Skip to content
ಸೂರಗಳ ಪಟ್ಟಿ /

إبراهِيم

إبراهِيم is chapter 14 of the Quran and has 52 verses. This page presents it in full in the Uthmani script, with a verse-by-verse translation of its meaning.

52 ಆಯತ್‌ಗಳು ಸೂರ ಸಂಖ್ಯೆ 14
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

الٓرۚ كِتَٰبٌ أَنزَلۡنَٰهُ إِلَيۡكَ لِتُخۡرِجَ ٱلنَّاسَ مِنَ ٱلظُّلُمَٰتِ إِلَى ٱلنُّورِ بِإِذۡنِ رَبِّهِمۡ إِلَىٰ صِرَٰطِ ٱلۡعَزِيزِ ٱلۡحَمِيدِ

ಅಲಿಫ್ ಲಾಮ್ ರಾ. ಇದು ಗ್ರಂಥ. ನೀವು ಮನುಷ್ಯರನ್ನು ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಅಂಧಕಾರಗಳಿಂದ ಬೆಳಕಿಗೆ—ಪ್ರಬಲನು ಮತ್ತು ಸ್ತುತ್ಯರ್ಹನಾದವನ ಮಾರ್ಗಕ್ಕೆ—ತರಲು ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ.

ٱللَّهِ ٱلَّذِي لَهُۥ مَا فِي ٱلسَّمَٰوَٰتِ وَمَا فِي ٱلۡأَرۡضِۗ وَوَيۡلٞ لِّلۡكَٰفِرِينَ مِنۡ عَذَابٖ شَدِيدٍ

ಅಂದರೆ, ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಯಾರಿಗೆ ಸೇರಿದೆಯೋ ಆ ಅಲ್ಲಾಹನ ಮಾರ್ಗಕ್ಕೆ. ಸತ್ಯನಿಷೇಧಿಗಳಿಗೆ ಕಠೋರ ಶಿಕ್ಷೆಯ ದುರ್ಗತಿ ಕಾದಿದೆ.

ٱلَّذِينَ يَسۡتَحِبُّونَ ٱلۡحَيَوٰةَ ٱلدُّنۡيَا عَلَى ٱلۡأٓخِرَةِ وَيَصُدُّونَ عَن سَبِيلِ ٱللَّهِ وَيَبۡغُونَهَا عِوَجًاۚ أُوْلَٰٓئِكَ فِي ضَلَٰلِۭ بَعِيدٖ

ಅವರು ಯಾರೆಂದರೆ, ಪರಲೋಕಕ್ಕಿಂತಲೂ ಇಹಲೋಕಕ್ಕೆ ಆದ್ಯತೆ ನೀಡುವವರು, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಗಟ್ಟುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಅತಿವಿದೂರದ ದುರ್ಮಾರ್ಗದಲ್ಲಿದ್ದಾರೆ.

وَمَآ أَرۡسَلۡنَا مِن رَّسُولٍ إِلَّا بِلِسَانِ قَوۡمِهِۦ لِيُبَيِّنَ لَهُمۡۖ فَيُضِلُّ ٱللَّهُ مَن يَشَآءُ وَيَهۡدِي مَن يَشَآءُۚ وَهُوَ ٱلۡعَزِيزُ ٱلۡحَكِيمُ

ನಾವು ಎಲ್ಲಾ ಸಂದೇಶವಾಹಕರನ್ನೂ ಅವರ ಜನರ ಭಾಷೆಯಲ್ಲಿ (ಮಾತನಾಡುವಂತೆ) ಕಳುಹಿಸಿದ್ದೇವೆ. ಅವರು ಜನರಿಗೆ ಸಂದೇಶವನ್ನು ಸ್ಪಷ್ಟವಾಗಿ ವಿವರಿಸಿಕೊಡುವುದಕ್ಕಾಗಿ. ಅಲ್ಲಾಹು ಅವನು ಇಚ್ಛಿಸುವವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

وَلَقَدۡ أَرۡسَلۡنَا مُوسَىٰ بِـَٔايَٰتِنَآ أَنۡ أَخۡرِجۡ قَوۡمَكَ مِنَ ٱلظُّلُمَٰتِ إِلَى ٱلنُّورِ وَذَكِّرۡهُم بِأَيَّىٰمِ ٱللَّهِۚ إِنَّ فِي ذَٰلِكَ لَأٓيَٰتٖ لِّكُلِّ صَبَّارٖ شَكُورٖ

“ನಿಮ್ಮ ಜನರನ್ನು ಅಂಧಕಾರಗಳಿಂದ ಬೆಳಕಿಗೆ ತನ್ನಿರಿ ಮತ್ತು ಅವರಿಗೆ ಅಲ್ಲಾಹನ ಉಪಕಾರಗಳನ್ನು ನೆನಪಿಸಿಕೊಡಿ” (ಎಂದು ಆದೇಶಿಸುತ್ತಾ) ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ನಿಶ್ಚಯವಾಗಿಯೂ, ಸೈರಣೆಯಿರುವ ಮತ್ತು ಕೃತಜ್ಞರಾದ ಪ್ರತಿಯೊಬ್ಬರಿಗೂ ಅದರಲ್ಲಿ ದೃಷ್ಟಾಂತಗಳಿವೆ.