Skip to content
ಸೂರಗಳ ಪಟ್ಟಿ /

الحِجر

الحِجر is chapter 15 of the Quran and has 99 verses. This page presents it in full in the Uthmani script, with a verse-by-verse translation of its meaning.

99 ಆಯತ್‌ಗಳು ಸೂರ ಸಂಖ್ಯೆ 15
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

الٓرۚ تِلۡكَ ءَايَٰتُ ٱلۡكِتَٰبِ وَقُرۡءَانٖ مُّبِينٖ

ಅಲಿಫ್ ಲಾಮ್ ರಾ. ಇವು ದೈವಿಕ ಗ್ರಂಥದ ವಚನಗಳು ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ.

رُّبَمَا يَوَدُّ ٱلَّذِينَ كَفَرُواْ لَوۡ كَانُواْ مُسۡلِمِينَ

”ನಾವು ಮುಸಲ್ಮಾನರಾಗಿದ್ದರೆ!” ಎಂದು ಕೆಲವೊಮ್ಮೆ ಸತ್ಯನಿಷೇಧಿಗಳು ಹಾರೈಸುವರು.

Explanation & meanings · 1
  1. ಮರಣದ ಸಮಯದಲ್ಲಿ, ದೇವದೂತರು ನರಕಾಗ್ನಿಯನ್ನು ತೋರಿಸುವಾಗ, ಅವರನ್ನು ನರಕಾಗ್ನಿಗೆ ಎಸೆಯುವಾಗ, ಪಾಪಿಗಳಾದ ಸತ್ಯವಿಶ್ವಾಸಿಗಳನ್ನು ನರಕ ಶಿಕ್ಷೆಯಿಂದ ಬಿಡುಗಡೆಗೊಳಿಸುವಾಗ, ಮುಸಲ್ಮಾನರು ವಿಚಾರಣೆ ನಡೆದು ಸ್ವರ್ಗಕ್ಕೆ ಹೋಗುವಾಗ ಮುಂತಾದ ಸಂದರ್ಭಗಳಲ್ಲಿ ನಾವು ಮುಸಲ್ಮಾನರಾಗಿದ್ದರೆ ಎಂದು ಅವರು ಹಾರೈಸುವರು. ಆದರೆ ಈ ಹಾರೈಕೆಯಿಂದ ಅವರಿಗೆ ಯಾವುದೇ ಪ್ರಯೋಜನವಿರುವುದಿಲ್ಲ.

ذَرۡهُمۡ يَأۡكُلُواْ وَيَتَمَتَّعُواْ وَيُلۡهِهِمُ ٱلۡأَمَلُۖ فَسَوۡفَ يَعۡلَمُونَ

ಅವರನ್ನು ಬಿಟ್ಟುಬಿಡಿ. ಅವರು ತಿನ್ನುತ್ತಲೂ, ಆನಂದಿಸುತ್ತಲೂ, ಹುಸಿ ಭರವಸೆಗಳಲ್ಲಿ ತಲ್ಲೀನರಾಗುತ್ತಲೂ ಇರಲಿ. ಸದ್ಯವೇ ಅವರು ತಿಳಿಯುವರು.

وَمَآ أَهۡلَكۡنَا مِن قَرۡيَةٍ إِلَّا وَلَهَا كِتَابٞ مَّعۡلُومٞ

ನಾವು ಯಾವುದೇ ಊರನ್ನು ಅದಕ್ಕೆ ಒಂದು ನಿಗದಿತ ಅವಧಿಯನ್ನು ನೀಡದೆ ನಾಶ ಮಾಡಿಲ್ಲ.

مَّا تَسۡبِقُ مِنۡ أُمَّةٍ أَجَلَهَا وَمَا يَسۡتَـٔۡخِرُونَ

ಯಾವುದೇ ಜನತೆ ತಮ್ಮ ನಿಗದಿತ ಅವಧಿಯನ್ನು ದಾಟಿಹೋಗುವುದಿಲ್ಲ, ಹಿಂದೆ ಉಳಿಯುವುದೂ ಇಲ್ಲ.