Skip to content
النَّحل /

ಆಯತ್ 92

16 : 92

ಆಯತ್ 92 of النَّحل (16 : 92). This page carries the verse in the Uthmani script with a translation of its meaning, at a stable URL that can be cited on its own.

النَّحل ಆಯತ್‌ಗಳು 128
ಸೂರ · النَّحل
ಕನ್ನಡ · Hamza
16 : 92

وَلَا تَكُونُواْ كَٱلَّتِي نَقَضَتۡ غَزۡلَهَا مِنۢ بَعۡدِ قُوَّةٍ أَنكَٰثٗا تَتَّخِذُونَ أَيۡمَٰنَكُمۡ دَخَلَۢا بَيۡنَكُمۡ أَن تَكُونَ أُمَّةٌ هِيَ أَرۡبَىٰ مِنۡ أُمَّةٍۚ إِنَّمَا يَبۡلُوكُمُ ٱللَّهُ بِهِۦۚ وَلَيُبَيِّنَنَّ لَكُمۡ يَوۡمَ ٱلۡقِيَٰمَةِ مَا كُنتُمۡ فِيهِ تَخۡتَلِفُونَ

ನೂಲನ್ನು ಗಟ್ಟಿಯಾಗಿ ಸುತ್ತಿದ ಬಳಿಕ ಅದನ್ನು ಎಳೆ ಎಳೆಯಾಗಿ ಬಿಡಿಸಿ ಎಸೆಯುವ ಮಹಿಳೆಯಂತೆ ನೀವಾಗಬೇಡಿ—ನಿಮ್ಮಲ್ಲೊಂದು ಗುಂಪು ಇನ್ನೊಂದು ಗುಂಪಿಗಿಂತ ಹೆಚ್ಚಾಗಿರುವ ಕಾರಣ ನೀವು ನಿಮ್ಮ ಆಣೆಗಳನ್ನು (ಕರಾರುಗಳನ್ನು) ಪರಸ್ಪರ ವಂಚನೆಯ ಮಾರ್ಗವಾಗಿ ಮಾಡುತ್ತಿದ್ದೀರಿ. ಅಲ್ಲಾಹು ಅದರ ಮೂಲಕ ಕೇವಲ ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಯಾವ ವಿಷಯದಲ್ಲಿ ನೀವು ಭಿನ್ನಮತ ತಳೆದಿದ್ದಿರೋ ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಖಂಡಿತ ವಿವರಿಸಿಕೊಡುವನು.

Explanation & meanings · 1
  1. ಅಂದರೆ ನಾವು ಯಾವುದೇ ಸ್ಥಿತಿಯಲ್ಲೂ ನಿಮಗೆ ಸಹಾಯ ಮಾಡುತ್ತೇವೆಂದು ಒಂದು ಗುಂಪಿಗೆ ವಾಗ್ದಾನ ಮಾಡಿ ಅವರೊಡನೆ ಮೈತ್ರಿಯ ಕರಾರು ಮಾಡುತ್ತೀರಿ. ನಂತರ ಅವರಿಗೆ ವಿರುದ್ಧವಾಗಿ ಅವರಿಗಿಂತಲೂ ಹೆಚ್ಚು ಜನಬಲ ಅಥವಾ ಧನಬಲವಿರುವ ಗುಂಪಿನೊಂದಿಗೆ ಮೈತ್ರಿ ಮಾಡುವ ಅವಕಾಶ ಸಿಕ್ಕಿದರೆ ಮೊದಲನೆ ಗುಂಪಿನೊಂದಿಗೆ ಮಾಡಿದ ಕರಾರನ್ನು ಎಸೆದು ಈ ಗುಂಪಿನೊಂದಿಗೆ ಮೈತ್ರಿಯ ಕರಾರು ಮಾಡಿಕೊಳ್ಳುತ್ತೀರಿ. ಇಂತಹ ಸ್ಥಿತಿಯು ಇಸ್ಲಾಮೀ ಪೂರ್ವ ಜಾಹಿಲೀ ಕಾಲದಲ್ಲಿ ಸಾಮಾನ್ಯವಾಗಿತ್ತು. ಇದನ್ನು ಇಸ್ಲಾಂ ವಿರೋಧಿಸುತ್ತದೆ.