Skip to content
ಸೂರಗಳ ಪಟ್ಟಿ /

الأنفَال

الأنفَال is chapter 8 of the Quran and has 75 verses. This page presents it in full in the Uthmani script, with a verse-by-verse translation of its meaning.

75 ಆಯತ್‌ಗಳು ಸೂರ ಸಂಖ್ಯೆ 8
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

يَسۡـَٔلُونَكَ عَنِ ٱلۡأَنفَالِۖ قُلِ ٱلۡأَنفَالُ لِلَّهِ وَٱلرَّسُولِۖ فَٱتَّقُواْ ٱللَّهَ وَأَصۡلِحُواْ ذَاتَ بَيۡنِكُمۡۖ وَأَطِيعُواْ ٱللَّهَ وَرَسُولَهُۥٓ إِن كُنتُم مُّؤۡمِنِينَ

ಅವರು ನಿಮ್ಮಲ್ಲಿ ಯುದ್ಧಾರ್ಜಿತ ಸೊತ್ತುಗಳ ಬಗ್ಗೆ ಕೇಳುತ್ತಾರೆ. ಹೇಳಿರಿ: “ಯುದ್ಧಾರ್ಜಿತ ಸೊತ್ತು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು.” ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬಂಧಗಳನ್ನು ಸುಧಾರಿಸಿರಿ. ಅಲ್ಲಾಹನನ್ನು ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.

Explanation & meanings · 2
  1. ಯುದ್ಧಾರ್ಜಿತ ಸೊತ್ತುಗಳು ಎಂದರೆ ಸತ್ಯನಿಷೇಧಿಗಳೊಡನೆ ಯುದ್ಧ ಮಾಡಿ ಗೆದ್ದಾಗ ಸಿಗುವ ಸೊತ್ತುಗಳು.
  2. ಯುದ್ಧಾರ್ಜಿತ ಸೊತ್ತುಗಳು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು. ಅವುಗಳನ್ನು ಯೋಧರು ಮನಬಂದಂತೆ ಹಂಚಿಕೊಳ್ಳುವಂತಿಲ್ಲ. ಬದಲಿಗೆ, ಅಲ್ಲಾಹು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಿಸಿದಂತೆ ಹಂಚಿಕೊಳ್ಳಬೇಕಾಗಿದೆ.

إِنَّمَا ٱلۡمُؤۡمِنُونَ ٱلَّذِينَ إِذَا ذُكِرَ ٱللَّهُ وَجِلَتۡ قُلُوبُهُمۡ وَإِذَا تُلِيَتۡ عَلَيۡهِمۡ ءَايَٰتُهُۥ زَادَتۡهُمۡ إِيمَٰنٗا وَعَلَىٰ رَبِّهِمۡ يَتَوَكَّلُونَ

ಅಲ್ಲಾಹನ ಹೆಸರು ಹೇಳಿದಾಗ ಯಾರ ಹೃದಯಗಳು ಭಯದಿಂದ ನಡುಗುತ್ತದೋ, ಅವನ ವಚನಗಳನ್ನು ಪಠಿಸಲಾದರೆ ಯಾರ ವಿಶ್ವಾಸವು ಅಧಿಕವಾಗುತ್ತದೋ ಮತ್ತು ಯಾರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುತ್ತಾರೋ ಅವರೇ ಸತ್ಯವಿಶ್ವಾಸಿಗಳು.

ٱلَّذِينَ يُقِيمُونَ ٱلصَّلَوٰةَ وَمِمَّا رَزَقۡنَٰهُمۡ يُنفِقُونَ

ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಒದಗಿಸಿದ ಧನದಿಂದ ಖರ್ಚು ಮಾಡುವವರು.

أُوْلَٰٓئِكَ هُمُ ٱلۡمُؤۡمِنُونَ حَقّٗاۚ لَّهُمۡ دَرَجَٰتٌ عِندَ رَبِّهِمۡ وَمَغۡفِرَةٞ وَرِزۡقٞ كَرِيمٞ

ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಉನ್ನತ ಸ್ಥಾನಮಾನಗಳು, ಕ್ಷಮೆ ಮತ್ತು ಗೌರವಾರ್ಹ ಉಪಜೀವನವಿದೆ.

كَمَآ أَخۡرَجَكَ رَبُّكَ مِنۢ بَيۡتِكَ بِٱلۡحَقِّ وَإِنَّ فَرِيقٗا مِّنَ ٱلۡمُؤۡمِنِينَ لَكَٰرِهُونَ

ಅದು ಹೇಗೆಂದರೆ, ನಿಮ್ಮ ಪರಿಪಾಲಕ (ಅಲ್ಲಾಹು) ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದಂತೆ. ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಲ್ಲಿ ಒಂದು ಗುಂಪಿಗೆ ಅದು ಇಷ್ಟವಿರಲಿಲ್ಲ.