Skip to content

ನೀವು ಹೇಗೆ ವುದೂ ಮಾಡುತ್ತೀರಿ?

الباب / الفصل
قسم الفقه

السؤال

س4: كيف تتوضأ؟

ಪ್ರಶ್ನೆ4. ನೀವು ಹೇಗೆ ವುದೂ ಮಾಡುತ್ತೀರಿ?

الجواب

ج:بغسل الكفين ثلاثًا.

والمضمضة والاستنشاق والاستنثار ثلاثًا.

  • والمضمضة: جعل الماء في الفم ومجه وطرحه.
  • والاستنشاق: جذب الماء بالهواء إلى داخل الأنف بيمينه.
  • والاستنثار: وهو إخراج الماء من الأنف بعد الاستنشاق بيساره.
  • ثم غسل الوجه ثلاثًا.
  • ثم غسل اليدين إلى المرفقين ثلاثًا.
  • ثم مسح الرأس تقبل بيديك وتدبر، وتمسح الأذنين.
  • ثم غسل الرجلين إلى الكعبين ثلاثًا.

هذا هو الأكمل، وقد ثبت ذلك عن النبي ﷺ في أحاديث في البخاري ومسلم، رواها عنه عثمان وعبد الله بن زيد وغيرهما،

وقد ثبت أيضًا عنه في البخاري وغيره:

«أنه توضأ مرة مرة، وأنه توضأ مرتين مرتين» بمعنى: أنه يغسل كل عضو من أعضاء الوضوء مرة، أو مرتين.

ಉತ್ತರ: ಕೈಗಳನ್ನು ಮೂರು ಬಾರಿ ತೊಳೆಯುವುದು.

ಮೂರು ಬಾರಿ ಬಾಯಿಯನ್ನು ಮುಕ್ಕಳಿಸುವುದು ಮತ್ತು ಮೂಗಿನೊಳಗೆ ನೀರನ್ನು ಎಳೆದು ಹೊರಬಿಡುವುದು.

ಬಾಯಿ ಮುಕ್ಕಳಿಸುವುದು ಎಂದರೆ ಬಾಯಿಯಲ್ಲಿ ನೀರು ಹಾಕಿ ಚೆನ್ನಾಗಿ ಅಲ್ಲಾಡಿಸಿ ಹೊರಹಾಕುವುದು.

ಮೂಗಿಗೆ ನೀರೆಳೆಯುವುದು ಎಂದರೆ ಬಲಗೈಯಿಂದ ಮೂಗಿನೊಳಗೆ ಶ್ವಾಸದೊಂದಿಗೆ ನೀರನ್ನು ಎಳೆಯುವುದು.

ಮೂಗಿನಿಂದ ನೀರು ಹೊರಬಿಡುವುದು ಎಂದರೆ ಎಡಗೈಯಿಂದ ಮೂಗನ್ನು ಹಿಡಿದು ಬಲವಾಗಿ ಮೂಗಿನಿಂದ ನೀರನ್ನು ಹೊರಹಾಕುವುದು.

ನಂತರ ಮುಖವನ್ನು ಮೂರು ಬಾರಿ ತೊಳೆಯುವುದು.

ನಂತರ ಕೈಗಳನ್ನು ಮೊಣಕೈಗಳವರೆಗೆ ಮೂರು ಬಾರಿ ತೊಳೆಯುವುದು.

ನಂತರ ಎರಡು ಕೈಗಳಿಂದ ತಲೆಯ ಮುಂಬದಿಯಿಂದ ಹಿಂಬದಿಯವರೆಗೆ ಮತ್ತು ಅಲ್ಲಿಂದ ಮುಂಬದಿಯವರೆಗೆ ಸವರುವುದು ಮತ್ತು ಕಿವಿಗಳನ್ನು ಸವರುವುದು.

ನಂತರ ಕಾಲುಗಳನ್ನು ಹರಡುಗಂಟುಗಳವರೆಗೆ ಮೂರು ಬಾರಿ ತೊಳೆಯುವುದು.

ಇದು ವುದೂ ಮಾಡುವ ಸಂಪೂರ್ಣ ವಿಧಾನ ವಾಗಿದೆ. ಪ್ರವಾದಿﷺ ರಿಂದ ವರದಿಯಾದ ಈ ವಿಧಾನವು ಬುಖಾರಿ ಮತ್ತು ಮುಸ್ಲಿಂನ ಹದೀಸ್‌ಗಳಲ್ಲಿ ಸಾಬೀತಾಗಿದೆ. ಉಸ್ಮಾನ್, ಅಬ್ದುಲ್ಲಾ ಬಿನ್ ಝೈದ್ ಮತ್ತು ಇತರರು ಇದನ್ನು ವರದಿ ಮಾಡಿದ್ದಾರೆ.

ಅದೇ ರೀತಿ ಈ ಕೆಳಗಿನ ವಿಧಾನವು ಕೂಡ ಪ್ರವಾದಿ(ಸ) ರಿಂದ ಬುಖಾರಿ ಮತ್ತು ಇತರ ಹದೀಸ್ ಗ್ರಂಥಗಳಲ್ಲೂ ಸಾಬೀತಾಗಿದೆ: "ಅವರು ಒಂದೊಂದು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅವರು ಎರಡೆರಡು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅಂದರೆ ಅವರು ವುದೂವಿನ ಪ್ರತಿಯೊಂದು ಅಂಗಗಳನ್ನು ಒಂದು ಅಥವಾ ಎರಡು ಬಾರಿ ತೊಳೆದರು.

ಉತ್ತರ: ಕೈಗಳನ್ನು ಮೂರು ಬಾರಿ ತೊಳೆಯುವುದರಿಂದ.

  • ನಂತರ ಕಾಲುಗಳನ್ನು ಹರಡುಗಂಟುಗಳವರೆಗೆ ಮೂರು ಬಾರಿ ತೊಳೆಯುವುದು.

ಅದೇ ರೀತಿ ಪ್ರವಾದಿ(ಸ) ರಿಂದ ಬುಖಾರಿ ಮತ್ತು ಇತರ ಹದೀಸ್ ಗ್ರಂಥಗಳಲ್ಲೂ ಕೂಡ ಸಾಬೀತಾಗಿದೆ:

"ಅವರು ಒಂದೊಂದು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅವರು ಎರಡೆರಡು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅಂದರೆ ಅವರು ವುದೂವಿನ ಪ್ರತಿಯೊಂದು ಅಂಗಗಳನ್ನು ಒಂದು ಅಥವಾ ಎರಡು ಬಾರಿ ತೊಳೆದರು."