Skip to content
التوبَة /

ಆಯತ್ 42

9 : 42

ಆಯತ್ 42 of التوبَة (9 : 42). This page carries the verse in the Uthmani script with a translation of its meaning, at a stable URL that can be cited on its own.

التوبَة ಆಯತ್‌ಗಳು 129
ಸೂರ · التوبَة
ಕನ್ನಡ · Hamza
9 : 42

لَوۡ كَانَ عَرَضٗا قَرِيبٗا وَسَفَرٗا قَاصِدٗا لَّٱتَّبَعُوكَ وَلَٰكِنۢ بَعُدَتۡ عَلَيۡهِمُ ٱلشُّقَّةُۚ وَسَيَحۡلِفُونَ بِٱللَّهِ لَوِ ٱسۡتَطَعۡنَا لَخَرَجۡنَا مَعَكُمۡ يُهۡلِكُونَ أَنفُسَهُمۡ وَٱللَّهُ يَعۡلَمُ إِنَّهُمۡ لَكَٰذِبُونَ

ಅದು ಸಮೀಪದ (ಸುಲಭದ) ಲಾಭವಾಗಿದ್ದರೆ ಮತ್ತು ನಿರಾಯಾಸ ಪ್ರಯಾಣವಾಗಿದ್ದರೆ ಅವರು (ಕಪಟವಿಶ್ವಾಸಿಗಳು) ನಿಮ್ಮನ್ನು ಹಿಂಬಾಲಿಸುತ್ತಿದ್ದರು. ಆದರೆ ಅವರಿಗೆ ಅದು ವಿದೂರ ಮತ್ತು ಆಯಾಸಕರವಾಗಿದೆ. “ನಮಗೆ ಸಾಮರ್ಥ್ಯವಿರುತ್ತಿದ್ದರೆ ನಾವು ನಿಮ್ಮೊಂದಿಗೆ ಹೊರಡುತ್ತಿದ್ದೆವು” ಎಂದು ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಅವರು ಅವರನ್ನೇ ನಾಶ ಮಾಡುತ್ತಿದ್ದಾರೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆಂದು ಅಲ್ಲಾಹನಿಗೆ ತಿಳಿದಿದೆ.

Explanation & meanings · 1
  1. ಯುದ್ಧಕ್ಕೆ ಹೋಗದಿರಲು ವಿನಾಯಿತಿಯಿರುವವರ ಹೊರತು ಉಳಿದವರೆಲ್ಲರೂ ತಬೂಕ್ ಯುದ್ಧಕ್ಕೆ ಹೊರಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶ ಹೊರಡಿಸಿದಾಗ, ಕಪಟವಿಶ್ವಾಸಿಗಳು ಸುಳ್ಳು ನೆಪಗಳನ್ನು ಹೇಳಿ ಯುದ್ಧದಿಂದ ತಪ್ಪಿಸಿಕೊಂಡರು. ಇಲ್ಲಿಂದ ಮುಂದಕ್ಕೆ ಆ ಕಪಟವಿಶ್ವಾಸಿಗಳ ಬಗ್ಗೆ ವಿವರಿಸಲಾಗಿದೆ.