Skip to content
ಸೂರಗಳ ಪಟ್ಟಿ /

التوبَة

التوبَة is chapter 9 of the Quran and has 129 verses. This page presents it in full in the Uthmani script, with a verse-by-verse translation of its meaning.

129 ಆಯತ್‌ಗಳು ಸೂರ ಸಂಖ್ಯೆ 9
ಆಯತ್‌ಗೆ ಹೋಗಿ
ಕನ್ನಡ · Hamza

بَرَآءَةٞ مِّنَ ٱللَّهِ وَرَسُولِهِۦٓ إِلَى ٱلَّذِينَ عَٰهَدتُّم مِّنَ ٱلۡمُشۡرِكِينَ

ಇದು ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯ ಘೋಷಣೆಯಾಗಿದೆ.

Explanation & meanings · 1
  1. ಮುಸಲ್ಮಾನರೊಡನೆ ತಾತ್ಕಾಲಿಕವಾಗಿ, ಅಥವಾ 4 ತಿಂಗಳಿಗಿಂತ ಕಡಿಮೆ, ಅಥವಾ 4 ತಿಂಗಳಿಗಿಂತ ಹೆಚ್ಚು ಅವಧಿಯ ತನಕ ಕರಾರು ಮಾಡಿಕೊಂಡಿದ್ದು ತಮ್ಮ ಕರಾರನ್ನು ಪಾಲಿಸದೆ ವಿಶ್ವಾಸದ್ರೋಹವೆಸಗಿದ ಬಹುದೇವವಿಶ್ವಾಸಿಗಳೊಡನೆ ಈ ಹೊಣೆಮುಕ್ತಿಯ ಘೋಷಣೆಯನ್ನು ಮಾಡಲಾಗಿದೆ.

فَسِيحُواْ فِي ٱلۡأَرۡضِ أَرۡبَعَةَ أَشۡهُرٖ وَٱعۡلَمُوٓاْ أَنَّكُمۡ غَيۡرُ مُعۡجِزِي ٱللَّهِ وَأَنَّ ٱللَّهَ مُخۡزِي ٱلۡكَٰفِرِينَ

ಆದ್ದರಿಂದ ನೀವು (ಬಹುದೇವವಿಶ್ವಾಸಿಗಳು) ನಾಲ್ಕು ತಿಂಗಳವರೆಗೆ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚರಿಸಿರಿ. ತಿಳಿಯಿರಿ! ಅಲ್ಲಾಹನನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಅಪಮಾನಿತರನ್ನಾಗಿ ಮಾಡುವನು.

Explanation & meanings · 1
  1. ಅವರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರ ಮೇಲೆ ಯಾವುದೇ ದಾಳಿ ಮಾಡಲಾಗುವುದಿಲ್ಲ.

وَأَذَٰنٞ مِّنَ ٱللَّهِ وَرَسُولِهِۦٓ إِلَى ٱلنَّاسِ يَوۡمَ ٱلۡحَجِّ ٱلۡأَكۡبَرِ أَنَّ ٱللَّهَ بَرِيٓءٞ مِّنَ ٱلۡمُشۡرِكِينَ وَرَسُولُهُۥۚ فَإِن تُبۡتُمۡ فَهُوَ خَيۡرٞ لَّكُمۡۖ وَإِن تَوَلَّيۡتُمۡ فَٱعۡلَمُوٓاْ أَنَّكُمۡ غَيۡرُ مُعۡجِزِي ٱللَّهِۗ وَبَشِّرِ ٱلَّذِينَ كَفَرُواْ بِعَذَابٍ أَلِيمٍ

ಇದು ಜನರಿಗೆ ಮಹಾ ಹಜ್ಜ್‌ನ ದಿನದಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಘೋಷಣೆಯಾಗಿದೆ—ಏನೆಂದರೆ ಅಲ್ಲಾಹು ಮತ್ತು ಅವರ ಸಂದೇಶವಾಹಕರು ಬಹುದೇವವಿಶ್ವಾಸಿಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ನೀವು (ಬಹುದೇವವಿಶ್ವಾಸಿಗಳು) ಪಶ್ಚಾತ್ತಾಪಪಟ್ಟರೆ ಅದು ನಿಮಗೆ ಒಳಿತಾಗಿದೆ. ನೀವು ಲೆಕ್ಕಿಸದೆ ತಿರುಗಿ ನಡೆದರೆ ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆ ನೀಡಿರಿ.

إِلَّا ٱلَّذِينَ عَٰهَدتُّم مِّنَ ٱلۡمُشۡرِكِينَ ثُمَّ لَمۡ يَنقُصُوكُمۡ شَيۡـٔٗا وَلَمۡ يُظَٰهِرُواْ عَلَيۡكُمۡ أَحَدٗا فَأَتِمُّوٓاْ إِلَيۡهِمۡ عَهۡدَهُمۡ إِلَىٰ مُدَّتِهِمۡۚ إِنَّ ٱللَّهَ يُحِبُّ ٱلۡمُتَّقِينَ

ಆದರೆ ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರು ಕರಾರು ಉಲ್ಲಂಘಿಸದಿದ್ದರೆ ಮತ್ತು ನಿಮಗೆ ವಿರುದ್ಧವಾಗಿ ನಿಮ್ಮ ಶತ್ರುಗಳಿಗೆ ಸಹಾಯ ಮಾಡದಿದ್ದರೆ ಅವರು ಇದರಿಂದ ಹೊರತಾಗಿದ್ದಾರೆ. ನೀವು ಅವರೊಡನೆ ಮಾಡಿದ ಕರಾರನ್ನು ಅವರ ಅವಧಿ ಮುಗಿಯುವವರೆಗೆ ಮುಂದುವರಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.

فَإِذَا ٱنسَلَخَ ٱلۡأَشۡهُرُ ٱلۡحُرُمُ فَٱقۡتُلُواْ ٱلۡمُشۡرِكِينَ حَيۡثُ وَجَدتُّمُوهُمۡ وَخُذُوهُمۡ وَٱحۡصُرُوهُمۡ وَٱقۡعُدُواْ لَهُمۡ كُلَّ مَرۡصَدٖۚ فَإِن تَابُواْ وَأَقَامُواْ ٱلصَّلَوٰةَ وَءَاتَوُاْ ٱلزَّكَوٰةَ فَخَلُّواْ سَبِيلَهُمۡۚ إِنَّ ٱللَّهَ غَفُورٞ رَّحِيمٞ

ಪವಿತ್ರ ತಿಂಗಳುಗಳು ಕಳೆದರೆ, ಆ ಬಹುದೇವವಿಶ್ವಾಸಿಗಳನ್ನು ಕಂಡಲ್ಲಿ ಕೊಲ್ಲಿರಿ. ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗಾಗಿ ಹೊಂಚುಹಾಕಿರಿ. ಅವರು ಪಶ್ಚಾತ್ತಾಪಪಟ್ಟು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರನ್ನು ಅವರ ದಾರಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

Explanation & meanings · 1
  1. ಅಂದರೆ ಮೇಲೆ ಸೂಚಿಸಲಾದ ನಾಲ್ಕು ತಿಂಗಳುಗಳು.