9 : 1
بَرَآءَةٞ مِّنَ ٱللَّهِ وَرَسُولِهِۦٓ إِلَى ٱلَّذِينَ عَٰهَدتُّم مِّنَ ٱلۡمُشۡرِكِينَ
ಇದು ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯ ಘೋಷಣೆಯಾಗಿದೆ.
Explanation & meanings · 1
- ಮುಸಲ್ಮಾನರೊಡನೆ ತಾತ್ಕಾಲಿಕವಾಗಿ, ಅಥವಾ 4 ತಿಂಗಳಿಗಿಂತ ಕಡಿಮೆ, ಅಥವಾ 4 ತಿಂಗಳಿಗಿಂತ ಹೆಚ್ಚು ಅವಧಿಯ ತನಕ ಕರಾರು ಮಾಡಿಕೊಂಡಿದ್ದು ತಮ್ಮ ಕರಾರನ್ನು ಪಾಲಿಸದೆ ವಿಶ್ವಾಸದ್ರೋಹವೆಸಗಿದ ಬಹುದೇವವಿಶ್ವಾಸಿಗಳೊಡನೆ ಈ ಹೊಣೆಮುಕ್ತಿಯ ಘೋಷಣೆಯನ್ನು ಮಾಡಲಾಗಿದೆ.