Skip to content

ಸಹಕಾರದ ಗುಣ ಎಂದರೇನು?

الباب / الفصل
قسم الأخلاق

السؤال

س١٢: ما هو خلق التعاون؟

ಪ್ರಶ್ನೆ 12. ಸಹಕಾರದ ಗುಣ ಎಂದರೇನು?

الجواب

ج:هو تعاون الناس فيما بينهم على الحق والخير.

صور التعاون:

  • التعاون في رد الحقوق.
  • التعاون في رد الظالم.
  • التعاون في سد حاجات الناس والمساكين.
  • التعاون على كل خير.
  • عدم التعاون على الإثم والأذى والعدوان.
  • قال تَعَالَى:

﴿وَتَعَاوَنُواْ عَلَى ٱلۡبِرِّ وَٱلتَّقۡوَىٰۖ وَلَا تَعَاوَنُواْ عَلَى ٱلۡإِثۡمِ وَٱلۡعُدۡوَٰنِۚ وَٱتَّقُواْ ٱللَّهَۖ إِنَّ ٱللَّهَ شَدِيدُ ٱلۡعِقَابِ﴾

[المائدة: ٢].

  • قال النبي عَلَيْهِ الصَّلَاةُ وَالسَّلَامُ:

«المُؤْمِنُ لِلْمُؤْمِنِ كالْبُنْيانِ؛ يَشُدُّ بَعْضُه بَعْضًا»

متفق عليه.

  • وقال النبي عَلَيْهِ الصَّلَاةُ وَالسَّلَامُ:

«المُسْلِمُ أَخُو المُسْلِمِ، لا يَظلِمُه، ولا يُسْلِمُه، ومَن كان في حاجةِ أَخِيهِ، كان اللهُ في حاجَتِه، ومَن فَرَّجَ عن مُسْلِمٍ كُرْبَةً، فَرَّجَ اللهُ عَنهُ كُرْبَةً مِن كُرُباتِ يَومِ القِيامةِ، ومَن سَتَرَ مُسْلِمًا، سَتَرَهُ اللهُ يَومَ القِيامةِ»

ಉತ್ತರ: ಸಹಕಾರ ಎಂದರೆ ಸತ್ಯ ಮತ್ತು ಒಳಿತಿನಲ್ಲಿ ಜನರೊಡನೆ ಸಹಕರಿಸುವುದು.

ಸಹಕಾರದ ರೂಪಗಳು:

o ಹಕ್ಕುಗಳನ್ನು ನೀಡುವುದರಲ್ಲಿ ಸಹಕರಿಸುವುದು.

o ಅನ್ಯಾಯವನ್ನು ತಡೆಗಟ್ಟುವುದರಲ್ಲಿ ಸಹಕರಿಸುವುದು.

o ಜನರ ಮತ್ತು ಬಡವರ ಅಗತ್ಯಗಳನ್ನು ಪೂರೈಸುವುದರಲ್ಲಿ ಸಹಕರಿಸುವುದು.

o ಎಲ್ಲಾ ಒಳಿತುಗಳಲ್ಲೂ ಸಹಕರಿಸುವುದು.

o ಪಾಪ, ತೊಂದರೆ ಮತ್ತು ದ್ವೇಷದ ಕಾರ್ಯದಲ್ಲಿ ಸಹಕರಿಸದಿರುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿರೇಕದಲ್ಲಿ ಪರಸ್ಪರ ಸಹಕರಿಸಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.

(ಸೂರಃ ಅಲ್‌ಮಾಇದಃ: 6)

ಪ್ರವಾದಿ ﷺ ರವರು ಹೇಳಿದರು:

“ಒಬ್ಬ ಸತ್ಯವಿಶ್ವಾಸಿ ಇನ್ನೊಬ್ಬ ಸತ್ಯವಿಶ್ವಾಸಿಗೆ ಪರಸ್ಪರ ಬಿಗಿಯಾಗಿ ಹಿಡಿದುಕೊಂಡ ಒಂದು ಕಟ್ಟಡದಂತೆ.”

[ಬುಖಾರಿ ಮತ್ತು ಮುಸ್ಲಿಮ್].

“ಒಬ್ಬ ಮುಸ್ಲಿಮ್ ಇನ್ನೊಬ್ಬ ಮುಸ್ಲಿಮನ ಸಹೋದರ. ಅವನು ಅವನಿಗೆ ಅನ್ಯಾಯ ಮಾಡಲಾರ. ಅವನನ್ನು (ಅನ್ಯಾಯ ಮಾಡುವವನ ಕೈಗೆ) ಒಪ್ಪಿಸಲಾರ. ಯಾರು ತನ್ನ ಸಹೋದರನ ಅಗತ್ಯವನ್ನು ಪೂರೈಸುತ್ತಾನೋ ಅವನ ಅಗತ್ಯವನ್ನು ಅಲ್ಲಾಹು ಪೂರೈಸುವನು. ಯಾರು ಮುಸ್ಲಿಮನನ್ನು ಒಂದು ಕಷ್ಟದಿಂದ ಪಾರು ಮಾಡುತ್ತಾನೋ ಅದರ ಕಾರಣದಿಂದಾಗಿ ಅಲ್ಲಾಹು ಅವನನ್ನು ಪುನರುತ್ಥಾನ ದಿನದ ಕಷ್ಟಗಳಲ್ಲಿ ಸೇರಿದ ಒಂದು ಕಷ್ಟದಿಂದ ಪಾರು ಮಾಡುವನು. ಯಾರು ಒಬ್ಬ ಮುಸ್ಲಿಮನ ನ್ಯೂನತೆಯನ್ನು ಮರೆಮಾಚುತ್ತಾನೋ ಅವನ ನ್ಯೂನತೆಯನ್ನು ಪುನರುತ್ಥಾನ ದಿನದಂದು ಅಲ್ಲಾಹು ಮರೆಮಾಚುವನು.”