Skip to content

ಬಿದ್‌ಅತ್ (ನೂತನವಾದ) ಎಂದರೇನು? ನಾವು ಅದನ್ನು ಸ್ವೀಕರಿಸಬಹುದೇ?

التصنيف الشرعي
العقيدةالبدعةحقيقة البدعة
الباب / الفصل
قسم العقيدة

السؤال

ಪ್ರಶ್ನೆ 18. ಬಿದ್‌ಅತ್ (ನೂತನವಾದ) ಎಂದರೇನು? ನಾವು ಅದನ್ನು ಸ್ವೀಕರಿಸಬಹುದೇ?

الجواب

ಉತ್ತರ: ಪ್ರವಾದಿ ﷺ ಮತ್ತು ಅವರ ಸಹಚರರ ಕಾಲದಲ್ಲಿ ಧರ್ಮದಲ್ಲಿಲ್ಲದ, ಮತ್ತು ನಂತರ ಜನರು ಧರ್ಮದಲ್ಲಿ ಹೊಸದಾಗಿ ಆವಿಷ್ಕರಿಸಿದ ವಿಷಯಗಳೆಲ್ಲವೂ ಬಿದ್‌ಅತ್ ಆಗಿವೆ.

  • ನಾವು ಅದನ್ನು ಸ್ವೀಕರಿಸುವುದಿಲ್ಲ, ಬದಲಾಗಿ ಅವುಗಳನ್ನು ತಿರಸ್ಕರಿಸುತ್ತೇವೆ.

ಏಕೆಂದರೆ ಪ್ರವಾದಿ ﷺ ರವರು ಹೇಳಿದರು:

"ಎಲ್ಲ ಬಿದ್‌ಅತ್‌ಗಳೂ ಪಥಭ್ರಷ್ಟತೆಗಳಾಗಿವೆ."

[ಅಬೂದಾವೂದ್].

ಉದಾಹರಣೆಗೆ: ಆರಾಧನಾ ಕರ್ಮಗಳಲ್ಲಿ ಹೊಸದನ್ನು ಸೇರಿಸುವುದು. ಅಂದರೆ ವುದೂ ಮಾಡುವಾಗ ನಾಲ್ಕು ಬಾರಿ ತೊಳೆಯುವುದು, ಪ್ರವಾದಿ ﷺ ರವರ ಜನ್ಮದಿನ ಆಚರಿಸುವುದು. ಇದನ್ನು ಪ್ರವಾದಿ ﷺ ರವರಾಗಲಿ ಅವರ ಸಹಚರರಾಗಲಿ ಆಚರಿಸಿಲ್ಲ.

  • ನಾವು ಅದನ್ನು ಸ್ವೀಕರಿಸುವುದಿಲ್ಲ, ಬದಲಾಗಿ ಅದನ್ನು ತಿರಸ್ಕರಿಸುವುದು ಕಡ್ಡಾಯವಾಗಿದೆ.

ಮತ್ತು ಪ್ರವಾದಿ(ಸ) ರವರು ಹೇಳಿದರು:

""ಯಾರು ನಮ್ಮ ಆದೇಶವಿಲ್ಲದ ಒಂದು ಕಾರ್ಯವನ್ನು ಮಾಡುತ್ತಾರೋ, ಅದು ತಿರಸ್ಕೃತವಾಗಿದೆ.""

[ಮುಸ್ಲಿಮ್].