Skip to content
ಸೂರಗಳ ಪಟ್ಟಿ /

الحدِيد

الحدِيد is chapter 57 of the Quran and has 29 verses. This page presents it in full in the Uthmani script, with a verse-by-verse translation of its meaning.

29 ಆಯತ್‌ಗಳು ಸೂರ ಸಂಖ್ಯೆ 57
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

سَبَّحَ لِلَّهِ مَا فِي ٱلسَّمَٰوَٰتِ وَٱلۡأَرۡضِۖ وَهُوَ ٱلۡعَزِيزُ ٱلۡحَكِيمُ

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

لَهُۥ مُلۡكُ ٱلسَّمَٰوَٰتِ وَٱلۡأَرۡضِۖ يُحۡيِۦ وَيُمِيتُۖ وَهُوَ عَلَىٰ كُلِّ شَيۡءٖ قَدِيرٌ

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅವನಿಗೆ ಸೇರಿದ್ದು. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

هُوَ ٱلۡأَوَّلُ وَٱلۡأٓخِرُ وَٱلظَّٰهِرُ وَٱلۡبَاطِنُۖ وَهُوَ بِكُلِّ شَيۡءٍ عَلِيمٌ

ಅವನೇ ಆದಿ, ಅಂತ್ಯ, ಪ್ರತ್ಯಕ್ಷ ಮತ್ತು ಪರೋಕ್ಷನು. ಅವನು ಸರ್ವ ವಿಷಯಗಳನ್ನು ತಿಳಿದವನಾಗಿದ್ದಾನೆ.

Explanation & meanings · 1
  1. ಅವನು ಆದಿ—ಅಂದರೆ ಅವನಿಗಿಂತ ಮೊದಲು ಏನೂ ಇಲ್ಲ. ಅವನು ಅಂತ್ಯ—ಅಂದರೆ ಅವನ ನಂತರ ಏನೂ ಇಲ್ಲ. ಅವನು ಪ್ರತ್ಯಕ್ಷ—ಅಂದರೆ ಅವನಿಗಿಂತ ಮೇಲೆ ಏನೂ ಇಲ್ಲ. ಅವನು ಎಲ್ಲಕ್ಕಿಂತ ಮೇಲಿರುವವನು, ಎಲ್ಲದ ಮೇಲೆ ಪ್ರಾಬಲ್ಯವಿರುವವನು. ಅವನು ಪರೋಕ್ಷ—ಅಂದರೆ ಅವನು ಪರೋಕ್ಷವಾಗಿರುವ, ರಹಸ್ಯವಾಗಿರುವ ಎಲ್ಲವನ್ನೂ ತಿಳಿಯುತ್ತಾನೆ. ಅವನು ದೃಷ್ಟಿಗಳಿಂದ ಮತ್ತು ಬುದ್ಧಿಯಿಂದ ಮರೆಯಾಗಿದ್ದಾನೆ.

هُوَ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِۖ يَعۡلَمُ مَا يَلِجُ فِي ٱلۡأَرۡضِ وَمَا يَخۡرُجُ مِنۡهَا وَمَا يَنزِلُ مِنَ ٱلسَّمَآءِ وَمَا يَعۡرُجُ فِيهَاۖ وَهُوَ مَعَكُمۡ أَيۡنَ مَا كُنتُمۡۚ وَٱللَّهُ بِمَا تَعۡمَلُونَ بَصِيرٞ

ಅವನೇ ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಭೂಮಿಯನ್ನು ಪ್ರವೇಶಿಸುವ, ಭೂಮಿಯಿಂದ ಹೊರಬರುವ, ಆಕಾಶದಿಂದ ಇಳಿಯುವ ಮತ್ತು ಆಕಾಶಕ್ಕೇರುವ ಎಲ್ಲವನ್ನೂ ಅವನು ತಿಳಿಯುತ್ತಾನೆ. ನೀವೆಲ್ಲೇ ಇದ್ದರೂ ಅವನು ನಿಮ್ಮ ಜೊತೆಯಲ್ಲಿದ್ದಾನೆ. ಅಲ್ಲಾಹು ನೀವು ಮಾಡುವ ಕರ್ಮಗಳನ್ನು ನೋಡುತ್ತಿದ್ದಾನೆ.

Explanation & meanings · 1
  1. ಅಂದರೆ ನಿಮ್ಮ ಎಲ್ಲಾ ಚಲನವಲನಗಳನ್ನು ಅವನು ಗಮನಿಸುತ್ತಿದ್ದಾನೆ.

لَّهُۥ مُلۡكُ ٱلسَّمَٰوَٰتِ وَٱلۡأَرۡضِۚ وَإِلَى ٱللَّهِ تُرۡجَعُ ٱلۡأُمُورُ

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅವನಿಗೆ ಸೇರಿದ್ದು. ಎಲ್ಲಾ ವಿಷಯಗಳೂ ಅಲ್ಲಾಹನ ಬಳಿಗೆ ಮರಳುತ್ತವೆ.