Skip to content
ಸೂರಗಳ ಪಟ್ಟಿ /

مُحمد

مُحمد is chapter 47 of the Quran and has 38 verses. This page presents it in full in the Uthmani script, with a verse-by-verse translation of its meaning.

38 ಆಯತ್‌ಗಳು ಸೂರ ಸಂಖ್ಯೆ 47
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

ٱلَّذِينَ كَفَرُواْ وَصَدُّواْ عَن سَبِيلِ ٱللَّهِ أَضَلَّ أَعۡمَٰلَهُمۡ

ಸತ್ಯವನ್ನು ನಿಷೇಧಿಸಿದವರು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಯಾರೋ ಅವರ ಕರ್ಮಗಳನ್ನು ಅಲ್ಲಾಹು ನಿಷ್ಫಲಗೊಳಿಸುವನು.

وَٱلَّذِينَ ءَامَنُواْ وَعَمِلُواْ ٱلصَّٰلِحَٰتِ وَءَامَنُواْ بِمَا نُزِّلَ عَلَىٰ مُحَمَّدٖ وَهُوَ ٱلۡحَقُّ مِن رَّبِّهِمۡ كَفَّرَ عَنۡهُمۡ سَيِّـَٔاتِهِمۡ وَأَصۡلَحَ بَالَهُمۡ

ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು ಮತ್ತು ಮುಹಮ್ಮದರಿಗೆ ಅವತೀರ್ಣವಾದ ಸಂದೇಶದಲ್ಲಿ—ಅದು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ—ವಿಶ್ವಾಸವಿಟ್ಟವರು ಯಾರೋ ಅವರ ಕೆಡುಕುಗಳನ್ನು ಅಲ್ಲಾಹು ಅಳಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.

ذَٰلِكَ بِأَنَّ ٱلَّذِينَ كَفَرُواْ ٱتَّبَعُواْ ٱلۡبَٰطِلَ وَأَنَّ ٱلَّذِينَ ءَامَنُواْ ٱتَّبَعُواْ ٱلۡحَقَّ مِن رَّبِّهِمۡۚ كَذَٰلِكَ يَضۡرِبُ ٱللَّهُ لِلنَّاسِ أَمۡثَٰلَهُمۡ

ಅದೇಕೆಂದರೆ ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವನ್ನು ಅನುಸರಿಸಿದರು. ಈ ರೀತಿ ಅಲ್ಲಾಹು ಜನರಿಗೆ ಅವರ ಸ್ಥಿತಿಗಳನ್ನು ವಿವರಿಸಿಕೊಡುತ್ತಾನೆ.

فَإِذَا لَقِيتُمُ ٱلَّذِينَ كَفَرُواْ فَضَرۡبَ ٱلرِّقَابِ حَتَّىٰٓ إِذَآ أَثۡخَنتُمُوهُمۡ فَشُدُّواْ ٱلۡوَثَاقَ فَإِمَّا مَنَّۢا بَعۡدُ وَإِمَّا فِدَآءً حَتَّىٰ تَضَعَ ٱلۡحَرۡبُ أَوۡزَارَهَاۚ ذَٰلِكَۖ وَلَوۡ يَشَآءُ ٱللَّهُ لَٱنتَصَرَ مِنۡهُمۡ وَلَٰكِن لِّيَبۡلُوَاْ بَعۡضَكُم بِبَعۡضٖۗ وَٱلَّذِينَ قُتِلُواْ فِي سَبِيلِ ٱللَّهِ فَلَن يُضِلَّ أَعۡمَٰلَهُمۡ

ನೀವು ಸತ್ಯನಿಷೇಧಿಗಳೊಡನೆ (ಯುದ್ಧದಲ್ಲಿ) ಮುಖಾಮುಖಿಯಾದರೆ ಅವರ ಕತ್ತುಗಳ ಮೇಲೆ ಬೀಸಿರಿ. ಅವರನ್ನು ಚೆನ್ನಾಗಿ ಬಗ್ಗುಬಡಿದ ನಂತರ ಅವರನ್ನು ಬಿಗಿಯಾಗಿ ಬಂಧಿಸಿರಿ. ನಂತರ ಒಂದೋ ಅವರೊಡನೆ ದಾಕ್ಷಿಣ್ಯ ತೋರಿರಿ ಅಥವಾ ವಿಮೋಚನಾ ಶುಲ್ಕವನ್ನು ಪಡೆದು ಅವರನ್ನು ಸ್ವತಂತ್ರಗೊಳಿಸಿರಿ—ಯುದ್ಧವು ಅದರ ಭಾರವನ್ನು ಕಳಚುವ ತನಕ. ಇದೇ ನಿಯಮ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನೇ ಅವರಿಂದ ಪ್ರತೀಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸುವುದಕ್ಕಾಗಿದೆ. ಯಾರು ಅಲ್ಲಾಹನ ಮಾರ್ಗದಲ್ಲಿ ಹತರಾಗುತ್ತಾರೋ ಅವರ ಕರ್ಮಗಳನ್ನು ಅವನು ಎಂದಿಗೂ ನಿಷ್ಫಲಗೊಳಿಸುವುದಿಲ್ಲ.

Explanation & meanings · 2
  1. ದಾಕ್ಷಿಣ್ಯ ತೋರುವುದು ಎಂದರೆ ಪರಿಹಾರ ಪಡೆಯದೆ ಅವರನ್ನು ಬಿಟ್ಟುಬಿಡುವುದು.
  2. ಅಂದರೆ ಯುದ್ಧವು ಮುಗಿಯುವ ತನಕ.

سَيَهۡدِيهِمۡ وَيُصۡلِحُ بَالَهُمۡ

ಅವನು ಅವರಿಗೆ ದಾರಿ ತೋರಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.