Skip to content

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿನ ಒಂದು ಯುದ್ಧದಲ್ಲಿ ಒಬ್ಬ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿನ ಒಂದು ಯುದ್ಧದಲ್ಲಿ ಒಬ್ಬ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು.

أَنَّ امْرَأَةً وُجِدَتْ فِي بَعْضِ مَغَازِي النَّبِيِّ صَلَّى اللهُ عَلَيْهِ وَسَلَّمَ مَقْتُولَةً، فَأَنْكَرَ رَسُولُ اللَّهِ صَلَّى اللهُ عَلَيْهِ وَسَلَّمَ قَتْلَ النِّسَاءِ وَالصِّبْيَانِ.

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಒಂದು ಯುದ್ಧದಲ್ಲಿ ಮಹಿಳೆಯೊಬ್ಬರು ಕೊಲೆಯಾಗಿ ಬಿದ್ದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಂಡರು. ಆಗ ಅವರು ಮಹಿಳೆಯರನ್ನು ಮತ್ತು ಪ್ರೌಢಾವಸ್ಥೆ ತಲುಪದ ಸಣ್ಣ ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು.

ಹದೀಸಿನ ಪ್ರಯೋಜನಗಳು

ಯುದ್ಧದಲ್ಲಿ ಭಾಗವಹಿಸದ ಮಹಿಳೆಯರು, ಬಾಲಕರು ಮತ್ತು ಅವರದೇ ನಿಯಮವನ್ನು ಹೊಂದಿರುವ ವಯೋವೃದ್ಧರು, ಸನ್ಯಾಸಿಗಳು ಮುಂತಾದವರನ್ನು ಕೊಲ್ಲಬಾರದು. ಇವರು ಮುಸಲ್ಮಾನರ ವಿರುದ್ಧ ಯುದ್ಧ ಮಾಡಲು ಮಾರ್ಗದರ್ಶನ ಅಥವಾ ಸಹಾಯ ಮಾಡದಿರುವ ತನಕ. ಅವರು ಹಾಗೆ ಮಾಡಿದರೆ ಅವರನ್ನು ಕೊಲ್ಲಬಹುದು.

ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಇವರು ಮುಸಲ್ಮಾನರೊಂದಿಗೆ ಯುದ್ಧ ಮಾಡುವುದಿಲ್ಲ. ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದರ ಉದ್ದೇಶವು ಸತ್ಯದ ಕರೆಯು ಎಲ್ಲಾ ಮನುಷ್ಯರಿಗೂ ತಲುಪುವುದಕ್ಕಾಗಿ ವೈರಿಗಳ ಶಕ್ತಿಯನ್ನು ಮುರಿಯುವುದು ಮಾತ್ರವಾಗಿದೆ.

ಯುದ್ಧಗಳು ಮತ್ತು ಕದನಗಳಲ್ಲಿಯೂ ಸಹ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕರುಣೆ ತೋರಿದ್ದನ್ನು ತಿಳಿಸಲಾಗಿದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (4/ 61) (3014).

ಸಹೀಹ್ ಮುಸ್ಲಿಮ್. (3/ 1364) (1744).

ಇನ್ನಷ್ಟು (4)

الإلمام بشرح عمدة الأحكام.

لإسماعيل الأنصاري (2/ 189).

تيسير العلام شرح عمدة الأحكام.

للبسام (ص746).