ರಮದಾನ್ ತಿಂಗಳಲ್ಲಿ ಗರ್ಭಿಣಿಗೆ ರಕ್ತಸ್ರಾವವಾದರೆ, ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುತ್ತದೆಯೇ?
السؤال
ಪ್ರಶ್ನೆ 1.
ರಮದಾನ್ ತಿಂಗಳಲ್ಲಿ ಗರ್ಭಿಣಿಗೆ ರಕ್ತಸ್ರಾವವಾದರೆ, ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುತ್ತದೆಯೇ?
س14: نزول الدم من الحامل في نهار رمضان، هل يؤثّر على صومها؟
الجواب
ಉತ್ತರ 1.
ಮಹಿಳೆ ಉಪವಾಸದಲ್ಲಿರುವಾಗ ಅವಳಿಗೆ ಮುಟ್ಟಿನ ರಕ್ತವು ಸ್ರವಿಸಿದರೆ, ಅವಳ ಉಪವಾಸವು ಅಸಿಂಧುವಾಗುತ್ತದೆ. ಏಕೆಂದರೆ, ಪ್ರವಾದಿ(ಸ) ರವರು ಹೇಳುತ್ತಾರೆ:
“ಮಹಿಳೆಗೆ ಮುಟ್ಟಾದರೆ ಅವಳು ನಮಾಝ್ ಮತ್ತು ಉಪವಾಸ ತೊರೆಯುತ್ತಾಳಲ್ಲವೇ?”
ಆದ್ದರಿಂದ ನಾವು ಆ ರಕ್ತವನ್ನು ಉಪವಾಸ ಅಸಿಂಧುಗೊಳಿಸುವ ವಿಷಯಗಳಲ್ಲಿ ಒಂದೆಂದು ಪರಿಗಣಿಸುತ್ತೇವೆ. ಪ್ರಸವಾನಂತರದ ರಕ್ತದ ಸ್ಥಿತಿಯೂ ಇದೇ. ಮುಟ್ಟಿನ ರಕ್ತ ಅಥವಾ ಪ್ರಸವಾನಂತರದ ರಕ್ತವು ಸ್ರವಿಸುವುದರಿಂದ ಉಪವಾಸವು ಅಸಿಂಧುವಾಗುತ್ತದೆ.
ರಮದಾನ್ ತಿಂಗಳಲ್ಲಿ ಗರ್ಭಿಣಿಯಿಂದ ಸ್ರವಿಸುವ ರಕ್ತವು ಮುಟ್ಟಿನ ರಕ್ತವಾಗಿದ್ದರೆ ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದು ಮುಟ್ಟಿನ ರಕ್ತವಲ್ಲದಿದ್ದರೆ ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುವುದಿಲ್ಲ.
ಗರ್ಭಿಣಿಗೆ ಉಂಟಾಗಬಹುದಾದ ಮುಟ್ಟು, ಒಂದೋ ಗರ್ಭಧಾರಣೆಯಿಂದ ತೊಡಗಿ ಅವಳ ಮುಟ್ಟಿನ ಅವಧಿಗಳಲ್ಲಿ ನಿರಂತರ ಉಂಟಾಗುವ ಮುಟ್ಟಿನ ರಕ್ತವಾಗಿರಬಹುದು. ಪ್ರಬಲ ಅಭಿಪ್ರಾಯದ ಪ್ರಕಾರ ಇದು ಮುಟ್ಟಿನ ರಕ್ತವಾಗಿದ್ದು ಮುಟ್ಟಿಗೆ ಸಂಬಂಧಿಸಿದ ನಿಯಮಗಳು ಇದಕ್ಕೆ ಅನ್ವಯವಾಗುತ್ತವೆ.
ಆದರೆ ಅವಳ ಮುಟ್ಟು ನಿಂತು, ನಂತರ ಅವಳು ಸಾಮಾನ್ಯವಾಗಿ ಸ್ರವಿಸುವ ರಕ್ತವಲ್ಲದ ಬೇರೆ ರಕ್ತವನ್ನು ಕಂಡರೆ, ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅದು ಮುಟ್ಟಿನ ರಕ್ತವಲ್ಲ.
ﺟ14: إذا خرج دم الحيض والأنثى صائمةٌ فإن صومها يفسد؛ لقول النبيّ ﷺ:
«أَلَيْسَ إِذَا حَاضَتْ لَمْ تُصَلِّ، وَلَمْ تَصُمْ؟» [1]
ولهذا نعدّه من المفطّرات، والنّفاس مثله، وخروج دم الحيض والنّفاس مفسدٌ للصوم.
[3] البخاري، كتاب الصوم، باب الحائض تترك الصوم والصلاة (1951).
ونزول الدم من الحامل في نهار رمضان إذا كان حيضًا فإنه كحيض غير الحامل، أي: يؤثّر على صومها، وإن لم يكن حيضًا فإنه لا يؤثّر.
والحيض الّذي يمكن أن يقع من الحامل هو أن يكون حيضًا مطردًا لم ينقطع عنها منذ حملت، بل كان يأتيها في أوقاتها المعتادة، فهذا حيضٌ على القول الراجح، يثبت له أحكام الحيض.
أما إذا انقطع الدم عنها، ثم صارت بعد ذلك ترى دمًا ليس هو الدم المعتاد، فإن هذا لا يؤثّر على صيامها؛ لأنه ليس بحيضٍ.