9 : 106
وَءَاخَرُونَ مُرۡجَوۡنَ لِأَمۡرِ ٱللَّهِ إِمَّا يُعَذِّبُهُمۡ وَإِمَّا يَتُوبُ عَلَيۡهِمۡۗ وَٱللَّهُ عَلِيمٌ حَكِيمٞ
ಅಲ್ಲಾಹನ ಆಜ್ಞೆ ಬರುವ ತನಕ ತೀರ್ಪನ್ನು ಕಾದಿರಿಸಲಾದ ಕೆಲವರಿದ್ದಾರೆ. ಅಲ್ಲಾಹು ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Explanation & meanings · 1
- ತಬೂಕ್ ಯುದ್ಧಕ್ಕೆ ಹೋಗದೆ ಹಿಂದೆ ಉಳಿದವರಲ್ಲಿ ಒಂದು ಗುಂಪು ಕಪಟವಿಶ್ವಾಸಿಗಳದ್ದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸತ್ಯವಿಶ್ವಾಸಿಗಳು ಯುದ್ಧದಿಂದ ಹಿಂದಿರುಗಿ ಬಂದಾಗ ಇವರು ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಂಡರು. ಆದರೆ ಯುದ್ಧಕ್ಕೆ ಹೋಗದ ಸತ್ಯವಿಶ್ವಾಸಿಗಳು ಸುಳ್ಳು ನೆಪಗಳನ್ನು ಹೇಳಲಿಲ್ಲ. ಬದಲಿಗೆ, ನಿಜವನ್ನೇ ಹೇಳಿದರು. ಆದ್ದರಿಂದ ಅವರ ತೀರ್ಪನ್ನು ಅಲ್ಲಾಹನ ಆಜ್ಞೆ ಬರುವ ತನಕ ಕಾದಿರಿಸಲಾಯಿತು.