ಮುಹಮ್ಮದ್ ﷺ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯದ ಅರ್ಥವೇನು?
- الباب / الفصل
- قسم العقيدة
السؤال
ಪ್ರಶ್ನೆ 6. ಮುಹಮ್ಮದ್ ﷺ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯದ ಅರ್ಥವೇನು?
الجواب
ಉತ್ತರ: ಅದರ ಅರ್ಥ: ಅಲ್ಲಾಹು ಅವರನ್ನು ಸರ್ವಲೋಕಗಳಿಗೆ ಸುವಾರ್ತೆ ನೀಡುವವರಾಗಿ ಮತ್ತು ಎಚ್ಚರಿಕೆ ನೀಡುವವರಾಗಿ ಕಳುಹಿಸಿದನು.
ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
- ಅವರು ಆಜ್ಞಾಪಿಸಿದ ವಿಷಯಗಳನ್ನು ಅನುಸರಿಸುವುದು.
- ಅವರು ತಿಳಿಸಿಕೊಟ್ಟದ್ದರಲ್ಲಿ ವಿಶ್ವಾಸವಿಡುವುದು.
- ಅವರನ್ನು ಧಿಕ್ಕರಿಸದಿರುವುದು.
- ಅವರ ಆದೇಶದ ಪ್ರಕಾರವಲ್ಲದೆ ಅಲ್ಲಾಹನನ್ನು ಆರಾಧಿಸದಿರುವುದು. ಅಂದರೆ ಸುನ್ನತ್ತನ್ನು ಅನುಸರಿಸುವುದು ಮತ್ತು ಬಿದ್‌ಅತ್‌ಗಳನ್ನು ತ್ಯಜಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “(ಅಲ್ಲಾಹುವಿನ) ಸಂದೇಶವಾಹಕರನ್ನು ಯಾರು ಅನುಸರಿಸುವನೋ ಖಂಡಿತವಾಗಿಯೂ ಅವನು ಅಲ್ಲಾಹುವನ್ನು ಅನುಸರಿಸಿರುವನು.” [ ಸೂರ ಅನ್ನಿಸಾಅ್:80]. ಮತ್ತೊಂದೆಡೆ ಅವನು ಹೇಳುತ್ತಾನೆ:
“ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ. ಅದು ಅವರಿಗೆ ದಿವ್ಯಸಂದೇಶವಾಗಿ ನೀಡಲಾಗುವ ಒಂದು ಸಂದೇಶ ಮಾತ್ರವಾಗಿದೆ.”
[ಸೂರ ಅನ್ನಜ್ಮ್: 3-4]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.”
[ಸೂರ ಅಲ್-ಅಹ್‌ಝಾಬ್:21].
- ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸಿದನು.
[ಅನ್ನಿಸಾ: 80]
ಅವರು ಮನಬಂದಂತೆ ಮಾತನಾಡುವುದಿಲ್ಲ 3
ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ.
[ಅನ್ನಜ್ಮ್: 3-4]
ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಲ್ಲಾಹನನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.
[ಅಲ್-ಅಹ್‌ಝಾಬ್: 21].