Skip to content
التوبَة /

ಆಯತ್ 66

9 : 66

ಆಯತ್ 66 of التوبَة (9 : 66). This page carries the verse in the Uthmani script with a translation of its meaning, at a stable URL that can be cited on its own.

التوبَة ಆಯತ್‌ಗಳು 129
ಸೂರ · التوبَة
ಕನ್ನಡ · Hamza
9 : 66

لَا تَعۡتَذِرُواْ قَدۡ كَفَرۡتُم بَعۡدَ إِيمَٰنِكُمۡۚ إِن نَّعۡفُ عَن طَآئِفَةٖ مِّنكُمۡ نُعَذِّبۡ طَآئِفَةَۢ بِأَنَّهُمۡ كَانُواْ مُجۡرِمِينَ

ನೆಪಗಳನ್ನು ಹೇಳಬೇಡಿ. ಸತ್ಯವಿಶ್ವಾಸಿಗಳಾದ ಬಳಿಕ ನೀವು ಸತ್ಯನಿಷೇಧಿಗಳಾಗಿದ್ದೀರಿ. ನಿಮ್ಮಲ್ಲಿ ಒಂದು ಗುಂಪನ್ನು ನಾವು ಕ್ಷಮಿಸಿದರೆ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು. ಅದೇಕೆಂದರೆ ಅವರು ಅಪರಾಧಿಗಳಾಗಿದ್ದಾರೆ.”

Explanation & meanings · 1
  1. ಕಪಟವಿಶ್ವಾಸಿಗಳು ಅಲ್ಲಾಹನನ್ನು, ಅವನ ವಚನಗಳನ್ನು ಮತ್ತು ಸಂದೇಶವಾಹಕರನ್ನು ತಮಾಷೆ ಮಾಡುತ್ತಿದ್ದರು. ಇದು ಸತ್ಯವಿಶ್ವಾಸಿಗಳ ಕಿವಿಗೆ ಬಿದ್ದು ನಂತರ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿದಾಗ ಅವರು ಕಪಟವಿಶ್ವಾಸಿಗಳನ್ನು ಕರೆದು ವಿಚಾರಿಸುತ್ತಿದ್ದರು. ಆಗ ಅವರು ಮೊದಮೊದಲು ನಿರಾಕರಿಸಿದರೂ, ಸಾಕ್ಷ್ಯವನ್ನು ತೋರಿಸಿದಾಗ ಅದನ್ನು ಒಪ್ಪಿಕೊಂಡು, “ನಾವು ಕೇವಲ ಕಾಲಹರಣ ಮಾಡಲು ತಮಾಷೆ ಹೇಳುತ್ತಿದ್ದೆವು” ಎಂದು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದರು. ಅಲ್ಲಾಹು, ಕುರ್‌ಆನ್ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಹೇಳನ ಮಾಡುವುದು, ಅವರ ಬಗ್ಗೆ ತಿರಸ್ಕಾರದಿಂದ ಮಾತನಾಡುವುದು ಸತ್ಯನಿಷೇಧವೆಂದು ಈ ವಚನದಲ್ಲಿ ತಿಳಿಸಲಾಗಿದೆ.