Skip to content
ಸೂರಗಳ ಪಟ್ಟಿ /

النَّحل

النَّحل is chapter 16 of the Quran and has 128 verses. This page presents it in full in the Uthmani script, with a verse-by-verse translation of its meaning.

128 ಆಯತ್‌ಗಳು ಸೂರ ಸಂಖ್ಯೆ 16
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

أَتَىٰٓ أَمۡرُ ٱللَّهِ فَلَا تَسۡتَعۡجِلُوهُۚ سُبۡحَٰنَهُۥ وَتَعَٰلَىٰ عَمَّا يُشۡرِكُونَ

ಅಲ್ಲಾಹನ ಆಜ್ಞೆಯು ಬಂದಿದೆ. ಆದ್ದರಿಂದ ಅದಕ್ಕಾಗಿ ತ್ವರೆ ಮಾಡಬೇಡಿ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ.

يُنَزِّلُ ٱلۡمَلَٰٓئِكَةَ بِٱلرُّوحِ مِنۡ أَمۡرِهِۦ عَلَىٰ مَن يَشَآءُ مِنۡ عِبَادِهِۦٓ أَنۡ أَنذِرُوٓاْ أَنَّهُۥ لَآ إِلَٰهَ إِلَّآ أَنَا۠ فَٱتَّقُونِ

“ನನ್ನ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನು ಭಯಪಡಲು ಜನರಿಗೆ ಎಚ್ಚರಿಕೆ ನೀಡಿರಿ” ಎಂಬ ಸಂದೇಶದೊಂದಿಗೆ, ಅವನು ತನ್ನ ದಾಸರಲ್ಲಿ ತಾನು ಇಚ್ಛಿಸುವವರ ಮೇಲೆ ತನ್ನ ಆಜ್ಞೆಯಂತೆ ದೇವವಾಣಿಯ ಸಹಿತ ದೇವದೂತರುಗಳನ್ನು ಇಳಿಸುತ್ತಾನೆ.

خَلَقَ ٱلسَّمَٰوَٰتِ وَٱلۡأَرۡضَ بِٱلۡحَقِّۚ تَعَٰلَىٰ عَمَّا يُشۡرِكُونَ

ಅವನು ಭೂಮ್ಯಾಕಾಶಗಳನ್ನು ಸತ್ಯದೊಂದಿಗೇ ಸೃಷ್ಟಿಸಿದ್ದಾನೆ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಮೋನ್ನತನಾಗಿದ್ದಾನೆ.

خَلَقَ ٱلۡإِنسَٰنَ مِن نُّطۡفَةٖ فَإِذَا هُوَ خَصِيمٞ مُّبِينٞ

ಅವನು ಮಾನವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅಗೋ! ಮಾನವನು ಸ್ಪಷ್ಟ ಎದುರಾಳಿಯಾಗಿ ಬಿಟ್ಟಿದ್ದಾನೆ!

وَٱلۡأَنۡعَٰمَ خَلَقَهَاۖ لَكُمۡ فِيهَا دِفۡءٞ وَمَنَٰفِعُ وَمِنۡهَا تَأۡكُلُونَ

ಅವನು ಜಾನುವಾರುಗಳನ್ನು ಸಹ ಸೃಷ್ಟಿಸಿದನು. ಅವುಗಳಲ್ಲಿ ನಿಮಗೆ ಬೆಚ್ಚಗಿನ ಉಡುಪುಗಳಿವೆ. ಬೇರೆಯೂ ಪ್ರಯೋಜನಗಳಿವೆ. ಅವುಗಳನ್ನು ನೀವು ಆಹಾರವಾಗಿಯೂ ಸೇವಿಸುತ್ತೀರಿ.