Skip to content

ವುದೂವಿನ ಕಡ್ಡಾಯಗಳು ಎಂದರೇನು? ಅವು ಎಷ್ಟಿವೆ?

الباب / الفصل
قسم الفقه

السؤال

س5: ما هي فرائض الوضوء، وعددها؟

ಪ್ರಶ್ನೆ 5. ವುದೂವಿನ ಕಡ್ಡಾಯಗಳು ಎಂದರೇನು? ಅವು ಎಷ್ಟಿವೆ?

الجواب

ج:هي التي لا يصح وضوء المسلم إذا ترك واحدة منها.

  1. غسل الوجه، ومنه المضمضة والاستنشاق.
  2. غسل اليدين إلى المرفقين.
  3. مسح الرأس ومنه الأذنين.
  4. غسل الرجلين إلى الكعبين.
  5. الترتيب بين الأعضاء، بأن يغسل الوجه، ثم اليدين، ثم مسح الرأس، ثم غسل الرجلين.

قال تعالى:

﴿يَٰٓأَيُّهَا ٱلَّذِينَ ءَامَنُوٓاْ إِذَا قُمۡتُمۡ إِلَى ٱلصَّلَوٰةِ فَٱغۡسِلُواْ وُجُوهَكُمۡ وَأَيۡدِيَكُمۡ إِلَى ٱلۡمَرَافِقِ وَٱمۡسَحُواْ بِرُءُوسِكُمۡ وَأَرۡجُلَكُمۡ إِلَى ٱلۡكَعۡبَيۡنِۚ﴾

[المائدة: ٦].

  1. الموالاة: وهي الوضوء في وقت متواصل، دون فاصل من الوقت حتى تجف الأعضاء من الماء.

كأن يتوضأ نصف وضوء، ويكمل في وقت آخر، فلا يصح وضُوؤُه.

لحديث:

«أن النبي صلى الله عليه وسلم رأى رجلًا يصلي وفي ظهر قدمه لمعة قدر الدرهم، لم يصبها الماء، فأمره النبي صلى الله عليه وسلم أن يعيد الوضوء والصلاة»

رواه أبو داود.

ಉತ್ತರ: ಯಾವುದನ್ನು ನಿರ್ವಹಿಸದಿದ್ದರೆ ವುದೂ ಅಸಿಂಧುವಾಗುತ್ತದೋ ಅವುಗಳನ್ನು ವುದೂವಿನ ಕಡ್ಡಾಯಗಳು ಎನ್ನಲಾಗುತ್ತದೆ.

  1. ಮುಖವನ್ನು ತೊಳೆಯುವುದು. ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರು ಎಳೆಯುವುದು ಇದರಲ್ಲಿ ಸೇರುತ್ತದೆ.
  2. ಮೊಣಕೈಗಳವರೆಗೆ ಕೈಗಳನ್ನು ತೊಳೆಯುವುದು.
  3. ತಲೆಯನ್ನು ಸವರುವುದು. ಎರಡು ಕಿವಿಗಳನ್ನು ಸವರುವುದು ಕೂಡ ಇದರಲ್ಲಿ ಸೇರುತ್ತದೆ.
  4. ಕಾಲುಗಳನ್ನು ಹರಡುಗಂಟುಗಳವರೆಗೆ ತೊಳೆಯುವುದು.
  5. ಅಂಗಾಂಗಗಳನ್ನು ಕ್ರಮಪ್ರಕಾರ ತೊಳೆಯುವುದು. ಅಂದರೆ ಮುಖ, ನಂತರ ಕೈ, ನಂತರ ತಲೆ ಸವರುವುದು, ನಂತರ ಕಾಲುಗಳನ್ನು ತೊಳೆಯುವುದು.
  6. ಅಲ್-ಮುವಾಲತ್: ಅಂದರೆ ವುದೂವನ್ನು ನಿರಂತರವಾಗಿ ನಿರ್ವಹಿಸುವುದು. ಅಂಗಾಂಗಗಳ ನೀರು ಒಣಗುವ ತನಕ ಅವುಗಳ ಮಧ್ಯೆ ತಡ ಮಾಡದಿರುವುದು.
  • ಅಂದರೆ ಅರ್ಧ ವುದೂ ನಿರ್ವಹಿಸಿ ಸ್ವಲ್ಪ ಸಮಯದ ನಂತರ ಅದನ್ನು ಮುಂದುವರಿಸಿದರೆ, ಆ ವುದೂ ಸಿಂಧುವಾಗುವುದಿಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್‍ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಎರಡು ಕೈಗಳನ್ನು ತೊಳೆಯಿರಿ, ತಲೆಗಳನ್ನು ಸವರಿರಿ ಮತ್ತು ಎರಡು ಕಾಲುಗಳನ್ನು ಹರಡುಗಂಟಿನ ತನಕ ತೊಳೆಯಿರಿ.

(ಸೂರಃ ಅಲ್‌ಮಾಇದಃ: 6)

ಅಂದರೆ ಅರ್ಧ ವುದೂ ನಿರ್ವಹಿಸಿ ಸ್ವಲ್ಪ ಸಮಯದ ನಂತರ ಅದನ್ನು ಮುಂದುವರಿಸಿದರೆ, ಆ ವುದೂ ಸಿಂಧುವಾಗುವುದಿಲ್ಲ.

ಹದೀಸ್:

«ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುತ್ತಿದ್ದ ಒಬ್ಬ ವ್ಯಕ್ತಿಯ ಪಾದದ ಮೇಲ್ಭಾಗದಲ್ಲಿ ದಿರ್ಹಮ್ ಗಾತ್ರದಷ್ಟು ಸ್ಥಳಕ್ಕೆ ನೀರು ತಾಗಿರದೆ ಉಳಿದಿರುವುದನ್ನು ಕಂಡು, ಆತನಿಗೆ ವುದೂ ಮತ್ತು ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು»

[ಅಬೂದಾವೂದ್].