ಮಾತಾಪಿತರೊಂದಿಗಿನ ಶಿಷ್ಟಾಚಾರಗಳು ಯಾವುವು?
- الباب / الفصل
- قسم الآداب الإسلامية
السؤال
س3: كيف يكون الأدب مع الوالدين؟
ಪ್ರಶ್ನೆ 3. ಮಾತಾಪಿತರೊಂದಿಗಿನ ಶಿಷ್ಟಾಚಾರಗಳು ಯಾವುವು?
الجواب
ج:1. طاعة الوالدين في غير معصية.
- خدمة الوالدين.
- مساعدة الوالدين.
- قضاء حوائج الوالدين.
- الدعاء للوالدين.
- التأدب معهم في القول؛ فلا يجوز قول: "أف"، وهي أقل الأقوال.
- الابتسام في وجه الوالدين ولا أعبس.
- لا أرفع صوتي فوق صوت الوالدين، وأصغي إليهما، ولا أقاطعهما بالكلام، ولا أناديهما باسمهما، بل أقول: " أبي"، "أمي".
- أستأذن قبل الدخول على أبي وأمي وهما في الغرفة.
- تقبيل يد ورأس الوالدين.
- قال تعالى:
﴿۞ وَقَضَىٰ رَبُّكَ أَلَّا تَعۡبُدُوٓاْ إِلَّآ إِيَّاهُ وَبِٱلۡوَٰلِدَيۡنِ إِحۡسَٰنًاۚ إِمَّا يَبۡلُغَنَّ عِندَكَ ٱلۡكِبَرَ أَحَدُهُمَآ أَوۡ كِلَاهُمَا فَلَا تَقُل لَّهُمَآ أُفّٖ وَلَا تَنۡهَرۡهُمَا وَقُل لَّهُمَا قَوۡلٗا كَرِيمٗا٢٣
وَٱخۡفِضۡ لَهُمَا جَنَاحَ ٱلذُّلِّ مِنَ ٱلرَّحۡمَةِ وَقُل رَّبِّ ٱرۡحَمۡهُمَا كَمَا رَبَّيَانِي صَغِيرٗا﴾
[الإسراء: ٢٣-٢٤].
- وفي الحديث جاء رجل إلى النبي صلى الله عليه وسلم يستأذنه في الجهاد، فقال:
«ألك والدان؟» قال نعم. قال: «ففيهما فجاهد»
رواه الترمذي.
ಉತ್ತರ: 1- ಅಲ್ಲಾಹನ ಆಜ್ಞೋಲ್ಲಂಘನೆಯಾಗದ ರೀತಿಯಲ್ಲಿ ಮಾತಾಪಿತರನ್ನು ಅನುಸರಿಸುವುದು.
- ಮಾತಾಪಿತರ ಸೇವೆ ಮಾಡುವುದು.
- ಮಾತಾಪಿತರಿಗೆ ಸಹಾಯ ಮಾಡುವುದು.
- ಮಾತಾಪಿತರ ಅಗತ್ಯಗಳನ್ನು ಪೂರೈಸುವುದು.
- ಮಾತಾಪಿತರಿಗಾಗಿ ಪ್ರಾರ್ಥಿಸುವುದು.
- ಅವರೊಂದಿಗೆ ಮರ್ಯಾದೆಯಿಂದ ಮಾತನಾಡುವುದು, ಅವರ ಮುಂದೆ ಕನಿಷ್ಠ "ಛೇ" ಎಂಬ ಪದವನ್ನು ಕೂಡ ಬಳಸದಿರುವುದು.
- ಮಾತಾಪಿತರ ಮುಖ ನೋಡಿ ಮಂದಹಾಸ ಬೀರುವುದು. ಅವರ ಮುಂದೆ ಮುಖವನ್ನು ಗಂಟಿಕ್ಕಬಾರದು.
- ಮಾತಾಪಿತರ ಧ್ವನಿಗಿಂತ ದೊಡ್ಡ ಧ್ವನಿಯಲ್ಲಿ ಮಾತನಾಡಬಾರದು. ಅವರ ಮಾತನ್ನು ಗಮನವಿಟ್ಟು ಕೇಳಬೇಕು. ಅವರ ಮಾತುಗಳಿಗೆ ಅಡ್ಡಿಪಡಿಸಬಾರದು. ಅವರ ಹೆಸರಿನಿಂದ ಅವರನ್ನು ಕರೆಯಬಾರದು. ಬದಲಾಗಿ ಅಪ್ಪ ಅಮ್ಮ ಎಂದು ಕರೆಯುವುದು.
- ತಂದೆ ಮತ್ತು ತಾಯಿ ಕೋಣೆಯಲ್ಲಿರುವಾಗ ಅವರ ಅನುಮತಿ ಪಡೆದು ಪ್ರವೇಶಿಸುವುದು.
- ಮಾತಾಪಿತರ ಕೈ ಮತ್ತು ತಲೆಗಳನ್ನು ಚುಂಬಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಮತ್ತು ಮಾತಾಪಿತರಿಗೆ ಒಳಿತು ಮಾಡಬೇಕು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಆದೇಶಿಸಿದ್ದಾನೆ. ಅವರಲ್ಲೊಬ್ಬರು ಅಥವಾ ಇಬ್ಬರೂ ನಿಮ್ಮ ಉಪಸ್ಥಿತಿಯಲ್ಲಿ ವೃದ್ಧಾಪ್ಯವನ್ನು ತಲುಪಿದ್ದರೆ ಅವರೊಡನೆ “ಛೇ” ಎಂದು ಹೇಳಬೇಡಿ. ಅವರನ್ನು ಗದರಿಸಬೇಡಿ. ಅವರೊಡನೆ ಗೌರವದಿಂದ ಮಾತನಾಡಿರಿ.
ಅವರಿಬ್ಬರ ಮುಂದೆ ದಯೆಯಿಂದ ಕೂಡಿದ ವಿನಯದ ರೆಕ್ಕೆಯನ್ನು ತಗ್ಗಿಸಿ ನಿಲ್ಲಿರಿ. “ನನ್ನ ಪರಿಪಾಲಕನೇ! ಬಾಲ್ಯದಲ್ಲಿ ಇವರು ನನ್ನನ್ನು ಸಾಕಿ ಸಲಹಿದಂತೆ ಇವರಿಗೆ ದಯೆ ತೋರು” ಎಂದು ಪ್ರಾರ್ಥಿಸಿರಿ.
[ಅಲ್-ಇಸ್ರಾ:57]
ಒಂದು ಹದೀಸ್ನಲ್ಲಿ ಬಂದಿದೆ: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಜಿಹಾದ್ನಲ್ಲಿ ಭಾಗವಹಿಸಲು ಅನುಮತಿ ಕೇಳಿದರು. ಆಗ ಪ್ರವಾದಿಯವರು ಹೇಳಿದರು:
"ನಿನಗೆ ಹೆತ್ತವರಿದ್ದಾರೆಯೇ?" ಅದಕ್ಕವರು "ಹೌದು" ಎಂದರು. ಆಗ ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅವರಿಬ್ಬರಲ್ಲೇ ಜಿಹಾದ್ ಮಾಡು".
[ತಿರ್ಮಿದಿ].