Skip to content

ನಿಷೇಧಿತ ವಂಚನೆಯ ಕೆಲವು ವಿಧಗಳು ಯಾವುವು?

الباب / الفصل
قسم الأخلاق

السؤال

س٢١: ما بعض أنواع الغش المحرم؟

ಪ್ರಶ್ನೆ 21. ನಿಷೇಧಿತ ವಂಚನೆಯ ಕೆಲವು ವಿಧಗಳು ಯಾವುವು?

الجواب

ج:الغش في البيع والشراء، وهو إخفاء عيب السلعة.

  • الغش في تعلم العلم، ومثل ذلك غش الطلاب في الامتحانات.
  • الغش في القول كشهادة الزور والكذب.
  • عدم الوفاء بما تقول وما تتفق به مع الناس.
  • وفي النهي عن الغش: أنَّ رسولَ اللهِ صلى الله عليه وسلم مرَّ على صُبْرةِ طعامٍ، فأَدخَلَ يدَه فيها، فنالَتْ أصابعُه بَلَلًا، فقال:

«ما هذا يا صاحِبَ الطَّعامِ؟» قال: أصابَتْهُ السَّماءُ يا رسولَ اللهِ. قال: «أفلا جَعَلْتَه فَوقَ الطَّعامِ كَيْ يَراهُ النَّاسُ؟ مَن غَشَّ فليس مِنِّي»

رواه مسلم.

الصُّبْرَة: هي الكَوْمةُ من الطَّعام.

ಉತ್ತರ: - ಮಾರಾಟ ಮತ್ತು ಖರೀದಿಯಲ್ಲಿ ವಂಚಿಸುವುದು. ಅಂದರೆ ಸರಕುಗಳ ನ್ಯೂನತೆಯನ್ನು ಮುಚ್ಚಿಡುವುದು.

  • ಕಲಿಯುವುದರಲ್ಲಿ ಮತ್ತು ಕಲಿಸುವುದರಲ್ಲಿ ವಂಚಿಸುವುದು. ಉದಾಹರಣೆಗೆ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಂಚನೆ ಮಾಡುವುದು.
  • ಮಾತಿನಲ್ಲಿ ವಂಚಿಸುವುದು. ಅಂದರೆ ಸುಳ್ಳು ಹೇಳುವುದು ಮತ್ತು ಸುಳ್ಳು ಸಾಕ್ಷಿ ನುಡಿಯುವುದು.
  • ಜನರಿಗೆ ಮಾತು ಕೊಟ್ಟರೆ ಅಥವಾ ಒಪ್ಪಂದ ಮಾಡಿದರೆ ಅದನ್ನು ನೆರವೇರಿಸದಿರುವುದು.

ವಂಚಿಸುವುದು ನಿಷೇಧಿಸಲಾಗಿದೆ ಎನ್ನುವುದಕ್ಕೆ ಒಂದು ಪುರಾವೆಯೇನೆಂದರೆ, ಒಮ್ಮೆ ಪ್ರವಾದಿಯವರು(ಸ) ಆಹಾರ ಧಾನ್ಯದ ಒಂದು ರಾಶಿಯ ಬಳಿಯಿಂದ ಹಾದುಹೋಗುತ್ತಿದ್ದಾಗ, ಅದರೊಳಗೆ ಕೈ ತೂರಿಸಿದರು. ಆಗ ಅವರ ಬೆರಳುಗಳು ಒದ್ದೆಯಾದವು. ಅವರು ಕೇಳಿದರು: “ಓ ಆಹಾರ ಧಾನ್ಯ ಮಾರುವವನೇ, ಇದೇನು?” ಆತ ಹೇಳಿದ: “ಓ ಅಲ್ಲಾಹನ ಸಂದೇಶವಾಹಕರೇ, ಮಳೆ ಬಂದು ಒದ್ದೆಯಾಗಿದೆ.” ಅವರು ಹೇಳಿದರು:

“ಜನರು ಕಾಣುವಂತೆ ಅದನ್ನು ನೀನು ರಾಶಿಯ ಮೇಲ್ಭಾಗದಲ್ಲಿ ಏಕೆ ಹಾಕಲಿಲ್ಲ? ವಂಚನೆ ಮಾಡುವವನು ನಮ್ಮಲ್ಲಿ ಸೇರಿದವನಲ್ಲ.”

[ಮುಸ್ಲಿಮ್].

ಆಹಾರ ಧಾನ್ಯದ ರಾಶಿ ಎಂದರೆ ಆಹಾರ ಧಾನ್ಯವನ್ನು ಮಾರಾಟಕ್ಕೆ ಕುಪ್ಪೆ ಮಾಡಿಟ್ಟಿರುವುದು.

  • ವಂಚಿಸುವುದು ನಿಷೇಧಿಸಲಾಗಿದೆ ಎನ್ನುವುದಕ್ಕೆ ಒಂದು ಪುರಾವೆಯೇನೆಂದರೆ, ಒಮ್ಮೆ ಪ್ರವಾದಿಯವರು(ಸ) ಆಹಾರ ಧಾನ್ಯದ ಒಂದು ರಾಶಿಯ ಬಳಿಯಿಂದ ಹಾದುಹೋಗುತ್ತಿದ್ದಾಗ, ಅದರೊಳಗೆ ಕೈ ತೂರಿಸಿದರು. ಆಗ ಅವರ ಬೆರಳುಗಳು ಒದ್ದೆಯಾದವು. ಅವರು ಹೇಳಿದರು:

“ಓ ಆಹಾರ ಧಾನ್ಯ ಮಾರುವವನೇ, ಇದೇನು?” ಆತ ಹೇಳಿದ: “ಓ ಅಲ್ಲಾಹನ ಸಂದೇಶವಾಹಕರೇ, ಮಳೆ ಬಂದು ಒದ್ದೆಯಾಗಿದೆ.” ಅವರು ಹೇಳಿದರು: “ಜನರು ಕಾಣುವಂತೆ ಅದನ್ನು ನೀನು ರಾಶಿಯ ಮೇಲ್ಭಾಗದಲ್ಲಿ ಏಕೆ ಹಾಕಲಿಲ್ಲ? ವಂಚನೆ ಮಾಡುವವನು ನಮ್ಮಲ್ಲಿ ಸೇರಿದವನಲ್ಲ.”