ಪೀಠಿಕೆ ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ಸಮಸ್ತ ಲೋಕಗಳಿಗೆ ಕರುಣೆಯಾಗಿ ಕಳುಹಿಸಲ್ಪಟ್ಟ ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಚರರ ಮೇಲೆ, ಮತ್ತು ಅವರ ಹೆಜ್ಜೆಗಳನ್ನು ಹಿಂಬಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯುವವರ ಮೇಲೆ ಲೋಕಾಂತ್ಯದವರೆಗೂ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ. ಮಂದುವರಿದು ಹೇಳುವುದೇನೆಂದರೆ: ಎರಡು ಪವಿತ್ರ ಮಸೀದಿಗಳ ಸಂದರ್ಶಕರಿಗಾಗಿ, ಅವರು ಇದರಿಂದ ತಮ್ಮ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಿರುವುದಕ್ಕಾಗಿ, ನಾವು ಇದನ್ನು ಸಂಗ್ರಹಿಸಿದ್ದೇವೆ. ಹಾಗೆಯೇ ಪರಮ ಉದಾರಿಯಾದ ಅಲ್ಲಾಹು ಇದರ ಮೂಲಕ ಪ್ರಯೋಜನವನ್ನು ಉಂಟುಮಾಡಲಿ ಮತ್ತು ಇದನ್ನು ಅವನ ಸಂಪ್ರೀತಿಗಾಗಿ ಮಾತ್ರ ರಚಿಸಲಾದ ಒಂದು ಸತ್ಕರ್ಮವನ್ನಾಗಿ ಮಾಡಲಿ ಎಂದು ನಾವು…
ಭಾಷೆ: lang_kn
ಸಿದ್ಧಪಡಿಸಿದವರು: ವಿಭಿನ್ನ ಭಾಷೆಗಳಲ್ಲಿ ಇಸ್ಲಾಮೀ ವಿಷಯಗಳ ಸೇವಾ ಸಂಘದ ವೈಜ್ಞಾನಿಕ ಸಮಿತಿ
ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ಸಮಸ್ತ ಲೋಕಗಳಿಗೆ ಕರುಣೆಯಾಗಿ ಕಳುಹಿಸಲ್ಪಟ್ಟ ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಚರರ ಮೇಲೆ, ಮತ್ತು ಅವರ ಹೆಜ್ಜೆಗಳನ್ನು ಹಿಂಬಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯುವವರ ಮೇಲೆ ಲೋಕಾಂತ್ಯದವರೆಗೂ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ. ಮಂದುವರಿದು ಹೇಳುವುದೇನೆಂದರೆ:
ಎರಡು ಪವಿತ್ರ ಮಸೀದಿಗಳ ಸಂದರ್ಶಕರಿಗಾಗಿ, ಅವರು ಇದರಿಂದ ತಮ್ಮ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಿರುವುದಕ್ಕಾಗಿ, ನಾವು ಇದನ್ನು ಸಂಗ್ರಹಿಸಿದ್ದೇವೆ. ಹಾಗೆಯೇ ಪರಮ ಉದಾರಿಯಾದ ಅಲ್ಲಾಹು ಇದರ ಮೂಲಕ ಪ್ರಯೋಜನವನ್ನು ಉಂಟುಮಾಡಲಿ ಮತ್ತು ಇದನ್ನು ಅವನ ಸಂಪ್ರೀತಿಗಾಗಿ ಮಾತ್ರ ರಚಿಸಲಾದ ಒಂದು ಸತ್ಕರ್ಮವನ್ನಾಗಿ ಮಾಡಲಿ ಎಂದು ನಾವು ಆಶಿಸುತ್ತೇವೆ. ನಿಶ್ಚಯವಾಗಿಯೂ ಅವನು ಅತ್ಯುತ್ತಮ ಹೊಣೆಗಾರನು ಮತ್ತು ಅತ್ಯಂತ ಉದಾರವಾಗಿ ಆಶಿಸಲ್ಪಡುವವನಾಗಿದ್ದಾನೆ.
ವಿಭಿನ್ನ ಭಾಷೆಗಳಲ್ಲಿ ಇಸ್ಲಾಮೀ ವಿಷಯಗಳ ಸೇವಾ ಸಂಘದ ವೈಜ್ಞಾನಿಕ ಸಮಿತಿ
ದುಲ್ಹಿಜ್ಜ ತಿಂಗಳ ಮೊದಲ ಹತ್ತು ದಿನಗಳ ಶ್ರೇಷ್ಠತೆ
ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು ಅತೀವ ಶ್ರೇಷ್ಠತೆಯನ್ನು ಹೊಂದಿವೆ. ಇದನ್ನು ಅಲ್ಲಾಹು ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರು ತಮ್ಮ ಸುನ್ನತ್ನಲ್ಲಿ ವಿವರಿಸಿದ್ದಾರೆ. ಇವು ಅಲ್ಲಾಹು ತನ್ನ ಗ್ರಂಥದಲ್ಲಿ ಆಣೆಯಿಟ್ಟು ಹೇಳಿದ ದಿನಗಳಾಗಿವೆ:"ಪ್ರಭಾತದ ಮೇಲಾಣೆ!ಮತ್ತು ಹತ್ತು ದಿನಗಳ ಮೇಲಾಣೆ!"[ಸೂರ ಫಜ್ರ್: 1-2]،ಇಬ್ನ್ ಅಬ್ಬಾಸ್, ಇಬ್ನು ಝ್ಝಬೈರ್, ಮುಜಾಹಿದ್, ಇಬ್ನ್ ಕಸೀರ್, ಇಬ್ನುಲ್ ಕಯ್ಯಿಮ್ ಮತ್ತು ಹಿಂದಿನ ಹಾಗೂ ನಂತರದ ಅನೇಕ ವಿದ್ವಾಂಸರು ಹೇಳಿದಂತೆ ಇವು ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಾಗಿವೆ[1].[1] ತಫ್ಸೀರ್ ಇಬ್ನ್ ಕಸೀರ್ (4/106), ಝಾದುಲ್-ಮಆದ್ (1/56)].
ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳು ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ಗಿಂತಲೂ ಶ್ರೇಷ್ಠವಾಗಿವೆ. ಇಬ್ನ್ ಅಬ್ಬಾಸ್ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:"ಈ ಹತ್ತು ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲ. ಆದರೆ ಒಬ್ಬ ವ್ಯಕ್ತಿ ತನ್ನ ಪ್ರಾಣ ಮತ್ತು ಸಂಪತ್ತಿನೊಂದಿಗೆ ಹೊರಟು ಅದರಿಂದ ಯಾವುದನ್ನೂ ಹಿಂದಕ್ಕೆ ತರದೆ ಮರಳುವ ಹೊರತು."[2].[2] ಇದನ್ನು ಬುಖಾರಿ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ. ಇದು ತಿರ್ಮಿದಿಯ ವರದಿಯಲ್ಲಿರುವ ಪದಗಳು.
ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಕರ್ಮಗಳ ಶ್ರೇಷ್ಠತೆಗಳು:
1. ಹಜ್ಜ್ ಮತ್ತು ಉಮ್ರಾ ನಿರ್ವಹಿಸುವುದು: ಇವು ಈ ಹತ್ತು ದಿನಗಳಲ್ಲಿ ಮಾಡುವ ಅತಿಶ್ರೇಷ್ಠ ಕರ್ಮಗಳಾಗಿವೆ. ಪ್ರವಾದಿ (ಸ) ರವರು ಹೇಳಿದರು:"ಯಾರು ಈ ಭವನದ (ಕಅಬಾ) ಹಜ್ಜ್ ನಿರ್ವಹಿಸುತ್ತಾರೋ ಮತ್ತು ಅದರಲ್ಲಿ ಯಾವುದೇ ಅಶ್ಲೀಲ ಮಾತು ಅಥವಾ ಪಾಪಕಾರ್ಯ ಮಾಡುವುದಿಲ್ಲವೋ, ಅವರು ತಮ್ಮ ತಾಯಿ ಜನ್ಮ ನೀಡಿದ ದಿನದಂತೆ (ಪಾಪಮುಕ್ತರಾಗಿ) ಹಿಂತಿರುಗುತ್ತಾರೆ."ಮುಸ್ಲಿಂರ ವರದಿಯಲ್ಲಿ ಹೀಗಿದೆ:"ಯಾರು ಈ ಭವನಕ್ಕೆ (ಕಅಬಾ) ಬರುತ್ತಾರೋ ಮತ್ತು ಯಾವುದೇ ಅಶ್ಲೀಲ ಮಾತು ಅಥವಾ ಪಾಪಕಾರ್ಯ ಮಾಡುವುದಿಲ್ಲವೋ, ಅವರು ತಮ್ಮ ತಾಯಿ ಜನ್ಮ ನೀಡಿದ ದಿನದಂತೆ (ಪಾಪಮುಕ್ತರಾಗಿ) ಹಿಂತಿರುಗುತ್ತಾರೆ." [3]ಅವರ ಮಾತು: "ಯಾರು ಈ ಭವನಕ್ಕೆ ಬರುತ್ತಾರೋ" ಇದರ ಅರ್ಥದಲ್ಲಿ ಹಜ್ಜ್
ಮತ್ತು ಉಮ್ರಾ ಎರಡೂ ಒಳಪಡುತ್ತದೆ. ಅಲ್ಲಾಹನಿಗೆ ಸರ್ವಸ್ತುತಿ. ಪ್ರವಾದಿ (ಸ) ರವರು ಹೇಳಿದರು:"ಒಂದು ಉಮ್ರಾದಿಂದ ಇನ್ನೊಂದು ಉಮ್ರಾ ಅವುಗಳ ನಡುವೆ ಸಂಭವಿಸುವ ಪಾಪಗಳಿಗೆ ಪ್ರಾಯಶ್ಚಿತ್ತವಾಗಿವೆ. ಸ್ವೀಕೃತವಾದ ಹಜ್ಜ್ಗೆ ಸ್ವರ್ಗವಲ್ಲದೆ ಬೇರೆ ಪ್ರತಿಫಲವಿಲ್ಲ." [4][3] ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.[4] ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
2. ಒಂಬತ್ತು ದಿನಗಳಲ್ಲಿ, ಅಥವಾ ಸಾಧ್ಯವಾದಷ್ಟು ದಿನಗಳಲ್ಲಿ ಉಪವಾಸ ಆಚರಿಸುವುದು: ಪ್ರವಾದಿ (ಸ) ರವರು ಹೇಳಿದರು:"ಈ ಹತ್ತು ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ."ಉಪವಾಸವು ಶ್ರೇಷ್ಠ ಸತ್ಕರ್ಮಗಳಲ್ಲಿ ಒಂದಾಗಿದೆ. ಪ್ರವಾದಿ (ಸ) ರವರು ಉಪವಾಸ ಆಚರಿಸಲು ಪ್ರೇರೇಪಿಸಿದ್ದಾರೆ ಮತ್ತು ಅದರಲ್ಲಿ ಆಸಕ್ತಿ ಮೂಡಿಸಿದ್ದಾರೆ. ಪ್ರವಾದಿ (ಸ) ರವರು ಹೇಳಿದ ಒಂದು ವಚನ ಹೀಗಿದೆ:"ಯಾವೊಬ್ಬ ದಾಸನು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸ ಆಚರಿಸಿದರೆ, ಅಲ್ಲಾಹು ಆ ದಿನದ ಕಾರಣದಿಂದ ಅವನ ಮುಖವನ್ನು ನರಕದಿಂದ ಎಪ್ಪತ್ತು ವರ್ಷಗಳಷ್ಟು ದೂರಕ್ಕೆ ಸರಿಸುತ್ತಾನೆ." [5][5] ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
3. ಬಲಿದಿನದಂದು ಮತ್ತು ತಶ್ರೀಕ್ನ ದಿನಗಳಲ್ಲಿ ಕುರ್ಬಾನಿ (ಮೃಗಬಲಿ) ನೀಡುವುದನ್ನು ನಿಯಮಗೊಳಿಸಲಾಗಿದೆ. ಪ್ರವಾದಿ (ಸ) ಅವರು ಹೀಗೆ ಮಾಡಿದರು ಎಂಬುದು ದೃಢಪಟ್ಟಿದೆ:"ಅವರು (ಪ್ರವಾದಿ) ಎರಡು ಬಿಳಿ-ಕಪ್ಪು ಬಣ್ಣದ, ಕೊಂಬುಗಳುಳ್ಳ ಟಗರುಗಳನ್ನು ಬಲಿ ನೀಡಿದರು. ಅವೆರಡನ್ನೂ ತಮ್ಮ ಕೈಯಿಂದ ಕೊಯ್ದರು, ಬಿಸ್ಮಿಲ್ಲಾ ಮತ್ತು ಅಲ್ಲಾಹು ಅಕ್ಬರ್ ಎಂದು ಹೇಳಿದರು ಮತ್ತು ತಮ್ಮ ಕಾಲನ್ನು ಅವುಗಳ ಕುತ್ತಿಗೆಯ ಪಕ್ಕದಲ್ಲಿ ಇಟ್ಟರು." [6][6] ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಆಯಿಶ (ರಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:"ಬಲಿದಿನದಂದು (ಬಕ್ರೀದ್) ಆದಮರ ಪುತ್ರನು ರಕ್ತ ಹರಿಸುವುದಕ್ಕಿಂತ ಅಲ್ಲಾಹನಿಗೆ ಹೆಚ್ಚು ಪ್ರಿಯವಾದ ಯಾವುದೇ ಕಾರ್ಯವನ್ನು ಮಾಡುವುದಿಲ್ಲ. ನಿಶ್ಚಯವಾಗಿಯೂ, ಪುನರುತ್ಥಾನ ದಿನದಂದು ಅದರ ಕೊಂಬುಗಳು, ಕೂದಲುಗಳು ಮತ್ತು ಗೊರಸುಗಳೊಂದಿಗೆ ಅದನ್ನು ತರಲಾಗುವುದು. ರಕ್ತವು ಭೂಮಿಗೆ ಬೀಳುವ ಮೊದಲು ಅದು ಅಲ್ಲಾಹನ ಬಳಿ ಒಂದು ಸ್ಥಾನವನ್ನು ಪಡೆಯುತ್ತದೆ. ಆದ್ದರಿಂದ ಅದರ ಮೂಲಕ ನಿಮ್ಮ ಮನಸ್ಸನ್ನು ಸಂತೋಷಪಡಿಸಿರಿ." [7][7] ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ದುಲ್-ಹಜ್ಜ್ ತಿಂಗಳ ಹತ್ತು ದಿನಗಳು ಪ್ರಾರಂಭವಾದಾಗ, ಖುರ್ಬಾನಿ ಮಾಡಲು ಉದ್ದೇಶಿಸಿರುವ ವ್ಯಕ್ತಿಯು ತನ್ನ ಕೂದಲು ಮತ್ತು ಚರ್ಮದಿಂದ (ಏನನ್ನೂ ಕತ್ತರಿಸದೆ) ದೂರವಿರಬೇಕು. ಉಮ್ಮು ಸಲಮಾ (ರ) ರಿಂದ ವರದಿಯಾದ ಹದೀಸ್ನಲ್ಲಿ ಪ್ರವಾದಿ (ಸ) ರವರು ಹೇಳಿದರು:"ನೀವು ದುಲ್-ಹಿಜ್ಜ ತಿಂಗಳ ಚಂದ್ರನನ್ನು ನೋಡಿದರೆ ಮತ್ತು ನಿಮ್ಮಲ್ಲಿ ಯಾರಾದರೂ ಖುರ್ಬಾನಿ ಮಾಡಲು ಬಯಸಿದರೆ, ಅವರು ತಮ್ಮ ಕೂದಲು ಮತ್ತು ಉಗುರುಗಳಿಂದ (ಅವುಗಳನ್ನು ಕತ್ತರಿಸುವುದರಿಂದ) ದೂರವಿರಲಿ."ಇನ್ನೊಂದು ವರದಿಯಲ್ಲಿ ಹೀಗಿದೆ:"...ಕುರ್ಬಾನಿ ಮಾಡುವವರೆಗೆ ಅವರು ತಮ್ಮ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು." [8][8] ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
4. ಈ ಹತ್ತು ದಿನಗಳಲ್ಲಿ ಮತ್ತು ತಶ್ರೀಕ್ನ ದಿನಗಳಲ್ಲಿ ತಕ್ಬೀರ್, ತಹ್ಲೀಲ್, ಮತ್ತು ಧಿಕ್ರ್ (ಅಲ್ಲಾಹನ ಸ್ಮರಣೆ) ಹೇಳುವುದು: ಅಬ್ದುಲ್ಲಾ ಇಬ್ನ್ ಉಮರ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:"ಈ ಹತ್ತು ದಿನಗಳ ಹೊರತು ಅಲ್ಲಾಹನ ಬಳಿ ಹೆಚ್ಚು ಶ್ರೇಷ್ಠವಾದ ಮತ್ತು ಅವನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ. ಆದ್ದರಿಂದ ಈ ದಿನಗಳಲ್ಲಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್), ತಕ್ಬೀರ್ (ಅಲ್ಲಾಹು ಅಕ್ಬರ್), ಮತ್ತು ತಹ್ಮೀದ್ (ಅಲ್-ಹಮ್ದುಲಿಲ್ಲಾಹ್) ಗಳನ್ನು ಹೆಚ್ಚಾಗಿ ಪಠಿಸಿರಿ." [9][9] ಇದನ್ನು ಅಹ್ಮದ್ ವರದಿ ಮಾಡಿದ್ದಾರೆ.
ತಕ್ಬೀರ್ ಕೆಳಗೆ ವಿವರಿಸಿದಂತೆ ಎರಡು ವಿಧಗಳಲ್ಲಿವೆ:
ಮೊದಲನೆಯ ವಿಧ: ಅನಿರ್ಬಂಧಿತ ತಕ್ಬೀರ್. ಇದು ನಮಾಝ್ಗಳ ನಂತರ ಹೇಳುವುದಕ್ಕೆ ಮಾತ್ರ ಸೀಮಿತವಲ್ಲ; ಬದಲಾಗಿ ಎಲ್ಲಾ ಸಮಯಗಳಲ್ಲೂ ಇದನ್ನು ಪಠಿಸಬಹುದು.
ಈದುಲ್ ಅದ್ಹಾದ (ಬಕ್ರೀದ್ನ) ಅನಿರ್ಬಂಧಿತ ತಕ್ಬೀರ್ ದುಲ್-ಹಿಜ್ಜ ತಿಂಗಳ ಮೊದಲ ದಿನದಿಂದ ಪ್ರಾರಂಭವಾಗಿ ತಶ್ರೀಕ್ನ ದಿನಗಳ ಕೊನೆಯ ದಿನದವರೆಗೆ, ಎಲ್ಲಾ ಸಮಯಗಳಲ್ಲೂ, ರಾತ್ರಿ, ಹಗಲು, ದಾರಿಯಲ್ಲಿ, ಮಾರುಕಟ್ಟೆಗಳಲ್ಲಿ, ಮಸೀದಿಗಳಲ್ಲಿ, ಮನೆಗಳಲ್ಲಿ, ಮತ್ತು ಅಲ್ಲಾಹನ ಸ್ಮರಣೆ ಮಾಡಲು ಅನುಮತಿಸಲಾದ ಪ್ರತಿಯೊಂದು ಸ್ಥಳದಲ್ಲಿಯೂ ಇರುತ್ತದೆ.
ಎರಡನೆಯ ವಿಧ: ನಿರ್ಬಂಧಿತ ತಕ್ಬೀರ್: ಇದು ಈದುಲ್ ಅದ್ಹಾದಲ್ಲಿ (ಬಕ್ರೀದ್ನಲ್ಲಿ) ವಿಶೇಷವಾಗಿ (ಕಡ್ಡಾಯ) ನಮಾಝ್ಗಳ ನಂತರ ಹೇಳುವುದಕ್ಕೆ ಸೀಮಿತವಾಗಿದೆ. ಅದರ ಸಮಯ ಮತ್ತು ಸ್ವರೂಪ ಈ ಕೆಳಗಿನಂತಿವೆ:
ಮೊದಲನೆಯದಾಗಿ: ನಿರ್ಬಂಧಿತ ತಕ್ಬೀರ್ ಅರಫಾ ದಿನದ ಫಜ್ರ್ ನಮಾಝ್ನ ನಂತರ ಪ್ರಾರಂಭವಾಗುತ್ತದೆ ಮತ್ತು ತಶ್ರೀಕ್ನ ದಿನಗಳ ಮೂರನೆಯ ದಿನದ ಅಸರ್ ನಮಾಝ್ನ ನಂತರ ಕೊನೆಗೊಳ್ಳುತ್ತದೆ. ಇದು ಹಜ್ ನಿರ್ವಹಿಸದವರಿಗಾಗಿ. ಹಜ್ ನಿರ್ವಹಿಸುವವರಿಗೆ ನಿರ್ಬಂಧಿತ ತಕ್ಬೀರ್ ಬಲಿದಿನದ ಝುಹ್ರ್ ನಮಾಝ್ನಿಂದ ಪ್ರಾರಂಭವಾಗುತ್ತದೆ.
ಎರಡನೆಯದಾಗಿ: ತಕ್ಬೀರ್ ಪಠಿಸುವ ರೂಪ: "ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹು, ವಲ್ಲಾಹು ಅಕ್ಬರ್. ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್" [10][10] ನೋಡಿ: ಇಬ್ನ್ ಖುದಾಮ ರವರ ಅಲ್-ಮುಗ್ನಿ (3/290), ಮತ್ತು ಅಶ್ಶರ್ಹುಲ್-ಕಬೀರ್ ಮಅಲ್-ಮುಖ್ನಿಇ ವಲ್-ಇನ್ಸಾಫ್ (5/380).
5. ಹಜ್ ನಿರ್ವಹಿಸದವರು ಈದ್ ನಮಾಝ್ ನಿರ್ವಹಿಸಲು, ಅದಕ್ಕಾಗಿ ಬೇಗನೆ ತೆರಳಲು, ಮತ್ತು ಖುತ್ಬಾ (ಪ್ರವಚನ) ಆಲಿಸಲು ಆಸಕ್ತಿ ತೋರುವುದು: ಏಕೆಂದರೆ ಇದು ಇಸ್ಲಾಮಿನ ಮಹಾನ್ ಚಿಹ್ನೆಗಳಲ್ಲಿ ಒಂದಾಗಿದೆ. ಅದರ ಮಹತ್ವದ ಕಾರಣದಿಂದಾಗಿ ಮಹಿಳೆಯರನ್ನು—ಕನ್ಯೆಯರು ಮತ್ತು ಋತುಮತಿಯಾದವರನ್ನೂ ಸಹ ಅದಕ್ಕಾಗಿ ಹೊರಡಲು ಆದೇಶಿಸಲಾಗಿದೆ. ಉಮ್ಮು ಅತಿಯ್ಯಾ (ರ) ರಿಂದ ವರದಿ. ಅವರು ಹೇಳಿದರು:"ಈದ್ ದಿನದಂದು ನಮಗೆ ಹೊರಡಲು ಆದೇಶಿಸಲಾಗುತ್ತಿತ್ತು. ಎಷ್ಟರಮಟ್ಟಿಗೆ ಎಂದರೆ ನಾವು ಕನ್ಯೆಯರನ್ನು ಅವರ ಕೋಣೆಯಿಂದ ಹೊರತರುತ್ತಿದ್ದೆವು ಮತ್ತು ಋತುಮತಿಯಾದವರನ್ನೂ ಹೊರತರುತ್ತಿದ್ದೆವು. ಅವರು ಜನರ ಹಿಂದೆ ಇರುತ್ತಿದ್ದರು. ಅವರು (ಮುಸ್ಲಿಮರು) ತಕ್ಬೀರ್ ಹೇಳುವಾಗ ಇವರೂ ಭಾಗಿಯಾಗುತ್ತಿದ್ದರು ಮತ್ತು ಅವರು ದುಆ ಮಾಡುವಾಗ ಇವರೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರು ಆ ದಿನದ ಸಮೃದ್ಧಿ ಮತ್ತು ಪರಿಶುದ್ಧತೆಯನ್ನು ಆಶಿಸುತ್ತಿದ್ದರು."ಇನ್ನೊಂದು ವರದಿಯಲ್ಲಿ ಹೀಗಿದೆ:"ಮತ್ತು ಋತುಮತಿಯಾದವರಿಗೆ ಮುಸ್ಲಿಮರು ನಮಾಝ್ ಮಾಡುವ ಸ್ಥಳದಿಂದ ದೂರವಿರಲು ಆದೇಶಿಸಲಾಗಿತ್ತು." [11][11] ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
6. ಐಚ್ಛಿಕ ಆರಾಧನೆಗಳಂತಹ ಸತ್ಕರ್ಮಗಳನ್ನು ಹೆಚ್ಚಿಸುವುದು: ಉದಾಹರಣೆಗೆ ನಮಾಝ್, ಸದಕಾ (ದಾನ), ಪವಿತ್ರ ಕುರ್ಆನ್ ಪಾರಾಯಣ, ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ನಿಷೇಧಿಸುವುದು, ನೆರೆಹೊರೆಯವರಿಗೆ ಉಪಕಾರ ಮಾಡುವುದು, ರಕ್ತಸಂಬಂಧವನ್ನು ಕಾಪಾಡುವುದು ಮುಂತಾದ ಸತ್ಕರ್ಮಗಳು. ಪ್ರವಾದಿ (ಸ) ರವರ ಸಾಮಾನ್ಯ ಹೇಳಿಕೆಯು ಇದಕ್ಕೆ ಆಧಾರವಾಗಿದೆ:"ಈ ಹತ್ತು ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲ. ಆದರೆ ಒಬ್ಬ ವ್ಯಕ್ತಿ ತನ್ನ ಪ್ರಾಣ ಮತ್ತು ಸಂಪತ್ತಿನೊಂದಿಗೆ ಹೊರಟು ಅದರಿಂದ ಯಾವುದನ್ನೂ ಹಿಂದಕ್ಕೆ ತರದೆ ಮರಳುವ ಹೊರತು." [12].[12] ಇದನ್ನು ಬುಖಾರಿ ವರದಿ ಮಾಡಿದ್ದಾರೆ, ಮತ್ತು ತಿರ್ಮಿಧಿಯವರ ವರದಿಯೂ ಇದೆ.
ನಾವು ಕಲಿತದ್ದನ್ನು ನಮಗೆ ಪ್ರಯೋಜನಕಾರಿಯಾಗಿ ಮಾಡಲು ಮತ್ತು ನಮಗೆ ಪ್ರಯೋಜನಕಾರಿಯಾದುದನ್ನು (ಮಾತ್ರ) ನಮಗೆ ಕಲಿಸಲು ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ನಿಶ್ಚಯವಾಗಿಯೂ ಅವನು ಪರಮ ಉದಾರಿಯಾಗಿದ್ದಾನೆ. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ಹೇರಳವಾಗಿ ವರ್ಷಿಸಲಿ.
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ನೀವು ಸ್ವತಃ ನಿಮ್ಮನ್ನು ಪ್ರಶ್ನಿಸಿದ್ದೀರಾ: ಆಕಾಶಗಳು ಮತ್ತು ಭೂಮಿ ಹಾಗು ಅವುಗಳ ಮಧ್ಯೆ ಇರುವ ಮಹಾನ್ ಸೃಷ್ಟಗಳ ಸೃಷ್ಟಿಕರ್ತ ಯಾರು? ಮತ್ತು ಈ ನಿಖರವಾದ ವ್ಯವಸ್ಥೆಯನ್ನು ರಚಿಸಿದವರು ಯಾರು?
ನಮಾಝನ್ನು ಹೇಗೆ ನಿರ್ವಹಿಸಬೇಕೆಂಬುದರ ಸಂಕ್ಷಿಪ್ತ ಪ್ರಾಯೋಗಿಕ ವಿವರಣೆ, ಇದರಿಂದ ನಾವು ಅಲ್ಲಾಹುವನ್ನು ಅರಿವಿನೊಂದಿಗೆ ಆರಾಧಿಸಬಹುದು ಮತ್ತು ನಮ್ಮ ನಮಾಝ್ ಅದರ ಅರ್ಕಾನ್ ಮತ್ತು ಶರತ್ತುಗಳೊಂದಿಗೆ ಸಂಪೂರ್ಣವಾಗುತ್ತದೆ. ನಮಾಝ್ ನಿರ್ವಹಿಸುವ ವಿಧಾನ ನಾವು ನಮಾಝ್ ಮಾಡಲು ಉದ್ದೇಶಿಸಿದರೆ, ಸಣ್ಣ ಮತ್ತು ದೊಡ್ಡ ಅಶುದ್ಧಿಗಳಿಂದ ಶುದ್ಧರಾಗಿರಬೇಕು. ನಮ್ಮ ಗುಪ್ತಾಂಗಗಳನ್ನು ಮುಚ್ಚಿ, ಶುದ್ಧ ಬಟ್ಟೆ ಧರಿಸಿ ನಮಾಝ್ ನಿರ್ವಹಿಸಬೇಕು. ನಮ್ಮ ದೇಹವೂ, ನಮ್ಮ ನಮಾಝಿನ ಸ್ಥಳವೂ ಕಲ್ಮಶಗಳಿಂದ ಶುಚಿಯಾಗಿರಬೇಕು. ಕಿಬ್ಲಾಗೆ ಮುಖಮಾಡುತ್ತೇವೆ. ಸುತ್ರಾದ ಮುಂದೆ ನಮಾಝ್ ಮಾಡುವುದು ಸುನ್ನತ್ ಆಗಿದೆ.
ಶೇಖ್ ಅಬ್ದುರ್-ರಹಮಾನ್ ಇಬ್ನ್ ನಾಸಿರ್ ಅಸ್-ಸಾದಿ ರವರ 'ಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು' ಎಂಬ ಪುಸ್ತಕವು, ಆಳವಾದ ಈಮಾನಿನ ದೃಷ್ಟಿಕೋನದಿಂದ ನಿಜವಾದ ಸಂತೋಷದ ಕಾರಣಗಳನ್ನು ವಿಶ್ಲೇಷಿಸುತ್ತದೆ. ಇದು ಈಮಾನ್ (ಸತ್ಯವಿಶ್ವಾಸ), ಸತ್ಕರ್ಮ, ಅಲ್ಲಾಹನ ಸ್ಮರಣೆ, ಸಂತೃಪ್ತಿ, ಅನುಗ್ರಹಗಳ ಕುರಿತು ಚಿಂತನೆ, ಪರೋಪಕಾರ, ಅಲ್ಲಾಹನಲ್ಲಿ ಭರವಸೆ (ತವಕ್ಕುಲ್), ಸಹನೆ, ಮತ್ತು ವಿಷಯಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡುವುದರ ಮೂಲಕ ಓದುಗರಿಗೆ ಹೃದಯದ ನೆಮ್ಮದಿಯೆಡೆಗೆ ದಾರಿ ತೋರಿಸುತ್ತದೆ. ಈ ಕೃತಿಯು ತನ್ನ ಸುಂದರವಾದ ಶೈಲಿಯ ಮೂಲಕ, ಜೀವನದ ಏರಿಳಿತಗಳ ನಡುವೆಯೂ ನೆಮ್ಮದಿಯ, ಸಮತೋಲಿತ ಮತ್ತು ಸಂತೋಷದ ಜೀವನಕ್ಕಾಗಿ ಒಂದು ಮಾರ್ಗಸೂಚಿಯನ್ನು ನಮ್ಮ ಮುಂದಿಡುತ್ತದೆ.