Skip to content

ಒಬ್ಬಳು ಮಹಿಳೆಯ ಮುಟ್ಟಿನ ಅವಧಿಯು ಸಾಮಾನ್ಯವಾಗಿ ಏಳು ಅಥವಾ ಎಂಟು ದಿನಗಳಾಗಿದ್ದು, ಒಮ್ಮೊಮ್ಮೆ ಅದು ಅದಕ್ಕಿಂತಲೂ ಹೆಚ್ಚು ದಿನಗಳಿಗೆ ಮುಂದುವರಿದರೆ ಅದರ ವಿಧಿಯೇನು?

السؤال

ಪ್ರಶ್ನೆ 1.

ಒಬ್ಬಳು ಮಹಿಳೆಯ ಮುಟ್ಟಿನ ಅವಧಿಯು ಸಾಮಾನ್ಯವಾಗಿ ಏಳು ಅಥವಾ ಎಂಟು ದಿನಗಳಾಗಿದ್ದು, ಒಮ್ಮೊಮ್ಮೆ ಅದು ಅದಕ್ಕಿಂತಲೂ ಹೆಚ್ಚು ದಿನಗಳಿಗೆ ಮುಂದುವರಿದರೆ ಅದರ ವಿಧಿಯೇನು?

س4: إذا كانت المرأة عادتها الشهرية ثمانية أيامٍ أو سبعة أيامٍ، ثم استمرت معها مرةً أو مرتين أكثر من ذلك، فما الحكم؟

الجواب

ಉತ್ತರ 1.

ಒಬ್ಬಳು ಮಹಿಳೆಯ ಮುಟ್ಟಿನ ಅವಧಿಯು ಸಾಮಾನ್ಯವಾಗಿ ಆರು ಅಥವಾ ಏಳು ದಿನಗಳಾಗಿದ್ದು, ಒಮ್ಮೊಮ್ಮೆ ಅದು ಎಂಟು, ಒಂಬತ್ತು, ಹತ್ತು ಅಥವಾ ಹನ್ನೊಂದು ದಿನಗಳಿಗೆ ಮುಂದುವರಿದರೆ, ಶುದ್ಧಳಾಗುವ ತನಕ ಅವಳು ನಮಾಝ್ ನಿರ್ವಹಿಸಬಾರದು.

ಏಕೆಂದರೆ ಪ್ರವಾದಿ(ಸ) ರವರು ಮುಟ್ಟಿಗೆ ಒಂದು ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಿಲ್ಲ.

ಅಲ್ಲಾಹು ಹೇಳುತ್ತಾನೆ: “ಅವರು ನಿಮ್ಮೊಂದಿಗೆ ಮುಟ್ಟಿನ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅದು ಮಲಿನವಾಗಿದೆ.” [ಬಕರ:222]

ಆದ್ದರಿಂದ, ಮುಟ್ಟಿನ ರಕ್ತವು ಅಸ್ತಿತ್ವದಲ್ಲಿರುವ ತನಕ ಅವಳು ಮುಟ್ಟಿನಲ್ಲಿರುತ್ತಾಳೆ. ಮುಟ್ಟು ನಿಂತು ಅವಳು ಶುದ್ಧಳಾದರೆ, ಸ್ನಾನ ಮಾಡಿ ನಮಾಝ್ ನಿರ್ವಹಿಸಬಹುದು. ಮುಂದಿನ ತಿಂಗಳ ಮುಟ್ಟಿನ ಅವಧಿಯು ಇದಕ್ಕಿಂತ ಕಡಿಮೆಯಾದರೂ, ಶುದ್ಧಳಾದ ನಂತರ ಅವಳು ಸ್ನಾನ ಮಾಡಬೇಕು. ಅದು ಹಿಂದಿನ ಅವಧಿಗೆ ಸಮಾನವಾಗಿರದಿದ್ದರೂ ಸಹ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಮಹಿಳೆಯು ಮುಟ್ಟಿನ ಅವಧಿಯಲ್ಲಿರುವ ತನಕ ಅವಳು ನಮಾಝ್ ನಿರ್ವಹಿಸಬಾರದು. ಆ ಅವಧಿಯು ಅವಳ ಹಿಂದಿನ ಅವಧಿಗೆ ಸಮವಾಗಿದ್ದರೂ, ಅಥವಾ ಅದಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಿದ್ದರೂ ಸಹ. ಅವಳು ಯಾವಾಗ ಶುದ್ಧಳಾಗುತ್ತಾಳೋ ಆವಾಗ ನಮಾಝ್ ನಿರ್ವಹಿಸಬೇಕು.

ﺟ4: إذا كانت عادة هذه المرأة ستة أيامٍ أو سبعةً، ثم طالت هذه المدة، وصارت ثمانيةً أو تسعةً أو عشرةً أو أحد عشر يومًا فإنها تبقى لا تصلّي حتى تطهر،

وذلك لأن النبي ﷺ لم يحد حدًّا معيّنًا في الحيض، وقد قال الله تعالى:

﴿وَيَسۡـَٔلُونَكَ عَنِ ٱلۡمَحِيضِۖ قُلۡ هُوَ أَذٗى...﴾

[البقرة:222]،

فمتى كان هذا الدم باقيًا فإن المرأة على حالها حتى تطهر، وتغتسل، ثم تصلّي، فإذا جاءها في الشهر الثاني ناقصًا عن ذلك فإنها تغتسل إذا طهرت وإن لم يكن على المدة السابقة.

والمهمّ أن المرأة متى كان الحيض معها موجودًا فإنها لا تصلّي، سواءٌ كان الحيض موافقًا للعادة السابقة، أو زائدًا عنها، أو ناقصًا، وإذا طهرت تصلّي.