Skip to content

ದಯಾಗುಣದ ರೂಪಗಳು ಯಾವುವು?

الباب / الفصل
قسم الأخلاق

السؤال

س١٤: ما صور خُلق الرحمة؟

ಪ್ರಶ್ನೆ 14. ದಯಾಗುಣದ ರೂಪಗಳು ಯಾವುವು?

الجواب

ج:- رحمة كبار السن وتوقيرهم.

  • رحمة صغار السن والأطفال.

في الحديث:

«لَيْسَ مِنَّا مَنْ لَمْ يُوَقِّرْ كَبِيرَنَا، وَيَرْحَمْ صَغِيرَنَا»

رواه أحمد.

  • رحمة الفقير والمسكين والمحتاج.
  • رحمة الحيوان بأن تطعمه ولا تؤذيه.

من ذلك قول النبي عَلَيْهِ الصَّلَاةُ وَالسَّلَامُ:

«تَرَى المُؤْمِنينَ في تَراحُمِهِم وتَوادِّهِم وتَعاطُفِهِم كمَثَلِ الجَسَدِ، إذا اشتَكَى عُضْوٌ تَداعَى لهُ سائِرُ جَسَدِهِ بالسَّهَرِ والحُمَّى»

متفق عليه.

  • وقال رسولُ اللهِ ﷺ:

«الرَّاحِمونَ يَرحَمُهُمُ الرَّحمنُ، ارْحَمُوا أهْلَ الأَرضِ، يَرحَمُكُمْ مَن في السَّماءِ»

رواه أبو داود والترمذي.

ಉತ್ತರ: - ಹಿರಿಯ ವಯಸ್ಸಿನವರಿಗೆ ದಯೆ ತೋರುವುದು ಮತ್ತು ಗೌರವಿಸುವುದು.

  • ಕಿರಿಯ ವಯಸ್ಸಿನವರಿಗೆ ಮತ್ತು ಮಕ್ಕಳಿಗೆ ದಯೆ ತೋರುವುದು.

ಹದೀಸ್‌ನಲ್ಲಿ ಹೀಗಿದೆ:

"ನಮ್ಮ ಹಿರಿಯರನ್ನು ಗೌರವಿಸದವರು ಮತ್ತು ನಮ್ಮ ಕಿರಿಯರಿಗೆ ದಯೆ ತೋರದವರು ನಮ್ಮಲ್ಲಿ ಸೇರಿದವರಲ್ಲ."

[ಅಹ್ಮದ್].

  • ಬಡವರಿಗೆ, ನಿರ್ಗತಿಕರಿಗೆ ಮತ್ತು ಅಗತ್ಯವುಳ್ಳವರಿಗೆ ದಯೆ ತೋರುವುದು.
  • ಪ್ರಾಣಿಗಳಿಗೆ ದಯೆ ತೋರುವುದು. ಅಂದರೆ ಅವುಗಳಿಗೆ ತಿನ್ನಲು ಕೊಡುವುದು ಮತ್ತು ಅವುಗಳಿಗೆ ಕಿರುಕುಳ ಕೊಡದಿರುವುದು.

ಅವುಗಳಲ್ಲೊಂದು ಪ್ರವಾದಿ ﷺ ರವರು ಹೇಳಿದ ಈ ವಚನ:

“ಪರಸ್ಪರ ದಯೆ ತೋರುವುದರಲ್ಲಿ, ಪರಸ್ಪರ ಪ್ರೀತಿಸುವುದರಲ್ಲಿ ಮತ್ತು ಪರಸ್ಪರ ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗಕ್ಕೆ ನೋವಾದರೆ ಸಂಪೂರ್ಣ ದೇಹವು ನಿದ್ದೆಗೆಡುವಿಕೆ ಮತ್ತು ಜ್ವರದಿಂದ ನರಳುತ್ತದೆ.”

[ಬುಖಾರಿ ಮತ್ತು ಮುಸ್ಲಿಮ್].

  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

“ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ.”

[ಅಬೂದಾವೂದ್ ಮತ್ತು ತಿರ್ಮಿದಿ].