Skip to content
النور /

ಆಯತ್ 63

24 : 63
النور ಆಯತ್‌ಗಳು 64
ಸೂರ · النور
ಕನ್ನಡ · Hamza
24 : 63

لَّا تَجۡعَلُواْ دُعَآءَ ٱلرَّسُولِ بَيۡنَكُمۡ كَدُعَآءِ بَعۡضِكُم بَعۡضٗاۚ قَدۡ يَعۡلَمُ ٱللَّهُ ٱلَّذِينَ يَتَسَلَّلُونَ مِنكُمۡ لِوَاذٗاۚ فَلۡيَحۡذَرِ ٱلَّذِينَ يُخَالِفُونَ عَنۡ أَمۡرِهِۦٓ أَن تُصِيبَهُمۡ فِتۡنَةٌ أَوۡ يُصِيبَهُمۡ عَذَابٌ أَلِيمٌ

ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ಅಲ್ಲಾಹನ ಸಂದೇಶವಾಹಕರನ್ನು ಕರೆಯಬೇಡಿ. ನಿಮ್ಮಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ (ಪ್ರವಾದಿಯವರ ಸಭೆಯಿಂದ) ತಪ್ಪಿಸಿಕೊಳ್ಳುವವರ (ಕಪಟವಿಶ್ವಾಸಿಗಳ) ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಪ್ರವಾದಿಯವರ ಆಜ್ಞೆಗೆ ವಿರುದ್ಧವಾಗಿ ಸಾಗುವವರು—ಅವರಿಗೇನಾದರೂ ಅನಾಹುತ ಸಂಭವಿಸುವುದರ ಬಗ್ಗೆ ಅಥವಾ ಯಾತನಾಮಯ ಶಿಕ್ಷೆ ಎರಗುವುದರ ಬಗ್ಗೆ ಸದಾ ಭಯಪಡುತ್ತಿರಲಿ.

Explanation & meanings · 1
  1. ಅಂದರೆ ನೀವು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಓ ಮುಹಮ್ಮದ್ ಎಂದು ಕರೆಯಬೇಡಿ. ಬದಲಿಗೆ, ಓ ಪ್ರವಾದಿಯವರೇ, ಓ ಅಲ್ಲಾಹನ ಸಂದೇಶವಾಹಕರೇ ಎಂದು ಕರೆಯಿರಿ.