Skip to content

ಮಹಿಳೆಯರಿಗೆ ಯಾವುದು ಶ್ರೇಷ್ಠ? ರಮದಾನ್ ತಿಂಗಳ ರಾತ್ರಿಗಳಲ್ಲಿ ಮನೆಯಲ್ಲಿ ನಮಾಝ್ ನಿರ್ವಹಿಸುವುದೋ ಅಥವಾ ಮಸೀದಿಯಲ್ಲಿ ನಮಾಝ್ ನಿರ್ವಹಿಸುವುದೋ? ವಿಶೇಷವಾಗಿ ಮಸೀದಿಯಲ್ಲಿ ಪ್ರವಚನಗಳು ಇರುವಾಗ? ಮಸೀದಿಯಲ್ಲಿ ನಮಾಝ್ ನಿರ್ವಹಿಸುವ ಮಹಿಳೆಯರಿಗೆ ನಿಮ್ಮ ಸಲಹೆಗಳೇನು?

السؤال

ಪ್ರಶ್ನೆ 1.

ಮಹಿಳೆಯರಿಗೆ ಯಾವುದು ಶ್ರೇಷ್ಠ? ರಮದಾನ್ ತಿಂಗಳ ರಾತ್ರಿಗಳಲ್ಲಿ ಮನೆಯಲ್ಲಿ ನಮಾಝ್ ನಿರ್ವಹಿಸುವುದೋ ಅಥವಾ ಮಸೀದಿಯಲ್ಲಿ ನಮಾಝ್ ನಿರ್ವಹಿಸುವುದೋ? ವಿಶೇಷವಾಗಿ ಮಸೀದಿಯಲ್ಲಿ ಪ್ರವಚನಗಳು ಇರುವಾಗ? ಮಸೀದಿಯಲ್ಲಿ ನಮಾಝ್ ನಿರ್ವಹಿಸುವ ಮಹಿಳೆಯರಿಗೆ ನಿಮ್ಮ ಸಲಹೆಗಳೇನು?

س26: أيّهما أفضل للمرأة: أن تصلّي في ليالي رمضان في بيتها، أو في المسجد، وخصوصًا إذا كان فيه مواعظ وتذكيرٌ؟ وما توجيهك للنّساء اللاتي يصلّين في المساجد؟

الجواب

ಉತ್ತರ 1.

ಮನೆಯಲ್ಲಿ ನಮಾಝ್ ನಿರ್ವಹಿಸುವುದೇ ಶ್ರೇಷ್ಠ. ಏಕೆಂದರೆ, ಪ್ರವಾದಿ(ಸ) ರವರ ಸಾರ್ವತ್ರಿಕ ವಚನವು ಇದನ್ನೇ ಸೂಚಿಸುತ್ತದೆ:

"ಅವರಿಗೆ ಅವರ ಮನೆಯೇ ಶ್ರೇಷ್ಠ."

ಏಕೆಂದರೆ ಮಹಿಳೆಯರು ಹೊರಗೆ ಹೋಗುವುದು ಹೆಚ್ಚಿನ ಸಂದರ್ಭಗಳಲ್ಲೂ ಅನೇಕ ಪರೀಕ್ಷೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಮಹಿಳೆ ನಮಾಝಿಗಾಗಿ ಮಸೀದಿಗೆ ಹೋಗುವುದರಿಂದ ಮನೆಯಲ್ಲೇ ಉಳಿಯುವುದು ಶ್ರೇಷ್ಠವಾಗಿದೆ. ಪ್ರವಚನಗಳನ್ನು ಧ್ವನಿಮುದ್ರಣಗಳ ಮೂಲಕವೂ ಆಲಿಸಬಹುದು.

ನಮಾಝ್ ನಿರ್ವಹಿಸಲು ಮಸೀದಿಗೆ ಹೋಗುವ ಮಹಿಳೆಯರಿಗೆ ನನ್ನ ಸಲಹೆ ಏನೆಂದರೆ, ಅವರು ತಮ್ಮ ಅಲಂಕಾರಗಳನ್ನು ಬಹಿರಂಗಪಡಿಸದೆ ಮತ್ತು ಸುಗಂಧದ್ರವ್ಯಗಳನ್ನು ಹಚ್ಚದೆ ಹೊರಡಬೇಕು.

ﺟ26: الأفضل أن تصلّي في بيتها؛ لعموم قول النبيّ ﷺ:

«وَبُيُوتُهُنَّ خَيْرٌ لَهُنَّ» [1]،

ولأن خروج النّساء لا يسلم من فتنةٍ في كثيرٍ من الأحيان، فكون المرأة تبقى في بيتها خيرٌ لها من أن تخرج للصلاة في المسجد، والمواعظ والحديث يمكن أن تحصل عليها بواسطة الشريط.

[9] رواه أبو داود، كتاب الصلاة، باب ما جاء في خروج النساء إلى المساجد (567).

وتوجيهي للاتي يصلّين في المسجد: أن يخرجن من بيوتهن غير متبرّجاتٍ بزينةٍ، ولا متطيّباتٍ.