಅಲ್-ಹುಜುರಾತ್: 11].
ಸತ್ಯವಿಶ್ವಾಸಿಗಳೇ! ಪುರುಷರು ಇತರ ಪುರುಷರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ಮಹಿಳೆಯರು ಇತರ ಮಹಿಳೆಯರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ನೀವು ಒಬ್ಬರು ಇನ್ನೊಬ್ಬರ ಕೊರತೆಯನ್ನು ಹೇಳಬೇಡಿ. ಯಾರನ್ನೂ ಅಡ್ಡಹೆಸರಿನಿಂದ ಕರೆಯಬೇಡಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ದುಷ್ಕರ್ಮವು ಬಹಳ ಕೆಟ್ಟ ಹೆಸರಾಗಿದೆ! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರೇ ಅಕ್ರಮಿಗಳು.
[ಅಲ್-ಹುಜುರಾತ್:11].