Skip to content

ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?

ಕತಾದ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು:

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮಗೆ ತಿಳಿಸಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಪ್ರವಾದಿಯವರೇ! ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಅವರು ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಕತಾದ ಹೇಳುತ್ತಾರೆ: "ಖಂಡಿತ ಸಾಮರ್ಥ್ಯವಿದೆ. ನಮ್ಮ ಪರಿಪಾಲಕನ (ಅಲ್ಲಾಹನ) ಪ್ರತಿಷ್ಠೆಯ ಮೇಲಾಣೆ!"

حَدَّثَنَا ‌أَنَسُ بْنُ مَالِكٍ رَضِيَ اللهُ عَنْهُ أَنَّ رَجُلًا قَالَ: يَا نَبِيَّ اللهِ كَيْفَ يُحْشَرُ الْكَافِرُ عَلَى وَجْهِهِ؟ قَالَ: «أَلَيْسَ الَّذِي أَمْشَاهُ عَلَى الرِّجْلَيْنِ فِي الدُّنْيَا قَادِرًا عَلَى أَنْ يُمْشِيَهُ عَلَى وَجْهِهِ يَوْمَ الْقِيَامَةِ؟» قَالَ قَتَادَةُ: بَلَى وَعِزَّةِ رَبِّنَا.

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: "ಪುನರುತ್ಥಾನ ದಿನದಂದು ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಪದಗಳ ಅರ್ಥ

...:

ಹದೀಸಿನ ಪ್ರಯೋಜನಗಳು

ಪುನರುತ್ಥಾನ ದಿನದಂದು ಸತ್ಯ ನಿಷೇಧಿಗೆ ಉಂಟಾಗುವ ಅಪಮಾನವನ್ನು ಮತ್ತು ಅವನು ಮುಖದ ಮೇಲೆ ನಡೆಯುವನು ಎಂದು ಈ ಹದೀಸ್ ತಿಳಿಸುತ್ತದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (8/ 109) (6523).

ಸಹೀಹ್ ಮುಸ್ಲಿಮ್. (4/ 2161) (2806).

ಇನ್ನಷ್ಟು (4)

الإفصاح عن معاني الصحاح (5/200).

فتح الباري (11/382).

عمدة القاري شرح صحيح البخاري (23/ 105).

البحر المحيط الثجاج في شرح صحيح الإمام مسلم بن الحجاج (43/ 454).