ಒಬ್ಬ ಮಹಿಳೆಗೆ, ಉದಾಹರಣೆಗೆ, ಮಧ್ಯಾಹ್ನ ಒಂದು ಗಂಟೆಗೆ ಮುಟ್ಟು ಪ್ರಾರಂಭವಾಗುತ್ತದೆ. ಅವಳು ಇನ್ನೂ ಝುಹರ್ ನಮಾಝ್ ನಿರ್ವಹಿಸಿಲ್ಲ. ಶುದ್ಧಳಾದ ನಂತರ ಅವರು ಆ ಝುಹರ್ ನಮಾಝನ್ನು ಕಝಾ ನಿರ್ವಹಿಸಬೇಕೇ?
السؤال
ಪ್ರಶ್ನೆ 1.
ಒಬ್ಬ ಮಹಿಳೆಗೆ, ಉದಾಹರಣೆಗೆ, ಮಧ್ಯಾಹ್ನ ಒಂದು ಗಂಟೆಗೆ ಮುಟ್ಟು ಪ್ರಾರಂಭವಾಗುತ್ತದೆ. ಅವಳು ಇನ್ನೂ ಝುಹರ್ ನಮಾಝ್ ನಿರ್ವಹಿಸಿಲ್ಲ. ಶುದ್ಧಳಾದ ನಂತರ ಅವರು ಆ ಝುಹರ್ ನಮಾಝನ್ನು ಕಝಾ ನಿರ್ವಹಿಸಬೇಕೇ?
س21: إذا حاضت المرأة الساعة الواحدة ظهرًا مثلًا، وهي لم تصلّ بعد صلاة الظّهر، فهل يلزمها قضاء تلك الصلاة بعد الطّهر؟
الجواب
ಉತ್ತರ 1.
ಈ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಾಭಿಪ್ರಾಯವಿದೆ. ಕೆಲವರ ಅಭಿಪ್ರಾಯ ಪ್ರಕಾರ, ಆ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಿಲ್ಲ. ಏಕೆಂದರೆ ಅವಳು ಆ ನಮಾಝನ್ನು ಕಡೆಗಣಿಸಿಲ್ಲ ಅಥವಾ ತಪ್ಪು ಮಾಡಿಲ್ಲ. ಏಕೆಂದರೆ ನಮಾಝನ್ನು ಅದರ ಕೊನೆಯ ಸಮಯದವರೆಗೆ ತಡಮಾಡಲು ಅವಳಿಗೆ ಅನುಮತಿಯಿದೆ.
ಕೆಲವರ ಅಭಿಪ್ರಾಯ ಪ್ರಕಾರ ಅವಳು ಅದನ್ನು ಕಝಾ ನಿರ್ವಹಿಸಬೇಕು. ಏಕೆಂದರೆ ಪ್ರವಾದಿ(ಸ) ರವರು ಹೇಳುತ್ತಾರೆ:
“ಯಾರಿಗೆ ನಮಾಝಿನ (ಸಮಯವು ಮುಗಿಯುವುದಕ್ಕೆ ಮೊದಲು ಅದರ) ಒಂದು ರಕಅತ್ ದೊರಕುತ್ತದೋ ಅವನಿಗೆ ಆ ನಮಾಝ್ ದೊರಕುತ್ತದೆ.”
ಮುಂಜಾಗರೂಕತೆಗಾಗಿ ಅವಳು ಆ ನಮಾಝನ್ನು ಕಝಾ ನಿರ್ವಹಿಸುವುದು ಒಳ್ಳೆಯದು. ಏಕೆಂದರೆ ಅದು ಕೇವಲ ಒಂದು ಹೊತ್ತಿನ ನಮಾಝ್ ಆಗಿದ್ದು ಅದನ್ನು ನಿರ್ವಹಿಸಲು ಹೆಚ್ಚು ಕಷ್ಟವಾಗದು.
ﺟ21: في هذا خلافٌ بين العلماء، فمنهم من قال: إنه لا يلزمها أن تقضي هذه الصلاة؛ لأنها لم تفرط، ولم تأثم؛ حيث إنه يجوز لها أن تؤخّر الصلاة إلى آخر وقتها.
ومنهم من قال: إنه يلزمها القضاء، أي: قضاء تلك الصلاة؛ لعموم قوله ﷺ:
«مَنْ أَدْرَكَ رَكْعَةً مِنَ الصَّلَاةِ فَقَدْ أَدْرَكَ الصَّلَاةَ» [1].
[5] تقدم تخريجه.
والاحتياط لها: أن تقضيها؛ لأنها صلاةٌ واحدةٌ، لا مشقة في قضائها.