Skip to content

ಒಬ್ಬಳು ಮಹಿಳೆ ತನ್ನ ಮುಟ್ಟಿನ ಅವಧಿಯಲ್ಲಿ ಒಂದು ದಿನ ರಕ್ತವನ್ನು ಕಂಡು, ಅದರ ನಂತರದ ದಿನವಿಡೀ ರಕ್ತವನ್ನು ಕಾಣದಿದ್ದರೆ, ಅವಳು ಏನು ಮಾಡಬೇಕು?

السؤال

ಪ್ರಶ್ನೆ 1.

ಒಬ್ಬಳು ಮಹಿಳೆ ತನ್ನ ಮುಟ್ಟಿನ ಅವಧಿಯಲ್ಲಿ ಒಂದು ದಿನ ರಕ್ತವನ್ನು ಕಂಡು, ಅದರ ನಂತರದ ದಿನವಿಡೀ ರಕ್ತವನ್ನು ಕಾಣದಿದ್ದರೆ, ಅವಳು ಏನು ಮಾಡಬೇಕು?

س15: إذا رأت المرأة في زمن عادتها يومًا دمًا، والذي يليه لا ترى الدم طيلة النهار، فماذا عليها أن تفعل؟

الجواب

ಉತ್ತರ 1.

ಬಾಹ್ಯವಾಗಿ ನೋಡುವಾಗ, ಮುಟ್ಟಿನ ಅವಧಿಯಲ್ಲಿ ರಕ್ತವು ಸ್ರವಿಸದ ಅಥವಾ ಅವಳು ಒಣಗುವಿಕೆಯನ್ನು ಅನುಭವಿಸುವ ಈ ಸಮಯವು ಮುಟ್ಟಿಗೆ ಸಂಬಂಧಿಸಿದ ಅವಧಿಯ ಭಾಗವಾಗಿದ್ದು, ಅದನ್ನು ಶುದ್ಧಿಯೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಮುಟ್ಟಿನಲ್ಲಿರುವ ಮಹಿಳೆಯು ದೂರವಿರುವ ಎಲ್ಲಾ ಸಂಗತಿಗಳಿಂದ ಇವಳೂ ದೂರವಿರಬೇಕು.

ಕೆಲವು ವಿದ್ವಾಂಸರು ಹೇಳುವ ಪ್ರಕಾರ, ಮಹಿಳೆ ಒಂದು ದಿನ ರಕ್ತವನ್ನು ಕಂಡು ಮರುದಿನ ರಕ್ತವನ್ನು ಕಾಣದಿದ್ದರೆ, ಅವಳು 15 ದಿನಗಳ ತನಕ ರಕ್ತವು ಕಾಣುವ ದಿನವನ್ನು ಮುಟ್ಟಿನ ಅವಧಿಯೆಂದು ಮತ್ತು ರಕ್ತವು ಕಾಣದ ದಿನವನ್ನು ಶುದ್ಧಿಯ ಅವಧಿಯೆಂದು ಪರಿಗಣಿಸಬೇಕು.

15 ದಿನಗಳ ತನಕವೂ ಹೀಗೆಯೇ ಸಂಭವಿಸಿದರೆ, ಅದರ ನಂತರದ ದಿನಗಳಲ್ಲಿ ಕಾಣುವ ರಕ್ತವು ರಕ್ತಸ್ರಾವವಾಗಿದೆ. ಇದು ಇಮಾಂ ಅಹ್ಮದ್ ಬಿನ್ ಹಂಬಲ್‌ರ ಪ್ರಸಿದ್ಧ ಅಭಿಪ್ರಾಯವಾಗಿದೆ. ಅವರಿಗೆ ಅಲ್ಲಾಹು ದಯೆ ತೋರಲಿ.

ﺟ15: الظاهر أن هذا الطّهر أو اليبوسة التي حصلت لها في أيام حيضها تابعٌ للحيض، فلا يعتبر طهرًا، وعلى هذا فتبقى ممتنعةً ممّا تمتنع منه الحائض.

وقال بعض أهل العلم: من كانت ترى يومًا دمًا، ويومًا نقاءً، فالدم حيضٌ، والنقاء طهرٌ حتى يصل إلى خمسة عشر يومًا،

فإذا وصل إلى خمسة عشر يومًا صار ما بعده دم استحاضةٍ. وهذا هو المشهور من مذهب الإمام أحمد بن حنبلٍ رحمه الله.