Skip to content
التوبَة /

ಆಯತ್ 118

9 : 118

ಆಯತ್ 118 of التوبَة (9 : 118). This page carries the verse in the Uthmani script with a translation of its meaning, at a stable URL that can be cited on its own.

التوبَة ಆಯತ್‌ಗಳು 129
ಸೂರ · التوبَة
ಕನ್ನಡ · Hamza
9 : 118

وَعَلَى ٱلثَّلَٰثَةِ ٱلَّذِينَ خُلِّفُواْ حَتَّىٰٓ إِذَا ضَاقَتۡ عَلَيۡهِمُ ٱلۡأَرۡضُ بِمَا رَحُبَتۡ وَضَاقَتۡ عَلَيۡهِمۡ أَنفُسُهُمۡ وَظَنُّوٓاْ أَن لَّا مَلۡجَأَ مِنَ ٱللَّهِ إِلَّآ إِلَيۡهِ ثُمَّ تَابَ عَلَيۡهِمۡ لِيَتُوبُوٓاْۚ إِنَّ ٱللَّهَ هُوَ ٱلتَّوَّابُ ٱلرَّحِيمُ

ತೀರ್ಪು ಕಾದಿರಿಸಲಾದ ಆ ಮೂವರನ್ನೂ (ಅಲ್ಲಾಹು ಕ್ಷಮಿಸಿದ್ದಾನೆ). ಎಲ್ಲಿಯವರೆಗೆಂದರೆ, ಭೂಮಿಯು ವಿಶಾಲವಾಗಿದ್ದೂ ಸಹ ಅವರಿಗೆ ಅದು ಇಕ್ಕಟ್ಟಾದಂತೆ ತೋರಿತು, ಅವರ ಹೃದಯಗಳು ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು ಮತ್ತು ಅಲ್ಲಾಹನಿಗೆ ವಿರುದ್ಧವಾಗಿ ಅವನ ಬಳಿಯೇ ಹೊರತು ಬೇರೆ ಆಶ್ರಯವಿಲ್ಲವೆಂದು ಅವರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ಪಶ್ಚಾತ್ತಾಪಪಟ್ಟು ಮರಳುವುದಕ್ಕಾಗಿ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

Explanation & meanings · 1
  1. ತೀರ್ಪು ಕಾದಿರಿಸಲಾದವರು ಎಂದು 106ನೇ ವಚನದಲ್ಲಿ ಹೇಳಿದ್ದು ಈ ಮೂವರ ಬಗ್ಗೆ. ಅವರು ಕಅ‌ಬ್ ಬಿನ್ ಮಾಲಿಕ್, ಹಿಲಾಲ್ ಬಿನ್ ಉಮಯ್ಯಃ ಮತ್ತು ಮುರಾರ ಬಿನ್ ರಬೀಅ್. ಇವರು ತಬೂಕ್ ಯುದ್ಧಕ್ಕೆ ಹೋಗದಿರಲು ಸೂಕ್ತ ಕಾರಣಗಳೇನೂ ಇಲ್ಲದಿದ್ದರೂ ಸಹ ಹೋಗಿರಲಿಲ್ಲ.