السؤال
س١٠: ما أنواع الصبر؟
ಪ್ರಶ್ನೆ 10: ತಾಳ್ಮೆಯ ವಿಧಗಳು ಯಾವುವು?
الجواب
ج:- الصبر على طاعة الله تَعَالَى.
- الصبر عن المعصية.
- الصبر على الأقدار المؤلمة، وحمد الله على كل حال.
- قال تَعَالَى:
﴿وَٱللَّهُ يُحِبُّ ٱلصَّٰبِرِينَ﴾
[آل عمران: ١٤٦].
- وقال النبي عَلَيْهِ الصَّلَاةُ وَالسَّلَامُ:
«عجَبًا لأمْرِ المؤمنِ إنَّ أمْرَه كلَّهُ خيرٌ، وليس ذلك لأحدٍ إلَّا للمؤمنِ؛ إنْ أصابَتْهُ سَرَّاءُ شكَرَ فكان خيرًا له، وإنْ أصابَتْهُ ضَرَّاءُ صبَرَ فكان خيرًا له»
رواه مسلم.
ಉತ್ತರ: - ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ತಾಳ್ಮೆ ವಹಿಸುವುದು.
- ಅವಿಧೇಯತೆಯನ್ನು ತೊರೆಯುವುದರಲ್ಲಿ ತಾಳ್ಮೆ ವಹಿಸುವುದು.
- ವೇದನಾಯುಕ್ತ ವಿಧಿ-ನಿರ್ಣಯಗಳಲ್ಲಿ ತಾಳ್ಮೆ ವಹಿಸುವುದು ಮತ್ತು ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ತುತಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ.
[ಆಲು ಇಮ್ರಾನ್: 19].
ಪ್ರವಾದಿ ﷺ ರವರು ಹೇಳಿದರು:
“ವಿಶ್ವಾಸಿಯ ಸಂಗತಿ ಅದ್ಭುತವಾಗಿದೆ! ಅವನ ಸಂಗತಿಗಳೆಲ್ಲವೂ ಅವನಿಗೆ ಒಳಿತೇ ಆಗಿವೆ. ಅದು ವಿಶ್ವಾಸಿಗಳಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೆ ಸಂತೋಷವಾದರೆ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೆ ಕಷ್ಟ ಬಂದರೆ ಅವನು ತಾಳ್ಮೆ ವಹಿಸುತ್ತಾನೆ. ಅದೂ ಕೂಡ ಅವನಿಗೆ ಒಳಿತಾಗಿದೆ.”
[ಮುಸ್ಲಿಮ್].