Skip to content
ಸೂರಗಳ ಪಟ್ಟಿ /

الفَتح

الفَتح is chapter 48 of the Quran and has 29 verses. This page presents it in full in the Uthmani script, with a verse-by-verse translation of its meaning.

29 ಆಯತ್‌ಗಳು ಸೂರ ಸಂಖ್ಯೆ 48
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

إِنَّا فَتَحۡنَا لَكَ فَتۡحٗا مُّبِينٗا

(ಪ್ರವಾದಿಯವರೇ) ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟ ವಿಜಯವನ್ನು ದಯಪಾಲಿಸಿದ್ದೇವೆ.

Explanation & meanings · 1
  1. ಸ್ಪಷ್ಟ ವಿಜಯ ಎಂದರೆ ಹುದೈಬಿಯಾ ಒಪ್ಪಂದ. ಈ ಒಪ್ಪಂದದಿಂದಾಗಿ ಮುಸ್ಲಿಮರಿಗೆ ನಾಲ್ಕೂ ಕಡೆ ನಿರ್ಭಯವಾಗಿ ಓಡಾಡಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಸಾಧ್ಯವಾಯಿತು. ಇದರಿಂದ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚು ಹೆಚ್ಚು ಜನರು ಆಕರ್ಷಿತರಾದರು. ಇದು ನಂತರ ಮಕ್ಕಾ ವಿಜಯಕ್ಕೆ ನಾಂದಿಯಾಯಿತು.

لِّيَغۡفِرَ لَكَ ٱللَّهُ مَا تَقَدَّمَ مِن ذَنۢبِكَ وَمَا تَأَخَّرَ وَيُتِمَّ نِعۡمَتَهُۥ عَلَيۡكَ وَيَهۡدِيَكَ صِرَٰطٗا مُّسۡتَقِيمٗا

ಹಿಂದೆ ಸಂಭವಿಸಿರುವ ನಿಮ್ಮ ತಪ್ಪುಗಳನ್ನು ಮತ್ತು ಮುಂದೆ ಸಂಭವಿಸಲಿರುವುದನ್ನು ಅಲ್ಲಾಹು ನಿಮಗೆ ಕ್ಷಮಿಸುವುದಕ್ಕಾಗಿ, ಅವನ ಅನುಗ್ರಹವನ್ನು ನಿಮಗೆ ಪೂರ್ಣಗೊಳಿಸುವುದಕ್ಕಾಗಿ ಮತ್ತು ನಿಮ್ಮನ್ನು ನೇರಮಾರ್ಗದಲ್ಲಿ ಮುನ್ನಡೆಸುವುದಕ್ಕಾಗಿ.

وَيَنصُرَكَ ٱللَّهُ نَصۡرًا عَزِيزًا

ಅಲ್ಲಾಹು ನಿಮಗೆ ಪ್ರಬಲವಾದ ಸಹಾಯವನ್ನು ನೀಡುವುದಕ್ಕಾಗಿ.

هُوَ ٱلَّذِيٓ أَنزَلَ ٱلسَّكِينَةَ فِي قُلُوبِ ٱلۡمُؤۡمِنِينَ لِيَزۡدَادُوٓاْ إِيمَٰنٗا مَّعَ إِيمَٰنِهِمۡۗ وَلِلَّهِ جُنُودُ ٱلسَّمَٰوَٰتِ وَٱلۡأَرۡضِۚ وَكَانَ ٱللَّهُ عَلِيمًا حَكِيمٗا

ಅವನೇ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು. ಅವರಲ್ಲಿರುವ ಸತ್ಯವಿಶ್ವಾಸಕ್ಕೆ ಇನ್ನಷ್ಟು ಸತ್ಯವಿಶ್ವಾಸವು ಹೆಚ್ಚಾಗುವುದಕ್ಕಾಗಿ. ಭೂಮ್ಯಾಕಾಶಗಳ ಸೈನ್ಯಗಳು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

لِّيُدۡخِلَ ٱلۡمُؤۡمِنِينَ وَٱلۡمُؤۡمِنَٰتِ جَنَّٰتٖ تَجۡرِي مِن تَحۡتِهَا ٱلۡأَنۡهَٰرُ خَٰلِدِينَ فِيهَا وَيُكَفِّرَ عَنۡهُمۡ سَيِّـَٔاتِهِمۡۚ وَكَانَ ذَٰلِكَ عِندَ ٱللَّهِ فَوۡزًا عَظِيمٗا

ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಶಾಶ್ವತವಾಸಿಗಳಾಗಿ ಪ್ರವೇಶಗೊಳಿಸುವುದಕ್ಕಾಗಿ ಮತ್ತು ಅವರ ಕೆಡುಕುಗಳನ್ನು ಅಳಿಸುವುದಕ್ಕಾಗಿ. ಅದು ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ವಿಜಯವಾಗಿದೆ.