Skip to content
الوَاقِعة /

ಆಯತ್ 79

56 : 79
الوَاقِعة ಆಯತ್‌ಗಳು 96
ಸೂರ · الوَاقِعة
ಕನ್ನಡ · Hamza
56 : 79

لَّا يَمَسُّهُۥٓ إِلَّا ٱلۡمُطَهَّرُونَ

ಅದನ್ನು ಪರಿಶುದ್ಧ ಜನರು (ದೇವದೂತರುಗಳು) ಮಾತ್ರ ಸ್ಪರ್ಶಿಸುತ್ತಾರೆ.

Explanation & meanings · 1
  1. ಅಂದರೆ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿರುವ ಪವಿತ್ರ ಕುರ್‌ಆನನ್ನು ದೇವದೂತರುಗಳು ಮಾತ್ರ ಸ್ಪರ್ಶಿಸುತ್ತಾರೆ. ಕುರ್‌ಆನನ್ನು ಆಕಾಶಲೋಕದಿಂದ ಶೈತಾನರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ತಂದು ಕೊಡುತ್ತಿದ್ದಾರೆಂದು ಸತ್ಯನಿಷೇಧಿಗಳು ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಶೈತಾನರಿಗೆ ಕುರ್‌ಆನನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಅದು ಅತ್ಯಂತ ಭದ್ರತೆಯಲ್ಲಿದೆ. ದೇವದೂತರುಗಳ ಹೊರತು ಬೇರೆ ಯಾರಿಗೂ ಅದನ್ನು ಸ್ಪರ್ಶಿಸುವ ಅಧಿಕಾರವಿಲ್ಲ.