Skip to content
التوبَة /

ಆಯತ್ 37

9 : 37

ಆಯತ್ 37 of التوبَة (9 : 37). This page carries the verse in the Uthmani script with a translation of its meaning, at a stable URL that can be cited on its own.

التوبَة ಆಯತ್‌ಗಳು 129
ಸೂರ · التوبَة
ಕನ್ನಡ · Hamza
9 : 37

إِنَّمَا ٱلنَّسِيٓءُ زِيَادَةٞ فِي ٱلۡكُفۡرِۖ يُضَلُّ بِهِ ٱلَّذِينَ كَفَرُواْ يُحِلُّونَهُۥ عَامٗا وَيُحَرِّمُونَهُۥ عَامٗا لِّيُوَاطِـُٔواْ عِدَّةَ مَا حَرَّمَ ٱللَّهُ فَيُحِلُّواْ مَا حَرَّمَ ٱللَّهُۚ زُيِّنَ لَهُمۡ سُوٓءُ أَعۡمَٰلِهِمۡۗ وَٱللَّهُ لَا يَهۡدِي ٱلۡقَوۡمَ ٱلۡكَٰفِرِينَ

ನಿಶ್ಚಯವಾಗಿಯೂ ನಸೀ (ಪವಿತ್ರ ತಿಂಗಳುಗಳನ್ನು ಹಿಂದೆ-ಮುಂದೆ ಮಾಡುವುದು) ಸತ್ಯನಿಷೇಧದಲ್ಲಿರುವ ಹೆಚ್ಚಳವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಇನ್ನೂ ಹೆಚ್ಚು ದಾರಿತಪ್ಪಿಸಲಾಗುತ್ತಿದೆ. ಒಂದು ವರ್ಷ ಅವರು ಅದನ್ನು (ಪವಿತ್ರ ತಿಂಗಳನ್ನು) ಪವಿತ್ರವಲ್ಲ ಎನ್ನುತ್ತಾರೆ ಮತ್ತು ಇನ್ನೊಂದು ವರ್ಷ ಪವಿತ್ರ ಎನ್ನುತ್ತಾರೆ. ಹೀಗೆ ಅವರು ಅಲ್ಲಾಹು ಪವಿತ್ರಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಸರಿಹೊಂದಿಸಿ ಅಲ್ಲಾಹು ನಿಷೇಧಿಸಿದ್ದನ್ನು ಅನುಮತಿಸುತ್ತಾರೆ. ಅವರ ದುಷ್ಕರ್ಮಗಳನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

Explanation & meanings · 1
  1. ಇಸ್ಲಾಮೀ ಪೂರ್ವಕಾಲದಲ್ಲಿ ಅರಬ್ಬರು ವರ್ಷದಲ್ಲಿ ನಾಲ್ಕು ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿದ್ದರು. ಆ ತಿಂಗಳುಗಳಲ್ಲಿ ಅವರು ಯುದ್ಧ ಮಾಡುತ್ತಿರಲಿಲ್ಲ. ಆದರೆ ಪ್ರತಿ ವರ್ಷವೂ ಅವರು ಅದೇ ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ. ಬದಲಿಗೆ, ತಮಗೆ ಹೊಂದಿಕೆಯಾಗುವಂತೆ ಅವುಗಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಒಂದು ವರ್ಷ ಅವರು ಮುಹರ್‍ರಂ ತಿಂಗಳನ್ನು ಪವಿತ್ರವೆಂದು ಪರಿಗಣಿಸಿದರೆ ಇನ್ನೊಂದು ವರ್ಷ ಅದು ಅವರಿಗೆ ಹೊಂದಿಕೆಯಾಗದಿದ್ದರೆ ಅದನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ.