16 : 59
يَتَوَٰرَىٰ مِنَ ٱلۡقَوۡمِ مِن سُوٓءِ مَا بُشِّرَ بِهِۦٓۚ أَيُمۡسِكُهُۥ عَلَىٰ هُونٍ أَمۡ يَدُسُّهُۥ فِي ٱلتُّرَابِۗ أَلَا سَآءَ مَا يَحۡكُمُونَ
ಆ ಕೆಟ್ಟ ವಾರ್ತೆಯ ಕಾರಣದಿಂದಾಗಿ ಅವನು ಜನರಿಂದ ಅಡಗುತ್ತಾನೆ. ಆ ಮಗುವನ್ನು ಸಾಕಬೇಕೋ ಅಥವಾ ಮಣ್ಣಿನಲ್ಲಿ ದಫನ ಮಾಡಬೇಕೋ? ಎಂದು ಅವನು ಯೋಚಿಸುತ್ತಾನೆ. ಅವರು ಮಾಡುವ ತೀರ್ಮಾನವು ಬಹಳ ನಿಕೃಷ್ಟವಾಗಿದೆ.
Explanation & meanings · 1
- ಮಕ್ಕಾದ ಬಹುದೇವಾರಾಧಕರಿಗೆ ಒಂದು ಹೆಣ್ಣು ಮಗು ಹುಟ್ಟಿದರೆ ಅವರು ಅದನ್ನು ಅನಿಷ್ಟವೆಂದು ಪರಿಗಣಿಸಿ ಜೀವಂತ ಹೂಳುತ್ತಾರೆ. ಹೆಣ್ಣು ಮಗು ಎಂಬ ಕಳಂಕವನ್ನು ಜೀವನವಿಡೀ ಹೊತ್ತುಕೊಂಡು ಆ ಮಗುವನ್ನು ಸಾಕಲು ಅವರು ಸಿದ್ಧರಿಲ್ಲ. ಆದರೆ ಅದೇ ಬಹುದೇವಾರಾಧಕರು ದೇವದೂತರುಗಳನ್ನು ಅಲ್ಲಾಹನ ಹೆಣ್ಣು ಮಕ್ಕಳೆಂದು ಆರೋಪಿಸುತ್ತಾರೆ. ಆಗ ಅವರಿಗೆ ಅದು ಕಳಂಕವೆಂದು ತೋರುವುದಿಲ್ಲ.