16 : 14
وَهُوَ ٱلَّذِي سَخَّرَ ٱلۡبَحۡرَ لِتَأۡكُلُواْ مِنۡهُ لَحۡمٗا طَرِيّٗا وَتَسۡتَخۡرِجُواْ مِنۡهُ حِلۡيَةٗ تَلۡبَسُونَهَاۖ وَتَرَى ٱلۡفُلۡكَ مَوَاخِرَ فِيهِ وَلِتَبۡتَغُواْ مِن فَضۡلِهِۦ وَلَعَلَّكُمۡ تَشۡكُرُونَ
ಅವನೇ ನಿಮಗೆ ಕಡಲನ್ನು ನಿಯಂತ್ರಿಸಿಕೊಟ್ಟವನು. ಅದರಿಂದ ನೀವು ತಾಜಾ ಮಾಂಸವನ್ನು (ಮೀನು) ಸೇವಿಸುತ್ತೀರಿ ಮತ್ತು ನೀವು ಧರಿಸುವ ಆಭರಣಗಳನ್ನು ಹೊರತೆಗೆಯುತ್ತೀರಿ. ನಾವೆಗಳು ಅದರ ನೀರನ್ನು ಸೀಳುತ್ತಾ ಸಾಗುವುದನ್ನು ನೀವು ನೋಡುತ್ತೀರಿ. ನೀವು ಅವನ (ಅಲ್ಲಾಹನ) ಅನುಗ್ರಹವನ್ನು ಅರಸುವುದಕ್ಕಾಗಿ ಮತ್ತು ಕೃತಜ್ಞರಾಗುವುದಕ್ಕಾಗಿ (ಇವೆಲ್ಲವನ್ನೂ ನಿಯಂತ್ರಿಸಿಕೊಡಲಾಗಿದೆ).