16 : 27
ثُمَّ يَوۡمَ ٱلۡقِيَٰمَةِ يُخۡزِيهِمۡ وَيَقُولُ أَيۡنَ شُرَكَآءِيَ ٱلَّذِينَ كُنتُمۡ تُشَٰٓقُّونَ فِيهِمۡۚ قَالَ ٱلَّذِينَ أُوتُواْ ٱلۡعِلۡمَ إِنَّ ٱلۡخِزۡيَ ٱلۡيَوۡمَ وَٱلسُّوٓءَ عَلَى ٱلۡكَٰفِرِينَ
ನಂತರ ಪುನರುತ್ಥಾನ ದಿನದಂದು ಅವನು ಅವರನ್ನು ಅವಮಾನಿಸುತ್ತಾ ಕೇಳುವನು: “ನೀವು ನನಗೆ ಸಹಭಾಗಿಗಳಾಗಿ ಮಾಡಿದ ಆ ದೇವರುಗಳು ಎಲ್ಲಿದ್ದಾರೆ? ಅವರ ವಿಷಯದಲ್ಲಿ ನೀವು (ಸತ್ಯವಿಶ್ವಾಸಿಗಳನ್ನು) ವಿರೋಧಿಸುತ್ತಿದ್ದಿರಲ್ಲವೇ?” ಜ್ಞಾನಿಗಳು ಹೇಳುವರು: “ನಿಶ್ಚಯವಾಗಿಯೂ ಸತ್ಯನಿಷೇಧಿಗಳಿಗೆ ಇಂದು ಅವಮಾನ ಮತ್ತು ಕೆಡುಕು ಕಾದಿದೆ.”