Skip to content
الفَتح /

ಆಯತ್ 27

48 : 27

ಆಯತ್ 27 of الفَتح (48 : 27). This page carries the verse in the Uthmani script with a translation of its meaning, at a stable URL that can be cited on its own.

الفَتح ಆಯತ್‌ಗಳು 29
ಸೂರ · الفَتح
ಕನ್ನಡ · Hamza
48 : 27

لَّقَدۡ صَدَقَ ٱللَّهُ رَسُولَهُ ٱلرُّءۡيَا بِٱلۡحَقِّۖ لَتَدۡخُلُنَّ ٱلۡمَسۡجِدَ ٱلۡحَرَامَ إِن شَآءَ ٱللَّهُ ءَامِنِينَ مُحَلِّقِينَ رُءُوسَكُمۡ وَمُقَصِّرِينَ لَا تَخَافُونَۖ فَعَلِمَ مَا لَمۡ تَعۡلَمُواْ فَجَعَلَ مِن دُونِ ذَٰلِكَ فَتۡحٗا قَرِيبًا

ಅಲ್ಲಾಹು ತನ್ನ ಸಂದೇಶವಾಹಕರಿಗೆ ತೋರಿಸಿದ ಕನಸನ್ನು ಸಾಕಾರಗೊಳಿಸಿದನು. ಅಂದರೆ ಅಲ್ಲಾಹು ಇಚ್ಛಿಸಿದರೆ ನೀವು ನಿರ್ಭಯರಾಗಿ, ತಲೆಗೂದಲು ಬೋಳಿಸಿ ಮತ್ತು ಕಿರಿದಾಗಿಸಿದ ಸ್ಥಿತಿಯಲ್ಲಿ ಯಾರನ್ನೂ ಭಯಪಡದೆ ಪವಿತ್ರ ಮಸೀದಿಯನ್ನು ಪ್ರವೇಶಿಸುವಿರಿ (ಎಂಬ ಕನಸು). ನೀವು ತಿಳಿಯದೇ ಇರುವ ವಿಷಯಗಳನ್ನು ಅವನು ತಿಳಿದಿದ್ದಾನೆ. ಆದ್ದರಿಂದ ಅವನು ಅದಕ್ಕೆ ಮೊದಲು ಹತ್ತಿರದಲ್ಲೇ ಇರುವ ಒಂದು ವಿಜಯವನ್ನು ನಿಮಗೆ ಸುಗಮಗೊಳಿಸಿದನು.

Explanation & meanings · 1
  1. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳೊಡನೆ ಶಾಂತಿಯಿಂದ ಉಮ್ರ ನಿರ್ವಹಿಸುವ ಕನಸನ್ನು ಕಂಡರು. ಆದ್ದರಿಂದ ಅವರು ಉಮ್ರ ನಿರ್ವಹಿಸುವುದಕ್ಕಾಗಿ ಮಕ್ಕಾಗೆ ಹೊರಟರು. ಆದರೆ ದಾರಿ ಮಧ್ಯೆ ಕುರೈಶರು ಅವರನ್ನು ಮಕ್ಕಾ ಪ್ರವೇಶಿಸದಂತೆ ತಡೆದರು. ಒಂದು ಯುದ್ಧದ ಹಂತಕ್ಕೆ ತಲುಪಿದ್ದ ಸಂಘರ್ಷವು ನಂತರ ಹುದೈಬಿಯಾ ಒಪ್ಪಂದದ ಮೂಲಕ ಕೊನೆಯಾಯಿತು. ಈ ಒಪ್ಪಂದದ ಪ್ರಕಾರ ಈ ವರ್ಷ ಮುಸ್ಲಿಮರು ಉಮ್ರ ನಿರ್ಹಹಿಸಬಾರದು. ಆದರೆ ಮುಂದಿನ ವರ್ಷ ನಿರ್ವಹಿಸಬಹುದು. ಮುಂದಿನ ವರ್ಷ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳೊಡನೆ ಶಾಂತಿಯಿಂದ ಉಮ್ರ ನಿರ್ವಹಿಸಿದರು.