15 : 91
ٱلَّذِينَ جَعَلُواْ ٱلۡقُرۡءَانَ عِضِينَ
ಅಂದರೆ ಕುರ್‌ಆನನ್ನು ವಿವಿಧ ಭಾಗಗಳನ್ನಾಗಿ ಮಾಡಿದವರ ಮೇಲೆ.
Explanation & meanings · 1
- ವಿಂಗಡನೆ ಮಾಡಿದವರು ಯಾರೆಂಬ ವಿಷಯದಲ್ಲಿ ವ್ಯಾಖ್ಯಾನಕಾರರಿಗೆ ಭಿನ್ನಮತವಿದೆ. ಕೆಲವರು ಅದು ಸತ್ಯನಿಷೇಧಿಗಳು ಎಂದಿದ್ದಾರೆ. ಏಕೆಂದರೆ ಅವರು ಕುರ್‌ಆನನ್ನು ಕವಿತೆ, ಮಾಟಗಾರಿಕೆ, ಪ್ರಾಚೀನ ಕಾಲದ ಜನರ ಪುರಾಣ ಮುಂತಾದ ರೀತಿಯಲ್ಲಿ ವರ್ಣಿಸುತ್ತಾ ವಿಂಗಡಿಸಿದ್ದಾರೆ. ಇನ್ನೊಂದು ಅಭಿಪ್ರಾಯದ ಪ್ರಕಾರ ಅವರು ಯಹೂದಿ-ಕ್ರೈಸ್ತರಾಗಿದ್ದಾರೆ. ಏಕೆಂದರೆ, ಅವರು ಅವರಿಗೆ ಅವತೀರ್ಣವಾದ ದೈವಿಕ ಗ್ರಂಥವನ್ನು ಹಲವು ವಿಭಾಗಗಳಾಗಿ ವಿಂಗಡಿಸಿ ತಮಗೆ ಬೇಕಾದುದನ್ನು ಸ್ವೀಕರಿಸಿದರು ಮತ್ತು ಬೇಡದ್ದನ್ನು ತಿರಸ್ಕರಿಸಿದರು.