ಫಲಿತಾಂಶಗಳನ್ನು ಫಿಲ್ಟರ್ ಮಾಡಿ
339 ಕಾರ್ಡ್ಗಳು
الموضوعات
الموضوعات (13)
التصنيف الشرعي
Filter ▾
حجم المحتوى4
ಉತ್ತರ: ಸೂರ ಅಲ್-ಹುಮಝ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
(ಎದುರೆದುರೇ) ಜನರನ್ನು ಮೂದಲಿಸುವ ಮತ್ತು (ಬೆನ್ನ ಹಿಂದೆ) ದೂಷಿಸುವ ಅಭ್ಯಾಸವಿರುವ ಪ್ರತಿಯೊಬ್ಬನಿಗೂ ವಿನಾಶವಿದೆ.
ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು.
ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ.
ಖಂಡಿತ ಇಲ್ಲ. ಅವನು ಪುಡಿಗುಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು.
ಪುಡಿಗುಟ್ಟಿ ಬಿಡುವ ಆ ಸ್ಥಳ ಏನೆಂದು ನಿಮಗೇನು ಗೊತ್ತು?
ಚೆನ್ನಾಗಿ ಧಗಧಗಿಸಲ್ಪಟ್ಟಿರುವ ಅಲ್ಲಾಹನ ಬೆಂಕಿ.
ಅದು ಹೃದಯಗಳವರೆಗೂ ತಲಪುವುದು.
ಅದನ್ನು ಅವರ ಮೇಲೆ ಆವರಿಸಿ ಮುಚ್ಚಿ ಬಿಡಲಾಗುವುದು.
ಅವರು ಎತ್ತರವಾದ ಸ್ತಂಭಗಳಲ್ಲಿ (ಸಿಲುಕಿಕೊಂಡಿರುವ ಸ್ಥಿತಿಯಲ್ಲಿ).
[ಸೂರ ಅಲ್-ಹುಮಝ:1- 9].
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು 2
ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು 4
ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು? 5
ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ 6
ಅದು ಹೃದಯಗಳ ಮೇಲೆ ಏರಿ ಬರುತ್ತದೆ 7
[ಅಲ್-ಹುಮಝ:1-9].
ಜನರನ್ನು ಪದೇ ಪದೇ ದೂಷಿಸುವ ಮತ್ತು ನಿಂದಿಸುವವರಿಗೆ ದುರ್ಗತಿ ಮತ್ತು ಕಠೋರ ಶಿಕ್ಷೆಯಿದೆ.
ಹಣವನ್ನು ಕೂಡಿಡುವುದು ಮತ್ತು ಎಣಿಸುವುದರ ಹೊರತು ಬೇರೆ ಯಾವುದರಲ್ಲೂ ಆಸಕ್ತಿಯಿಲ್ಲದವನು.
ತಾನು ಕೂಡಿಟ್ಟ ಹಣವು ತನ್ನನ್ನು ಸಾವಿನಿಂದ ರಕ್ಷಿಸುತ್ತದೆ ಮತ್ತು ತಾನು ಭೂಲೋಕದಲ್ಲಿ ಶಾಶ್ವತವಾಗಿ ಬದುಕುತ್ತೇನೆ ಎಂದು ಅವನು ಭಾವಿಸುತ್ತಾನೆ.
ನಿಜಸ್ಥಿತಿಯು ಈ ಅವಿವೇಕಿ ಚಿಂತಿಸಿದಂತಲ್ಲ. ಅವನನ್ನು ಖಂಡಿತವಾಗಿಯೂ ನರಕಾಗ್ನಿಗೆ ಎಸೆಯಲಾಗುವುದು. ಅದರ ಕಠೋರತೆಯಿಂದಾಗಿ ಅದರಲ್ಲಿ ಎಸೆಯಲಾಗುವ ಎಲ್ಲವನ್ನೂ ಅದು ಪುಡಿಗುಟ್ಟಿ ಬಿಡುವುದು.
ಓ ಪ್ರವಾದಿಯವರೇ! ಎಸೆಯಲಾಗುವ ಎಲ್ಲವನ್ನೂ ಪುಡಿಗಟ್ಟುವ ಈ ಬೆಂಕಿ ಏನೆಂದು ನಿಮಗೇನು ಗೊತ್ತು?
ಅದು ಧಗಧಗನೆ ಉರಿಯುವ ಅಲ್ಲಾಹನ ಅಗ್ನಿಯಾಗಿದೆ.
ಅದು ಜನರ ದೇಹಗಳನ್ನು ಬೇಧಿಸಿ ಅವರ ಹೃದಯಗಳನ್ನು ತಲುಪುತ್ತದೆ.
ಅದರ ದ್ವಾರಗಳು ಶಿಕ್ಷೆಗೊಳಗಾದವರ ಮೇಲೆ ಮುಚ್ಚಿಕೊಂಡಿರುವವು.
ಅವರು ಅಲ್ಲಿಂದ ಹೊರಬರದಿರಲೆಂದು ಅವರಿಗೆ ಉದ್ದಕ್ಕೆ ಚಾಚಲಾಗಿರುವ ಸ್ತಂಭಗಳಿಂದ ಕಟ್ಟಲಾಗುವುದು.
ಉತ್ತರ: ಸೂರ ಅಲ್-ಫೀಲ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ನಿಮ್ಮ ಪರಿಪಾಲಕನು (ಅಲ್ಲಾಹು) ಆನೆಯ ಜನರೊಡನೆ ಹೇಗೆ ವರ್ತಿಸಿದನೆಂದು ನೀವು ನೋಡಿಲ್ಲವೇ?
2 ಅವನು ಅವರ ಯೋಜನೆಯನ್ನು ನಿರರ್ಥಕಗೊಳಿಸಿ ಬಿಡಲಿಲ್ಲವೇ?
3 ಮತ್ತು ಅವನು ಅವರ ಮೇಲೆ ಪಕ್ಷಿಗಳ ಗುಂಪುಗಳನ್ನೇ ಕಳುಹಿಸಿಬಿಟ್ಟನು.
4 ಅವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಎಸೆಯುತ್ತಿದ್ದವು.
5 ತರುವಾಯ ಅವನು ಅವರನ್ನು (ಪ್ರಾಣಿಗಳು) ತಿಂದು ಹಾಕಿದ ಹೊಟ್ಟಿನಂತೆ ಮಾಡಿಬಿಟ್ಟನು.
[ಅಲ್-ಫೀಲ್:1-5].
ತಫ್ಸೀರ್ (ವಿವರಣೆ).
ಓ ಪ್ರವಾದಿಯವರೇ! ಅಬ್ರಹ ಮತ್ತು ಅವನ ಸೈನಿಕರು —ಅಂದರೆ ಆನೆ ಸೇನೆಯ ಜನರು— ಕಅಬಾವನ್ನು ಕೆಡವಲು ಬಂದಾಗ ನಿಮ್ಮ ಪ್ರಭು ಏನು ಮಾಡಿದನೆಂದು ನಿಮಗೆ ತಿಳಿದಿಲ್ಲವೇ?
ಅದನ್ನು ಕೆಡವಲು ಅವರು ಹೂಡಿದ ಕುತಂತ್ರವನ್ನು ಅಲ್ಲಾಹನು ಸಂಪೂರ್ಣ ವಿಫಲಗೊಳಿಸಿದನು. ಆದ್ದರಿಂದ, ಜನರನ್ನು ಕಅಬಾದಿಂದ ದೂರಗೊಳಿಸಬೇಕು ಎಂಬ ಅವರ ಆಸೆ ಕೈಗೂಡಲಿಲ್ಲ ಅವರಿಗೆ ವಿನಾಶದ ಹೊರತಾಗಿ ಬೇರೇನೂ ಸಿಗಲಿಲ್ಲ.
ಅವನು ಅವರ ವಿರುದ್ಧ ಹಿಂಡು ಹಿಂಡಾಗಿ ಬರುವ ಹಕ್ಕಿಗಳನ್ನು ಕಳುಹಿಸಿದನು.
ಅವು ಅವರ ಮೇಲೆ ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಎಸೆಯುತ್ತಿದ್ದವು.
ನಂತರ ಅಲ್ಲಾಹನು ಅವರನ್ನು ಜಾನುವಾರುಗಳು ತಿಂದ ಮತ್ತು ತುಳಿದ ಎಲೆಗಳಂತೆ ಮಾಡಿದನು.
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ನಿಮ್ಮ ಪ್ರಭು ಆನೆಯವರೊಂದಿಗೆ ಹೇಗೆ ವರ್ತಿಸಿದನೆಂಬುದನ್ನು ನೀವು ನೋಡಲಿಲ್ಲವೇ?
[ಸೂರ ಅಲ್-ಫೀಲ್:1-5]
ಉತ್ತರ: ಸೂರ ಖುರೈಶ್ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಕುರೈಶರು ಪರಿಚಿತರಾದುದಕ್ಕಾಗಿ.
2 (ಅಂದರೆ) ಚಳಿಗಾಲ ಮತ್ತು ಬೇಸಗೆಯ ಪ್ರಯಾಣಗಳಿಗೆ ಪರಿಚಿತರಾದುದಕ್ಕಾಗಿ.
3 ಅವರು ಈ ಭವನದ ಪ್ರಭುವಿನ ಆರಾಧನೆ ಮಾಡಲಿ.
3 ಅವನು ಅವರನ್ನು ಹಸಿವೆಯಿಂದ ಪಾರುಗೊಳಿಸಿ ಅವರಿಗೆ ಉಣಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿ ಪ್ರದಾನ ಮಾಡಿದನು.
[ಸೂರ ಕುರೈಷ್:1- 4].
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಕುರೈಷರನ್ನು ಪರಿಚಿತಗೊಳಿಸುವುದಕ್ಕಾಗಿ 1
ಅಂದರೆ ಅವರಿಗೆ ಚಳಿ ಮತ್ತು ಬೇಸಿಗೆಯ ಪ್ರಯಾಣಗಳನ್ನು ಪರಿಚಿತಗೊಳಿಸುವುದಕ್ಕಾಗಿ 2
ಆದ್ದರಿಂದ ಅವರು ಈ ಭವನದ (ಕಅಬಾಲಯದ) ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಲಿ 3
ಅವನು ಯಾರೆಂದರೆ ಅವರು ಹಸಿದಿರುವಾಗ ಅವರಿಗೆ ಆಹಾರವನ್ನು ಒದಗಿಸಿದವನು ಮತ್ತು ಅವರು ಭಯದಲ್ಲಿದ್ದಾಗ ಅವರಿಗೆ ನಿರ್ಭಯವನ್ನು ನೀಡಿದವನು.
[ಕುರೈಷ್:1-4].
ಇಲ್ಲಿ ಹೇಳಿರುವುದು ಅವರಿಗೆ ಪರಿಚಿತವಾದ ಚಳಿಗಾಲ ಮತ್ತು ಬೇಸಿಗೆಯ ಪ್ರಯಾಣಗಳಾಗಿವೆ.
ಅವರು ಸುರಕ್ಷಿತವಾಗಿ ಚಳಿಗಾಲದಲ್ಲಿ ಯಮನ್ ಮತ್ತು ಬೇಸಿಗೆಯಲ್ಲಿ ಸಿರಿಯಾಗೆ ಕೈಗೊಳ್ಳುವ ಪ್ರಯಾಣಗಳು.
ಅವರು ಈ ಪವಿತ್ರ ಭವನದ ಪ್ರಭುವಾದ ಅಲ್ಲಾಹನನ್ನು ಮಾತ್ರ ಆರಾಧಿಸಲಿ. ಅವನೇ ಅವರಿಗೆ ಈ ಪ್ರಯಾಣವನ್ನು ಸುಗಮಗೊಳಿಸಿದವನು; ಅವರು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ.
ಅವರಿಗೆ ಹಸಿವಾದಾಗ ಅವರಿಗೆ ಆಹಾರ ನೀಡಿದವನು ಮತ್ತು ಅವರಿಗೆ ಭಯವಾದಾಗ ಅವರಿಗೆ ನಿರ್ಭಯತೆ ನೀಡಿದವನು. ಅಲ್ಲಾಹು ಅರಬ್ಬರ ಹೃದಯಗಳಲ್ಲಿ ಹರಮ್ ಮತ್ತು ಅದರ ನಿವಾಸಿಗಳ ಬಗ್ಗೆ ಗೌರವನ್ನಿಟ್ಟದ್ದೇ ಇದಕ್ಕೆ ಕಾರಣವಾಗಿದೆ.
ಉತ್ತರ: ಸೂರ ಅಲ್-ಮಾಊನ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ?
ಅವನೇ ಅನಾಥನನ್ನು ಹೊರತಳ್ಳುವವನು 2
ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ 3
ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ.
ಅವರು ಯಾರೆಂದರೆ ತಮ್ಮ ನಮಾಝ್ಗಳ ಬಗ್ಗೆ ಅಲಕ್ಷ್ಯರಾಗಿರುವವರು 5
ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ 6.
ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ 7
[ಸೂರ ಅಲ್-ಮಾಊನ್: 1-7].
ತಫ್ಸೀರ್ (ವಿವರಣೆ).
ಪುನರುತ್ಥಾನ ದಿನದ ಪ್ರತಿಫಲವನ್ನು ನಿಷೇಧಿಸುವವನು ಯಾರೆಂದು ನಿಮಗೆ ತಿಳಿದಿದೆಯೇ?
ಅವನು ಅನಾಥರಿಗೆ ಅವರು ಕೇಳಿದ್ದನ್ನು ಕೊಡದೆ ನಿರ್ದಾಕ್ಷಿಣ್ಯವಾಗಿ ಅಟ್ಟುವವನು.
ಬಡವರಿಗೆ ಆಹಾರ ನೀಡುಲು ತನಗಾಗಲಿ ಇತರರಿಗಾಗಲಿ ಪ್ರೇರಣೆ ನೀಡದವನು.
ನಮಾಝ್ ಮಾಡುವವರಿಗೆ ವಿನಾಶ ಮತ್ತು ಶಿಕ್ಷೆ ಕಾದಿದೆ.
ಅವರು ತಮ್ಮ ನಮಾಝಿನ ಬಗ್ಗೆ ನಿರ್ಲಕ್ಷ್ಯರಾಗಿರುವರು. ಅದರ ಸಮಯ ಮುಗಿಯುವವರೆಗೂ ಅವರು ಅದರ ಬಗ್ಗೆ ಯೋಚಿಸುವುದಿಲ್ಲ.
ಅವರು ತಮ್ಮ ನಮಾಝ್ ಮತ್ತು ಸತ್ಕರ್ಮಗಳನ್ನು ತೋರಿಕೆಗಾಗಿ ನಿರ್ವಹಿಸುತ್ತಾರೆ. ಅಲ್ಲಾಹನಿಗೆ ನಿಷ್ಕಳಂಕವಾಗಿ ನಿರ್ವಹಿಸುವುದಿಲ್ಲ.
ಇತರರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ತೊಂದರೆಯಾಗದ ಸಣ್ಣ ಸಣ್ಣ ವಿಷಯಗಳಲ್ಲೂ ಅವರು ಇತರರಿಗೆ ಸಹಾಯ ಮಾಡುವುದಿಲ್ಲ.
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
ನೀವು ಕಂಡಿರಾ ಪರಲೋಕದ ಕರ್ಮಫಲಗಳನ್ನು ನಿರಾಕರಿಸುವವನನ್ನು?
ಅವನೇ ತಾನೆ, ಅನಾಥನನ್ನು ದೂರ ದಬ್ಬುವವನು.
ಮತ್ತು ದರಿದ್ರನಿಗೆ ಊಟ ಕೊಡಲು ಪ್ರೇರೇಪಿಸದವನು!
ಅವರು ತಮ್ಮ ನಮಾಝಿನ ಬಗ್ಗೆ ಅನಾಸ್ಥೆ ತೋರುತ್ತಾರೆ,
ಅವರು ತೋರಿಕೆಯ ಕೆಲಸ ಮಾಡುತ್ತಾರೆ.
ಮತ್ತು (ಜನರಿಗೆ) ಸಾಮಾನ್ಯ ಅವಶ್ಯಕ ವಸ್ತುಗಳನ್ನು ಕೊಡುವುದಕ್ಕೂ ಹಿಂಜರಿಯುತ್ತಾರೆ.
ಉತ್ತರ: ಸೂರ ಅಲ್-ಕೌಸರ್ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 (ಸಂದೇಶವಾಹಕರೇ) ನಾವು ನಿಮಗೆ ಕೌಸರ್ ದಯಪಾಲಿಸಿರುತ್ತೇವೆ.
2 ನೀವಿನ್ನು ನಿಮ್ಮ ಪ್ರಭುವಿಗಾಗಿಯೇ ನಮಾಝ್ ನಿರ್ವಹಿಸಿರಿ ಮತ್ತು ಬಲಿದಾನ ನೀಡಿರಿ.
3 ಖಂಡಿತವಾಗಿಯೂ ನಿಮ್ಮ ಶತ್ರುವೇ ಮೂಲ ಕಡಿಯಲ್ಪಟ್ಟವನಾಗಿರುವನು.
[ಸೂರ ಅಲ್-ಕೌಸರ್:1-3]
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ.
ಆದ್ದರಿಂದ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಮಾಝ್ ಮಾಡಿರಿ ಮತ್ತು ಬಲಿ ಅರ್ಪಿಸಿರಿ 2
ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು.
[ಸೂರಃ ಅಲ್-ಕೌಸರ್: 1-3].
ಓ ಪ್ರವಾದಿಯವರೇ, ನಾವು ನಿಮಗೆ ಹೇರಳ ಒಳಿತುಗಳನ್ನು ನೀಡಿದ್ದೇವೆ. ಸ್ವರ್ಗದಲ್ಲಿರುವ ಕೌಸರ್ ನದಿಯು ಅದರಲ್ಲೊಂದಾಗಿದೆ.
ಆದ್ದರಿಂದ, ಇದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಸಲ್ಲಿಸಿರಿ. ಅಂದರೆ ಅವನಿಗೆ ಮಾತ್ರ ನಮಾಝ್ ಮತ್ತು ಬಲಿಕರ್ಮಗಳನ್ನು ನಿರ್ವಹಿಸಿರಿ. ಬಹುದೇವರಾಧಕರು ಅವರ ವಿಗ್ರಹಗಳ ಸಾಮೀಪ್ಯ ಪಡೆಯಲು ಬಲಿ ನೀಡುವಂತೆ ನೀವು ಮಾಡಬೇಡಿ.
ನಿಮ್ಮನ್ನು ದ್ವೇಷಿಸುವವನು ಎಲ್ಲಾ ಒಳಿತುಗಳನ್ನು ನಿಷೇಧಿಸಲಾದವನು. ಅವನನ್ನು ಯಾರಾದರೂ ನೆನಪು ಮಾಡಿದರೂ ಕೆಟ್ಟದಾಗಿಯಲ್ಲದೆ ನೆನಪು ಮಾಡುವುದಿಲ್ಲ.
ಉತ್ತರ: ಸೂರ ಅಲ್-ಕಾಫಿರೂನ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಹೇಳಿರಿ: “ಓ ಸತ್ಯನಿಷೇಧಿಗಳೇ!
2 ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ.
ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ 3.
5 ಮತ್ತು ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ.
6 ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ.
[ಸೂರಾ ಅಲ್-ಕಾಫಿರೂನ್:1-6].
ತಫ್ಸೀರ್ (ವಿವರಣೆ).
ಓ ಪ್ರವಾದಿಯವರೇ, ಹೇಳಿರಿ: ಓ ಅಲ್ಲಾಹನನ್ನು ನಿಷೇಧಿಸಿದವರೇ
ಈಗಲಾಗಲಿ ಅಥವಾ ಭವಿಷ್ಯದಲ್ಲಾಗಲಿ ನೀವು ಆರಾಧಿಸುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
ನಾನು ಆರಾಧಿಸುವವನನ್ನು —ಅಂದರೆ ಅಲ್ಲಾಹನನ್ನು ಮಾತ್ರ— ನೀವು ಆರಾಧಿಸುವುದಿಲ್ಲ.
ನೀವು ಆರಾಧಿಸುವ ವಿಗ್ರಹಗಳನ್ನು ನಾನು ಎಂದಿಗೂ ಆರಾಧಿಸುವುದಿಲ್ಲ.
ನೀವು ನಿಮಗಾಗಿ ಸ್ವಯಂ ನಿರ್ಮಿಸಿದ ನಿಮ್ಮ ಧರ್ಮವು ನಿಮಗೆ. ಅಲ್ಲಾಹು ನನಗೆ ಅವತೀರ್ಣಗೊಳಿಸಿದ ಧರ್ಮವು ನನಗೆ.
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಹೇಳಿ ಬಿಡಿರಿ! ಓ, ಸತ್ಯನಿಷೇಧಿಗಳೇ,
3 ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ.
[ಸೂರ ಅಲ್-ಕಾಫಿರೂನ್:1-6].
ಉತ್ತರ: ಸೂರ ಅನ್ನಸ್ರ್ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಅಲ್ಲಾಹನ ಸಹಾಯ ಬಂದು ಬಿಟ್ಟಾಗ ಮತ್ತು ವಿಜಯ ಪ್ರಾಪ್ತವಾದಾಗ.
2 ಮತ್ತು (ಸಂದೇಶವಾಹಕರೇ) ಜನರು ತಂಡೋಪತಂಡವಾಗಿ ಅಲ್ಲಾಹನ ಧರ್ಮದಲ್ಲಿ ಪ್ರವೇಶಿಸುತ್ತಿರುವುದನ್ನು ನೀವು ಕಂಡಾಗ.
3 ನಿಮ್ಮ ಪ್ರಭುವಿನ ಪ್ರಶಂಸೆಯೊಂದಿಗೆ ಅವನ ಕೀರ್ತನೆ ಮಾಡಿರಿ ಮತ್ತು ಅವನೊಡನೆ ಕ್ಷಮೆ ಯಾಚಿಸಿರಿ. ನಿಸ್ಸಂದೇಹವಾಗಿಯೂ ಅವನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನಾಗಿರುತ್ತಾನೆ.
[ಸೂರ ಅನ್ನಸ್ರ್:1-3].
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಅಲ್ಲಾಹನ ಸಹಾಯ ಮತ್ತು (ಮಕ್ಕಾ) ವಿಜಯ ಬಂದಾಗ.
ಜನರು ಅಲ್ಲಾಹನ ಧರ್ಮಕ್ಕೆ ತಂಡೋಪತಂಡವಾಗಿ ಪ್ರವೇಶಿಸುವುದನ್ನು ನೀವು ನೋಡುವಾಗ 2
ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. ಅವನೊಡನೆ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ.
[ಅನ್ನಸ್ರ್:1-3].
ಓ ಪ್ರವಾದಿಯವರೇ, ಅಲ್ಲಾಹನ ವತಿಯಿಂದ ನಿಮ್ಮ ಧರ್ಮಕ್ಕೆ ವಿಜಯ ಮತ್ತು ಶಕ್ತಿ ಬಂದಾಗ ಮತ್ತು ಮಕ್ಕಾ ವಿಜಯ ಸಂಭವಿಸಿದಾಗ.
ಮತ್ತು ಜನರು ಒಂದರ ನಂತರ ಒಂದರಂತೆ ಗುಂಪು ಗುಂಪಾಗಿ ಇಸ್ಲಾಂ ಧರ್ಮಕ್ಕೆ ಬರುವುದನ್ನು ನೀವು ನೋಡಿದಾಗ.
ಇದು ನಿಮ್ಮ ಕರ್ತವ್ಯದ ಸಮಾಪ್ತಿಯು, ನಿಮ್ಮ ಆಯುಷ್ಯದ ಅಂತ್ಯವು ಮತ್ತು ನಿಮ್ಮ ಪ್ರಭುವಿನೊಂದಿಗಿನ ಭೇಟಿಯು ಹತ್ತಿರವಾಗುತ್ತಿದೆ ಎಂಬುದರ ಚಿಹ್ನೆಯಾಗಿದೆಯೆಂದು ನೀವು ತಿಳಿದಿರಬೇಕಾಗಿದೆ. ಆದ್ದರಿಂದ ಸಹಾಯ ಮತ್ತು ವಿಜಯ ನೀಡಿದ್ದಕ್ಕಾಗಿ ನಿಮ್ಮ ಪ್ರಭುವಿಗೆ ಕೃತಜ್ಞತೆ ಸಲ್ಲಿಸಲು ಅವನ ತಸ್ಬೀಹ್ ಮಾಡಿ ಮತ್ತು ಅವನಲ್ಲಿ ಕ್ಷಮೆಯಾಚಿಸಿ. ಏಕೆಂದರೆ ಅವನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರನ್ನು ಕ್ಷಮಿಸುತ್ತಾನೆ.
ಉತ್ತರ: ಸೂರ ಅಲ್-ಮಸದ್ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಅಬೂಲಹಬನ ಕೈಗಳು ಮುರಿದು ಹೋದುವು ಮತ್ತು ಅವನು ನಾಶವಾದನು.
2 ಅವನ ಸಂಪತ್ತಾಗಲಿ ಅವನ ಸಂಪಾದನೆ ಯಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ.
3 ಖಂಡಿತವಾಗಿಯೂ ಅವನು ಧಗಧಗಿಸುವ ಅಗ್ನಿಯಲ್ಲಿ ಹಾಕಲ್ಪಡುವನು.
4 ಮತ್ತು (ಅವನ ಜೊತೆ) ಸೌದೆಯನ್ನು ಹೊರುವವಳಾದ ಅವನ ಪತ್ನಿ ಕೂಡಾ.
5 ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನ ಹಗ್ಗವಿರುವುದು.
[ಸೂರ ಅಲ್-ಮಸದ್:1-5]
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಅವನ ಆಸ್ತಿ ಅಥವಾ ಅವನ ಸಂಪಾದನೆ ಅವನ ಪ್ರಯೋಜನಕ್ಕೆ ಬರಲಿಲ್ಲ.
ಅವನು ಸದ್ಯವೇ ಜ್ವಲಿಸುವ ನರಕವನ್ನು ಪ್ರವೇಶಿಸುವನು 3
ಸೌದೆ ಹೊರುವವಳಾದ ಅವನ ಹೆಂಡತಿಯು ಕೂಡ (ಅವನೊಡನೆ ಪ್ರವೇಶಿಸುವಳು) 4
[ಅಲ್-ಮಸದ್:1-5].
ಪ್ರವಾದಿಯ (ಸ) ತಂದೆಯ ಸಹೋದರ, ಅಬೂ ಲಹಬ್ ಬಿನ್ ಅಬ್ದುಲ್ ಮುತ್ತಲಿಬ್ನ ಕೈಗಳು ಅವನ ಕಾರ್ಯಗಳ ನಷ್ಟದಿಂದಾಗಿ ನಾಶವಾದವು ಮತ್ತು ಅವನ ಪರಿಶ್ರಮ ವಿಫಲವಾಯಿತು; ಏಕೆಂದರೆ ಅವನು ಪ್ರವಾದಿ (ಸ) ರಿಗೆ ಕಿರುಕುಳ ನೀಡುತ್ತಿದ್ದನು.
ಅವನ ಸಂಪತ್ತು ಮತ್ತು ಮಕ್ಕಳಿಂದ ಅವನಿಗೆ ಉಪಯೋಗವಾಗಿದೆಯೇ? ಇಲ್ಲ. ಅವನ ಸಂಪತ್ತು ಮತ್ತು ಮಕ್ಕಳು ಅವನನ್ನು ಶಿಕ್ಷೆಯಿಂದ ರಕ್ಷಿಸಲಿಲ್ಲ ಮತ್ತು ಅವನಿಗೆ ದಯಾಭಿಕ್ಷೆಯನ್ನೂ ಕೊಡಲಿಲ್ಲ.
ಪುನರುತ್ಥಾನ ದಿನ ಅವನು ಜ್ವಾಲೆಗಳಿರುವ ನರಕವನ್ನು ಪ್ರವೇಶಿಸುವನು ಮತ್ತು ಅದರ ಬಿಸಿಯನ್ನು ಅನುಭವಿಸುವನು.
ಪ್ರವಾದಿ صلى الله عليه وسلم ನಡೆಯುವ ದಾರಿಯಲ್ಲಿ ಮುಳ್ಳುಗಳನ್ನು ಎಸೆಯುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದ ಆತನ ಪತ್ನಿ ಉಮ್ಮು ಜಮೀಲ್ ಕೂಡ ನರಕವನ್ನು ಪ್ರವೇಶಿಸುವಳು.
ಅವಳ ಕೊರಳಿಗೆ ಬಿಗಿಯಾಗಿ ಕಟ್ಟಲಾದ ಹಗ್ಗವಿರುವುದು ಅದರ ಮೂಲಕ ಅವಳನ್ನು ನರಕಕ್ಕೆ ಒಯ್ಯಲಾಗುವುದು.
ಉತ್ತರ: ಸೂರ ಅಲ್-ಇಖ್ಲಾಸ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಹೇಳಿರಿ: “ಅವನು ಅಲ್ಲಾಹು, ಏಕೈಕನು.
ಅಲ್ಲಾಹು ನಿರಪೇಕ್ಷನು 2
3 ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ.
4 ಅವನಿಗೆ ಸರಿಸಮಾನರು ಯಾರೂ ಇಲ್ಲ.
[ಅಲ್-ಇಖ್ಲಾಸ್:1-4]
ತಫ್ಸೀರ್ (ವಿವರಣೆ).
ಓ ಪ್ರವಾದಿಯವರೇ, ಹೇಳಿರಿ: ಅವನು ಅಲ್ಲಾಹು; ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ.
ಅಂದರೆ, ಸೃಷ್ಟಿಯ ಎಲ್ಲಾ ಅಗತ್ಯಗಳನ್ನು ಅವನೆಡೆಗೆ ಎತ್ತಲಾಗುತ್ತದೆ.
ಸರ್ವಶಕ್ತನಾದ ಅವನಿಗೆ ಯಾವುದೇ ಮಕ್ಕಳಿಲ್ಲ ಮತ್ತು ತಂದೆಯೂ ಇಲ್ಲ.
ಅವನ ಸೃಷ್ಟಿಗಳಲ್ಲಿ ಯಾರೂ ಅವನಂತೆ ಇಲ್ಲ.
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಹೇಳಿರಿ- ಅವನು ಅಲ್ಲಾಹನು ಏಕೈಕನು.
2 ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು.
[ಸೂರ ಅಲ್-ಇಖ್ಲಾಸ್:1-4].
ಉತ್ತರ: ಸೂರ ಅಲ್-ಫಲಕ್ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಹೇಳಿರಿ- ನಾನು ಪ್ರಭಾತದ ಪ್ರಭುವಿನ ಅಭಯ ಯಾಚಿಸುತ್ತೇನೆ.
2 ಅವನು(ಅಲ್ಲಾಹನು) ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ.
3 ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ.
4 ಗಂಟುಗಳ ಮೇಲೆ ಊದುವವರ (ಸ್ತ್ರೀಯರ) ಕೇಡಿನಿಂದ.
5 ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಭಯ ಯಾಚಿಸುತ್ತೇನೆ).
[ಸೂರ ಅಲ್-ಫಲಕ್:1-5]
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.
ಗಂಟುಗಳನ್ನು ಹಾಕಿ ಅದಕ್ಕೆ ಊದುವ ಮಾಟಗಾತಿಯರ ಕೆಡುಕಿನಿಂದ 4
[ಅಲ್-ಫಲಕ್:1-5]
ಓ ಪ್ರವಾದಿಯವರೇ, ಹೇಳಿರಿ: ನಾನು ಪ್ರಭಾತದ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.
ಹಿಂಸಾತ್ಮಕ ಜೀವಿಗಳ ಕೆಡುಕಿನಿಂದ.
ರಾತ್ರಿಯಲ್ಲಿ ಪ್ರಾಣಿಗಳು ಮತ್ತು ಕಳ್ಳರಿಂದ ಉಂಟಾಗುವ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
ಮತ್ತು ಗಂಟುಗಳ ಮೇಲೆ ಊದುವ ಮಾಟಗಾರರ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
ಅಸೂಯೆಗಾರ ಮತ್ತು ಜನರಿಗೆ ಅಲ್ಲಾಹು ದಯಪಾಲಿಸಿದ ಅನುಗ್ರಹಗಳು ಅವರಿಂದ ನಿವಾರಣೆಯಾಗಬೇಕು ಮತ್ತು ಅವರಿಗೆ ಹಾನಿಯಾಗಬೇಕೆಂದು ಬಯಸುವ ಮನುಷ್ಯ ದ್ವೇಷಿಯ ಕೆಡುಕುಗಳಿಂದ.
ಉತ್ತರ: ಸೂರ ಅನ್ನಾಸ್ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
1 ಹೇಳಿರಿ- ನಾನು ಮಾನವರ ಪ್ರಭುವಿನ ಅಭಯ ಯಾಚಿಸುತ್ತೇನೆ.
2 ಮಾನವರ ಸಾಮ್ರಾಟನ
3 ಮಾನವರ ನೈಜ ಆರಾಧ್ಯನ
4 ಪದೇಪದೇ ಬಂದು ದುಷ್ಪ್ರೇರಣೆ ನೀಡುವವನ ಕೇಡಿನಿಂದ
5 ಜನರ ಮನಸ್ಸುಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನ ಕೇಡಿನಿಂದ
6 ಅವನು ಜಿನ್ನ್ಗಳ ಪೈಕಿಯಾಗಿರಲಿ, ಮಾನವರ ಪೈಕಿಯಾಗಿರಲಿ.
[ಸೂರ ಅನ್ನಾಸ್:1-6].
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.
ಮನುಷ್ಯರ ಒಡೆಯನಲ್ಲಿ 2
ಮನುಷ್ಯರ ದೇವನಲ್ಲಿ 3
ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ.
ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು 5
ಅವರು ಜಿನ್ನ್ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.”
[ಅನ್ನಾಸ್:1-6].
ಓ ಪ್ರವಾದಿಯವರೇ, ಹೇಳಿರಿ: ನಾನು ಮನುಷ್ಯರ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.
ಅವರ ಕೆಲಸ-ಕಾರ್ಯಗಳಲ್ಲಿ ಅವನು ಅವನಿಷ್ಟದಂತೆ ವ್ಯವಹರಿಸುತ್ತಾನೆ. ಅವನ ಹೊರತು ಅವರಿಗೆ ಬೇರೆ ಯಜಮಾನರಿಲ್ಲ.
ಅವನೇ ನಿಜವಾದ ಆರಾಧ್ಯ. ಅವನ ಹೊರತು ಅವರಿಗೆ ಬೇರೆ ನಿಜವಾದ ಆರಾಧ್ಯರಿಲ್ಲ.
ಜನರಿಗೆ ದುರ್ಭೋಧನೆ ಮಾಡುವ ಶೈತಾನನ ಕೆಡುಕಿನಿಂದ.
ಜನರ ಹೃದಯಗಳಲ್ಲಿ ದುರ್ಬೋಧನೆಗಳನ್ನು ಹಾಕುತ್ತಾನೆ.
ಅಂದರೆ, ದುರ್ಬೋಧನೆ ನೀಡುವವನು ಮನುಷ್ಯರಲ್ಲಿ ಸೇರಿದವನು ಅಥವಾ ಜಿನ್ನ್ಗಳಲ್ಲಿ ಸೇರಿದವನು ಆಗಿರಬಹುದು.
ಉತ್ತರ: ಅಮೀರುಲ್ ಮೂಮಿನೀನ್ ಅಬು ಹಫ್ಸ್ ಉಮರ್ ಬಿನ್ ಖತ್ತಾಬ್ رَضِيَ اللَّهُ تَعَالَى عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
“ಕರ್ಮಗಳು ಉದ್ದೇಶಗಳ ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಉದ್ದೇಶಿಸಿದ್ದನ್ನು ಮಾತ್ರ ಹೊಂದಿರುತ್ತಾನೆ. ಆದ್ದರಿಂದ ಯಾರು ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಕಡೆಗೆ ವಲಸೆ ಹೋದನೋ; ಅವನ ವಲಸೆಯು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗಾಗಿದೆ. ಯಾರು ಲೌಕಿಕ ಪ್ರಯೋಜನಗಳಿಗಾಗಿ ಅಥವಾ ಒಬ್ಬ ಮಹಿಳೆಯನ್ನು ಮದುವೆಯಾಗಲು ವಲಸೆ ಹೋದನೋ; ಅವನ ವಲಸೆಯು ಅವನು ವಲಸೆ ಹೋದುದಕ್ಕಾಗಿದೆ.”
[ಬುಖಾರಿ ಮತ್ತು ಮುಸ್ಲಿಮ್]
ಹದೀಸಿನ ಪ್ರಯೋಜನಗಳು:
- ಪ್ರತಿಯೊಂದು ಕರ್ಮವೂ ಒಂದು ಉದ್ದೇಶವನ್ನು ಹೊಂದಿಯೇ ಇರುತ್ತದೆ. ಉದಾ: ನಮಾಜ್, ಉಪವಾಸ, ಹಜ್ಜ್ ಮತ್ತು ಇತರೆ ಕರ್ಮಗಳು.
- ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು ಕಡ್ಡಾಯವಾಗಿದೆ.
ಉತ್ತರ: ಸತ್ಯವಿಶ್ವಾಸಿಗಳ ಮಾತೆ ಉಮ್ಮು ಅಬ್ದುಲ್ಲಾ ಆಯಿಷಾ رَضِيَ اللَّهُ عَنْهَا ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರುﷺ ಹೇಳಿದರು:
"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ ಏನನ್ನಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ."
[ಬುಖಾರಿ ಮತ್ತು ಮುಸ್ಲಿಮ್]
ಹದೀಸಿನ ಪ್ರಯೋಜನಗಳು:
- ಧರ್ಮದಲ್ಲಿ ಹೊಸ ಆವಿಷ್ಕಾರಗಳ ನಿಷೇಧ.
- ಹೊಸದಾಗಿ ಆವಿಷ್ಕರಿಸಲಾದ ಕರ್ಮಗಳು ತಿರಸ್ಕೃತವಾಗಿವೆ. ಅವು ಸ್ವೀಕಾರಯೋಗ್ಯವಲ್ಲ.
ಉತ್ತರ: ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಬಂದು, ತಮ್ಮ ಮೊಣಕಾಲನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: "ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ." ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ಹಜ್ಜ್ ನಿರ್ವಹಿಸುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: "ನನಗೆ ಈಮಾನ್ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಹೇಳಿದರು: "ನನಗೆ ಇಹ್ಸಾನ್ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ." ಆ ವ್ಯಕ್ತಿ ಹೇಳಿದರು: "ನನಗೆ ಪ್ರಳಯದ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಪ್ರಳಯದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ." ಆ ವ್ಯಕ್ತಿ ಹೇಳಿದರು: "ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ." ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಸ್ವಲ್ಪ ಹೊತ್ತು ಅಲ್ಲೇ ಇದ್ದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಅವರು ಹೇಳಿದರು: "ಅವರು ಜಿಬ್ರೀಲ್. ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಅವರು ನಿಮ್ಮ ಬಳಿಗೆ ಬಂದಿದ್ದರು."
[ಮುಸ್ಲಿಮ್].
ಹದೀಸಿನ ಪ್ರಯೋಜನಗಳು:
- ಇಸ್ಲಾಂ ಧರ್ಮದ ಐದು ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅವು:
ಅಲ್ಲಾಹನ ಹೊರತು ಬೇರೆ ದೇವರು ಇಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷಿವಚನ.
ನಮಾಝನ್ನು ಸಂಸ್ಥಾಪಿಸುವುದು.
ಝಕಾತ್ ನೀಡುವುದು.
ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು.
ಅಲ್ಲಾಹನ ಪವಿತ್ರ ಭವನಕ್ಕೆ ಹಜ್ಜ್ ನಿರ್ವಹಿಸುವುದು.
- ಈಮಾನಿನ ಆರು ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅವು:
ಅಲ್ಲಾಹನಲ್ಲಿ ವಿಶ್ವಾಸವಿಡುವುದು.
- ಅವನ ಮಲಕ್(ದೇವಚರ)ರಲ್ಲಿ ವಿಶ್ವಾಸವಿಡುವುದು.
- ಅವನು ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು.
- ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು.
- ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು.
- ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
- ಇಹ್ಸಾನ್ ಬಗ್ಗೆ ಉಲ್ಲೇಖಿಸಲಾಗಿದೆ. ಇದಕ್ಕಿರುವುದು ಒಂದೇ ಸ್ತಂಭ. ಅಂದರೆ ನೀವು ಅಲ್ಲಾಹನನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂಬ ಪ್ರಜ್ಞೆಯನ್ನು ಹೊಂದಿರುವುದು.
- ಅಂತ್ಯದಿನ ಸಂಭವಿಸುವ ಸಮಯದ ಬಗ್ಗೆ ಉಲ್ಲೇಖಿಸಲಾಗಿದೆ. ಅದು ಯಾವಾಗ ಎಂದು ಸರ್ವಶಕ್ತನಾದ ಅಲ್ಲಾಹುವಿಗೆ ಮಾತ್ರ ತಿಳಿದಿದೆ.
ಉತ್ತರ: ಉಮರ್ ಇಬ್ನ್ ಅಲ್-ಖತ್ತಾಬ್ (ರ) ರಿಂದ ವರದಿ: ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ(ಸ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿ(ಸ) ರವರ ಬಳಿ ಬಂದು (ಎರಡು ಕಾಲುಗಳನ್ನು ಮಡಚಿಟ್ಟು), ತಮ್ಮ ಮೊಣಕಾಲನ್ನು ಪ್ರವಾದಿ(ಸ) ರವರ ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: “ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ.” ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು: “ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ತಲುಪಿ ಹಜ್ಜ್ ನಿರ್ವಹಿಸುವುದು.” ಆ ವ್ಯಕ್ತಿ ಹೇಳಿದರು: “ನೀವು ಹೇಳಿದ್ದು ಸತ್ಯ.” ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: “ನನಗೆ ಈಮಾನಿನ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಉತ್ತರಿಸಿದರು: “ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ಮಲಕ್ ಗಳಲ್ಲಿ (ದೇವದೂತರಲ್ಲಿ) , ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು.” ಆ ವ್ಯಕ್ತಿ ಹೇಳಿದರು: “ನೀವು ಹೇಳಿದ್ದು ಸತ್ಯ.” ಆ ವ್ಯಕ್ತಿ ಹೇಳಿದರು: “ನನಗೆ ಇಹ್ಸಾನ್ನ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಉತ್ತರಿಸಿದರು: “ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ.” ಆ ವ್ಯಕ್ತಿ ಹೇಳಿದರು: “ನನಗೆ ಅಂತ್ಯದಿನದ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಉತ್ತರಿಸಿದರು: “ಅಂತ್ಯದಿನದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ.” ಆ ವ್ಯಕ್ತಿ ಹೇಳಿದರು: “ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಹೇಳಿದರು: “ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ.” ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಪ್ರವಾದಿ(ಸ) ರವರ ಬಳಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ನಂತರ ಪ್ರವಾದಿ(ಸ) ರವರು ಕೇಳಿದರು: “ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?” ನಾನು ಹೇಳಿದೆ: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು.” ಅವರು ಹೇಳಿದರು: “ಅವರು ಜಿಬ್ರೀಲ್(ಅ). ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ನಿಮ್ಮ ಬಳಿಗೆ ಬಂದಿದ್ದರು.”
ಉತ್ತರ: ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ವಿಶ್ವಾಸಿಗಳು."
[ತಿರ್ಮಿದಿ. ಈ ಹದೀಸನ್ನು ಅವರು ಹಸನ್ ಸಹೀಹ್ ಎಂದಿದ್ದಾರೆ].
ಹದೀಸಿನ ಪ್ರಯೋಜನಗಳು:
- ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸಲಾಗಿದೆ.
- ಈಮಾನಿನ ಸಂಪೂರ್ಣತೆಯು ಗುಣನಡವಳಿಕೆಯ ಸಂಪೂರ್ಣತೆಯನ್ನು ಅವಲಂಬಿಸಿದೆ.
- ಈಮಾನ್ (ವಿಶ್ವಾಸ) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.
ಉತ್ತರ: ಅಬು ಹುರೈರಾ رَضِيَ اللَّهُ عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ:
ಉತ್ತರ: ಇಬ್ನ್ ಉಮರ್ رَضِيَ اللَّهُ عَنْهُمَا ರಿಂದ ವರದಿ. ಪ್ರವಾದಿ ﷺ ಹೇಳಿದರು:
“ಯಾರು ಅಲ್ಲಾಹು ಅಲ್ಲದವರ ಮೇಲೆ ಆಣೆ (ಪ್ರಮಾಣ) ಮಾಡುತ್ತಾನೋ; ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
[ತಿರ್ಮಿದಿ].
ಹದೀಸಿನ ಪ್ರಯೋಜನಗಳು:
- ಅಲ್ಲಾಹನಲ್ಲದೆ ಇತರ ಯಾರ ಮೇಲೂ ಪ್ರಮಾಣ ಮಾಡಬಾರದು.
- ಅಲ್ಲಾಹು ಅಲ್ಲದವರ ಮೇಲೆ ಪ್ರಮಾಣ (ಆಣೆ) ಮಾಡುವುದು ಸಣ್ಣ ಶಿರ್ಕ್ ಆಗಿದೆ.
[ತಿರ್ಮಿದಿ]