Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 47 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು".
ಸಹೀಹ್ ಮೊದಲನೇ ಹದೀಸ್: ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ. ಎರಡನೇ ಹದೀಸ್: ಇದನ್ನು ಅಹ್ಮದ್ ಮತ್ತು ದಾರಿಮಿ ವರದಿ ಮಾಡಿದ್ದಾರೆ.
"ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸತ್ಯವಂತನೆಂದು ದಾಖಲಿಸಲ್ಪಡುವವರೆಗೂ ಸತ್ಯವನ್ನು ಹೇಳುತ್ತಲೇ ಇರುತ್ತಾನೆ ಮತ್ತು ಸತ್ಯಕ್ಕಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ. ಸುಳ್ಳಿನ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸುಳ್ಳು ಕೆಡುಕಿಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸುಳ್ಳು ಹೇಳುವವನೆಂದು ದಾಖಲಿಸಲ್ಪಡುವವರೆಗೂ ಸುಳ್ಳು ಹೇಳುತ್ತಲೇ ಇರುತ್ತಾನೆ ಮತ್ತು ಸುಳ್ಳಿಗಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
“ಕುಸ್ತಿಯಲ್ಲಿ ಗೆಲ್ಲುವವನು ಬಲಶಾಲಿಯಲ್ಲ. ಕೋಪ ಬರುವಾಗ ಮನಸ್ಸನ್ನು ನಿಗ್ರಹಿಸುವವನೇ (ನಿಜವಾದ) ಬಲಶಾಲಿ.”
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ಸೌಮ್ಯತೆಯಿಂದ ವಂಚಿತನಾದವನು ಒಳಿತಿನಿಂದಲೂ ವಂಚಿತನಾಗಿದ್ದಾನೆ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ."
ಇತರ ಸಾಕ್ಷಿ ಹದೀಸ್‌ಗಳ ಆಧಾರದಿಂದ ಸಹೀಹ್. ಇದನ್ನು ಅಬೂದಾವೂದ್ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಮೃದುತ್ವವಿರುತ್ತದೋ ಅದು ಅದನ್ನು ಅಂದಗೊಳಿಸುತ್ತದೆ; ಮತ್ತು ಯಾವ ವಿಷಯದಿಂದ ಅದನ್ನು ತೆಗೆಯಲಾಗುತ್ತದೋ ಅದು ಅದನ್ನು ಅಂದಗೆಡಿಸುತ್ತದೆ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.