Skip to content

"ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!". ಕೇಳಲಾಯಿತು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರು?" ಅವರು ಹೇಳಿದರು: "ಯಾರ ಕೆಡುಕುಗಳಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನು".

ಅಬೂ ಶುರೈಹ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!". ಕೇಳಲಾಯಿತು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರು?" ಅವರು ಹೇಳಿದರು: "ಯಾರ ಕೆಡುಕುಗಳಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನು".

«وَاللَّهِ لاَ يُؤْمِنُ، وَاللَّهِ لاَ يُؤْمِنُ، وَاللَّهِ لاَ يُؤْمِنُ»، قِيلَ: وَمَنْ يَا رَسُولَ اللَّهِ؟ قَالَ: «الَّذِي لاَ يَأْمَنُ جَارُهُ بَوَايِقَهُ».

ಇದನ್ನು ಬುಖಾರಿ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿದರು ಮತ್ತು (ವಿಷಯದ ಗಂಭೀರತೆಯನ್ನು ವ್ಯಕ್ತಪಡಿಸಲು) ಅದನ್ನು ಮೂರು ಬಾರಿ ಪುನರುಚ್ಛರಿಸಿದರು. ನಂತರ ಅವರು ಹೇಳಿದರು: ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ. ಆಗ ಸಹಾಬಾಗಳು ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಸತ್ಯವಿಶ್ವಾಸಿಯಾಗದವರು ಯಾರು? ಅವರು ಹೇಳಿದರು: ಯಾರ ವಂಚನೆ, ಅನ್ಯಾಯ ಮತ್ತು ಕೆಡುಕನ್ನು ಅವನ ನೆರೆಯವನು ಭಯಪಡುತ್ತಾನೋ ಅವನು.

ಹದೀಸಿನ ಪ್ರಯೋಜನಗಳು

ಯಾರ ಅನ್ಯಾಯ ಮತ್ತು ಕೆಡುಕಿನಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನಿಗೆ ಈಮಾನ್ (ವಿಶ್ವಾಸ) ಇಲ್ಲವೆಂದು ಬಣ್ಣಿಸಿರುವುದು; ಈ ಕೃತ್ಯವು ಮಹಾಪಾಪಗಳಲ್ಲಿ ಒಂದಾಗಿದೆ ಮತ್ತು ಅದನ್ನು ಮಾಡುವವನು ಈಮಾನ್‌ನಲ್ಲಿ ಅಪೂರ್ಣನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ನೆರೆಯವರಿಗೆ ಉಪಕಾರ ಮಾಡಲು ಮತ್ತು ಮಾತು ಅಥವಾ ಕೃತ್ಯದ ಮೂಲಕ ಅವರಿಗೆ ತೊಂದರೆ ನೀಡದಿರಲು ಬಲವಾಗಿ ಒತ್ತಾಯಿಸಲಾಗಿದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (8/ 10) (6016).

ಇನ್ನಷ್ಟು (2)

التوضيح لشرح الجامع الصحيح (28/ 321).

النهاية في غريب الحديث والأثر (93).