"ಜನರಿಗೆ ಕೃತಜ್ಞತೆ ಸಲ್ಲಿಸದವನು, ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದಿಲ್ಲ."
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನರಿಗೆ ಕೃತಜ್ಞತೆ ಸಲ್ಲಿಸದವನು, ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದಿಲ್ಲ."
«لَا يَشْكُرُ اللَّهَ مَنْ لَا يَشْكُرُ النَّاسَ»
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಯಾರು ತಮಗೆ ಉಪಕಾರ ಮಾಡಿದ ಅಥವಾ ಒಳ್ಳೆಯದನ್ನು ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಿಲ್ಲವೋ, ಅವರು ಸಾಮಾನ್ಯವಾಗಿ ಅಲ್ಲಾಹನಿಗೂ ಕೃತಜ್ಞತೆ ಸಲ್ಲಿಸುವುದಿಲ್ಲ. ಏಕೆಂದರೆ ಇವೆರಡೂ ವಿಷಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಜನರ ಉಪಕಾರವನ್ನು ನಿರಾಕರಿಸುವುದು ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸದಿರುವುದು ಯಾರ ಸ್ವಭಾವ ಅಥವಾ ಅಭ್ಯಾಸವಾಗಿರುತ್ತದೆಯೋ, ಅಲ್ಲಾಹನ ಅನುಗ್ರಹಗಳನ್ನು ನಿರಾಕರಿಸುವುದು ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ಕೊರತೆ ಮಾಡುವುದು ಕೂಡ ಅವರ ಅಭ್ಯಾಸವಾಗಿರುತ್ತದೆ.
ಉಪಕಾರಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸುವುದರ ಮಹತ್ವವನ್ನು ತಿಳಿಸಲಾಗಿದೆ.
ನಿಜವಾಗಿ ಅನುಗ್ರಹ ನೀಡುವವನು ಅಲ್ಲಾಹು. ಸೃಷ್ಟಿಗಳು (ಮನುಷ್ಯರು) ಕೇವಲ ಕಾರಣಕರ್ತರು; ಅಲ್ಲಾಹು ತಾನು ಇಚ್ಛಿಸಿದವರಿಗೆ ಇವರನ್ನು ಮಾಧ್ಯಮವನ್ನಾಗಿ ಮಾಡುತ್ತಾನೆ. ಆದ್ದರಿಂದ ಜನರಿಗೆ ಕೃತಜ್ಞತೆ ಸಲ್ಲಿಸುವುದು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದಂತೆಯೇ (ಅದರ ಭಾಗವಾಗಿದೆ).
ಜನರ ಉಪಕಾರಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ಪರಿಪೂರ್ಣ ನಡವಳಿಕೆಯ (ಉತ್ತಮ ಸ್ವಭಾವದ) ಕುರುಹಾಗಿದೆ.
ಸುನನ್ ಅಬೂ ದಾವೂದ್. (7/ 188) (4811).
ಸುನನು ತ್ತಿರ್ಮಿದಿ. (3/ 403) (1954).
ಮುಸ್ನದ್ ಅಹ್ಮದ್. (13/ 322) (7939).
ಇನ್ನಷ್ಟು (2)
شرح سنن أبي داود لابن رسلان (18/ 490).
شرح سنن أبي داود للعباد (547/ 13).