Skip to content
التوبَة /

ಆಯತ್ 28

9 : 28
التوبَة ಆಯತ್‌ಗಳು 129
ಸೂರ · التوبَة
ಕನ್ನಡ · Hamza
9 : 28

يَٰٓأَيُّهَا ٱلَّذِينَ ءَامَنُوٓاْ إِنَّمَا ٱلۡمُشۡرِكُونَ نَجَسٞ فَلَا يَقۡرَبُواْ ٱلۡمَسۡجِدَ ٱلۡحَرَامَ بَعۡدَ عَامِهِمۡ هَٰذَاۚ وَإِنۡ خِفۡتُمۡ عَيۡلَةٗ فَسَوۡفَ يُغۡنِيكُمُ ٱللَّهُ مِن فَضۡلِهِۦٓ إِن شَآءَۚ إِنَّ ٱللَّهَ عَلِيمٌ حَكِيمٞ

ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಬಹುದೇವವಿಶ್ವಾಸಿಗಳು ಅಶುದ್ಧರಾಗಿದ್ದಾರೆ. ಆದ್ದರಿಂದ ಈ ವರ್ಷದ ಬಳಿಕ ಅವರು ಪವಿತ್ರ ಮಸೀದಿಯ ಸಮೀಪಕ್ಕೂ ಬರದಿರಲಿ. ನಿಮಗೆ ಬಡತನದ ಬಗ್ಗೆ ಆತಂಕವಿದ್ದರೆ, ಅಲ್ಲಾಹು ಇಚ್ಛಿಸಿದರೆ ಸದ್ಯವೇ ಅವನು ತನ್ನ ಔದಾರ್ಯದಿಂದ ನಿಮ್ಮನ್ನು ಧನಿಕರನ್ನಾಗಿ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

Explanation & meanings · 2
  1. ಅಶುದ್ಧರು ಎಂದರೆ ದೈಹಿಕವಾಗಿ ಅಶುದ್ಧರು ಎಂದಲ್ಲ. ಬದಲಿಗೆ, ಅವರ ನಂಬಿಕೆಗಳು ಮತ್ತು ಕರ್ಮಗಳು ಅಶುದ್ಧವಾಗಿವೆ ಎಂದರ್ಥ.
  2. ಬಹುದೇವವಿಶ್ವಾಸಿಗಳು ಹಜ್ಜ್ ನಿರ್ವಹಿಸಲು ಮಕ್ಕಾಗೆ ಬರದಿದ್ದರೆ ತಮ್ಮ ವ್ಯಾಪಾರಕ್ಕೆ ಕುಂದುಂಟಾಗಬಹುದೆಂದು ಕೆಲವು ಮುಸ್ಲಿಮರು ಆತಂಕಗೊಂಡಿದ್ದರು.