Skip to content
ಸೂರಗಳ ಪಟ್ಟಿ /

الحُجُرَات

الحُجُرَات is chapter 49 of the Quran and has 18 verses. This page presents it in full in the Uthmani script, with a verse-by-verse translation of its meaning.

18 ಆಯತ್‌ಗಳು ಸೂರ ಸಂಖ್ಯೆ 49
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

يَٰٓأَيُّهَا ٱلَّذِينَ ءَامَنُواْ لَا تُقَدِّمُواْ بَيۡنَ يَدَيِ ٱللَّهِ وَرَسُولِهِۦۖ وَٱتَّقُواْ ٱللَّهَۚ إِنَّ ٱللَّهَ سَمِيعٌ عَلِيمٞ

ಸತ್ಯವಿಶ್ವಾಸಿಗಳೇ! ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಿಂತ ಮುಂದೆ ಹೋಗಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

يَٰٓأَيُّهَا ٱلَّذِينَ ءَامَنُواْ لَا تَرۡفَعُوٓاْ أَصۡوَٰتَكُمۡ فَوۡقَ صَوۡتِ ٱلنَّبِيِّ وَلَا تَجۡهَرُواْ لَهُۥ بِٱلۡقَوۡلِ كَجَهۡرِ بَعۡضِكُمۡ لِبَعۡضٍ أَن تَحۡبَطَ أَعۡمَٰلُكُمۡ وَأَنتُمۡ لَا تَشۡعُرُونَ

ಸತ್ಯವಿಶ್ವಾಸಿಗಳೇ! ನಿಮ್ಮ ಧ್ವನಿಗಳನ್ನು ಪ್ರವಾದಿಯ ಧ್ವನಿಗಿಂತ ಹೆಚ್ಚಿಸಬೇಡಿ. ನೀವು ಪರಸ್ಪರ ಉಚ್ಛಧ್ವನಿಯಲ್ಲಿ ಮಾತನಾಡುವಂತೆ ಅವರೊಡನೆ ಉಚ್ಛಧ್ವನಿಯಲ್ಲಿ ಮಾತನಾಡಬೇಡಿ. ನೀವು ತಿಳಿಯದೆಯೇ ನಿಮ್ಮ ಕರ್ಮಗಳು ನಿಷ್ಪಲವಾಗದಿರುವುದಕ್ಕಾಗಿ.

إِنَّ ٱلَّذِينَ يَغُضُّونَ أَصۡوَٰتَهُمۡ عِندَ رَسُولِ ٱللَّهِ أُوْلَٰٓئِكَ ٱلَّذِينَ ٱمۡتَحَنَ ٱللَّهُ قُلُوبَهُمۡ لِلتَّقۡوَىٰۚ لَهُم مَّغۡفِرَةٞ وَأَجۡرٌ عَظِيمٌ

ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರ ಬಳಿ ತಮ್ಮ ಧ್ವನಿಗಳನ್ನು ತಗ್ಗಿಸುವವರು ಯಾರೋ ಅವರ ಹೃದಯಗಳನ್ನು ಅಲ್ಲಾಹು ದೇವಭಯಕ್ಕಾಗಿ ಪರೀಕ್ಷಿಸಿದ್ದಾನೆ. ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ.

إِنَّ ٱلَّذِينَ يُنَادُونَكَ مِن وَرَآءِ ٱلۡحُجُرَٰتِ أَكۡثَرُهُمۡ لَا يَعۡقِلُونَ

ನಿಶ್ಚಯವಾಗಿಯೂ ಕೊಠಡಿಗಳ ಹಿಂಭಾಗದಿಂದ ನಿಮ್ಮನ್ನು ಕೂಗಿ ಕರೆಯುವವರು ಯಾರೋ ಅವರಲ್ಲಿ ಹೆಚ್ಚಿನವರು ಬುದ್ಧಿಯಿಲ್ಲದವರಾಗಿದ್ದಾರೆ.

وَلَوۡ أَنَّهُمۡ صَبَرُواْ حَتَّىٰ تَخۡرُجَ إِلَيۡهِمۡ لَكَانَ خَيۡرٗا لَّهُمۡۚ وَٱللَّهُ غَفُورٞ رَّحِيمٞ

ನೀವು ಅವರ ಬಳಿಗೆ ಹೊರಡುವ ತನಕ ಅವರು ತಾಳ್ಮೆಯಿಂದಿರುತ್ತಿದ್ದರೆ ಅದು ಅವರಿಗೆ ಶ್ರೇಷ್ಠವಾಗಿರುತ್ತಿತ್ತು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.