Skip to content
ಸೂರಗಳ ಪಟ್ಟಿ /

الوَاقِعة

الوَاقِعة is chapter 56 of the Quran and has 96 verses. This page presents it in full in the Uthmani script, with a verse-by-verse translation of its meaning.

96 ಆಯತ್‌ಗಳು ಸೂರ ಸಂಖ್ಯೆ 56
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

إِذَا وَقَعَتِ ٱلۡوَاقِعَةُ

ಪುನರುತ್ಥಾನವು ಸಂಭವಿಸುವಾಗ.

لَيۡسَ لِوَقۡعَتِهَا كَاذِبَةٌ

ಅದು ಸಂಭವಿಸುತ್ತದೆ ಎಂಬುದರಲ್ಲಿ ಯಾವುದೇ ನಿರಾಕರಣೆಯಿಲ್ಲ.

خَافِضَةٞ رَّافِعَةٌ

ಅದು (ಕೆಲವರನ್ನು) ಕೆಳಗಿಳಿಸುತ್ತದೆ ಮತ್ತು (ಕೆಲವರನ್ನು) ಮೇಲೇರಿಸುತ್ತದೆ.

Explanation & meanings · 1
  1. ಕೆಳಗಿಳಿಸುವುದು ಮತ್ತು ಮೇಲೇರಿಸುವುದು ಎಂದರೆ ಗೌರವಿಸುವುದು ಮತ್ತು ಅವಮಾನಿಸುವುದು. ಪರಲೋಕದಲ್ಲಿ ಅಲ್ಲಾಹನ ನೀತಿವಂತ ದಾಸರನ್ನು ಉನ್ನತ ಸ್ಥಾನಮಾನಗಳಿಗೆ ಏರಿಸಲಾಗುತ್ತದೆ. ಅವರು ಇಹಲೋಕದಲ್ಲಿ ಎಷ್ಟು ಅವಮಾನಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಸಹ. ಅದೇ ರೀತಿ ಪರಲೋಕದಲ್ಲಿ ದುಷ್ಕರ್ಮಿಗಳನ್ನು ಅತ್ಯಂತ ಅವಮಾನಕರ ಸ್ಥಾನಗಳಿಗೆ ಇಳಿಸಲಾಗುವುದು. ಅವರು ಇಹಲೋಕದಲ್ಲಿ ಎಷ್ಟೇ ಗೌರವಾರ್ಹರಾಗಿದ್ದರೂ ಸಹ.

إِذَا رُجَّتِ ٱلۡأَرۡضُ رَجّٗا

ಭೂಮಿಯನ್ನು ತೀಕ್ಷ್ಣವಾಗಿ ನಡುಗಿಸಲಾಗುವಾಗ.

وَبُسَّتِ ٱلۡجِبَالُ بَسّٗا

ಪರ್ವತಗಳು ಸಂಪೂರ್ಣ ನುಚ್ಚುನೂರಾಗುವಾಗ.