Skip to content
الأنفَال /

ಆಯತ್ 41

8 : 41

ಆಯತ್ 41 of الأنفَال (8 : 41). This page carries the verse in the Uthmani script with a translation of its meaning, at a stable URL that can be cited on its own.

الأنفَال ಆಯತ್‌ಗಳು 75
ಸೂರ · الأنفَال
ಕನ್ನಡ · Hamza
8 : 41

۞ وَٱعۡلَمُوٓاْ أَنَّمَا غَنِمۡتُم مِّن شَيۡءٖ فَأَنَّ لِلَّهِ خُمُسَهُۥ وَلِلرَّسُولِ وَلِذِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينِ وَٱبۡنِ ٱلسَّبِيلِ إِن كُنتُمۡ ءَامَنتُم بِٱللَّهِ وَمَآ أَنزَلۡنَا عَلَىٰ عَبۡدِنَا يَوۡمَ ٱلۡفُرۡقَانِ يَوۡمَ ٱلۡتَقَى ٱلۡجَمۡعَانِۗ وَٱللَّهُ عَلَىٰ كُلِّ شَيۡءٖ قَدِيرٌ

ತಿಳಿಯಿರಿ! ನೀವು (ಯುದ್ಧದಲ್ಲಿ) ಗಳಿಸಿದ ಯಾವುದೇ ವಸ್ತುವಿದ್ದರೂ, ಅದರ ಐದನೇ ಒಂದು ಭಾಗವು ಅಲ್ಲಾಹನಿಗೆ, ಸಂದೇಶವಾಹಕರಿಗೆ, ಅವರ ನಿಕಟ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ನೀಡತಕ್ಕದ್ದು. ನೀವು ಅಲ್ಲಾಹನಲ್ಲಿ ಮತ್ತು ಸತ್ಯಾಸತ್ಯ ವಿವೇಚನೆಯ ದಿನದಂದು—ಎರಡು ಬಣಗಳು ಮುಖಾಮುಖಿಯಾದ ದಿನದಂದು—ನಮ್ಮ ದಾಸನಿಗೆ ನಾವು ಅವತೀರ್ಣಗೊಳಿಸಿದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

Explanation & meanings · 1
  1. ಯುದ್ಧಾರ್ಜಿತ ಸೊತ್ತನ್ನು ಐದು ಭಾಗಗಳಾಗಿ ವಿಂಗಡಿಸಬೇಕು. ನಾಲ್ಕು ಭಾಗಗಳನ್ನು ಯೋಧರಿಗೆ ವಿತರಿಸಬೇಕು. ಉಳಿದ ಒಂದು ಭಾಗವನ್ನು ಪುನಃ ಐದು ಭಾಗಗಳಾಗಿ ವಿಂಗಡಿಸಿ, ಒಂದು ಭಾಗವನ್ನು ಸಂದೇಶವಾಹಕರಿಗೆ (ಅಂದರೆ ಧಾರ್ಮಿಕ ಕಾರ್ಯಗಳಿಗೆ), ಇನ್ನೊಂದನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಟುಂಬಕ್ಕೆ (ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ಕುಟುಂಬಗಳಿಗೆ), ಮೂರನೇ ಭಾಗವನ್ನು ಅನಾಥರಿಗೆ, ನಾಲ್ಕನೇ ಭಾಗವನ್ನು ಬಡವರಿಗೆ ಮತ್ತು ಕೊನೆಯ ಭಾಗವನ್ನು ಪ್ರಯಾಣಿಕರಿಗೆ ವಿತರಿಸಬೇಕು.