Skip to content
الأنفَال /

ಆಯತ್ 17

8 : 17

ಆಯತ್ 17 of الأنفَال (8 : 17). This page carries the verse in the Uthmani script with a translation of its meaning, at a stable URL that can be cited on its own.

الأنفَال ಆಯತ್‌ಗಳು 75
ಸೂರ · الأنفَال
ಕನ್ನಡ · Hamza
8 : 17

فَلَمۡ تَقۡتُلُوهُمۡ وَلَٰكِنَّ ٱللَّهَ قَتَلَهُمۡۚ وَمَا رَمَيۡتَ إِذۡ رَمَيۡتَ وَلَٰكِنَّ ٱللَّهَ رَمَىٰ وَلِيُبۡلِيَ ٱلۡمُؤۡمِنِينَ مِنۡهُ بَلَآءً حَسَنًاۚ إِنَّ ٱللَّهَ سَمِيعٌ عَلِيمٞ

ನೀವು ಅವರನ್ನು ಕೊಲ್ಲಲಿಲ್ಲ. ಆದರೆ ಅಲ್ಲಾಹು ಅವರನ್ನು ಕೊಂದನು. ನೀವು ಎಸೆದಾಗ (ವಾಸ್ತವದಲ್ಲಿ) ನೀವು ಎಸೆದಿರಲಿಲ್ಲ, ಬದಲಿಗೆ, ಅಲ್ಲಾಹು ಎಸೆದಿದ್ದನು. ಅಲ್ಲಾಹು ತನ್ನ ವತಿಯ ಒಂದು ಸುಂದರ ಪರೀಕ್ಷೆಯ ಮೂಲಕ ಸತ್ಯವಿಶ್ವಾಸಿಗಳನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಮಾಡಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

Explanation & meanings · 2
  1. ಬದ್ರ್ ಯುದ್ಧದಲ್ಲಿ ನೀವು ಸತ್ಯನಿಷೇಧಿಗಳನ್ನು ಕೊಂದದ್ದು ನಿಮ್ಮ ಸಾಧನೆ ಎಂದು ಭಾವಿಸಬೇಡಿ. ಅಲ್ಲ, ಬದಲಿಗೆ ಅಲ್ಲಾಹು ನಿಮಗೆ ಸಹಾಯ ಮಾಡಿದ್ದರಿಂದಲೇ ನಿಮಗೆ ಈ ಶಕ್ತಿಯು ದೊರೆತಿದೆ. ಆದ್ದರಿಂದ, ವಾಸ್ತವವಾಗಿ ಅವರನ್ನು ಕೊಂದದ್ದು ಅಲ್ಲಾಹನಾಗಿದ್ದನು.
  2. ಬದ್ರ್ ಯುದ್ಧದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವೈರಿಗಳ ಮೇಲೆ ಒಂದು ಹಿಡಿ ಮರಳನ್ನು ಎಸೆದರು. ಅವರು ಎಸೆದ ಈ ಮರಳನ್ನು ಅಲ್ಲಾಹು ವೈರಿಗಳ ಮುಖ ಮತ್ತು ಕಣ್ಣುಗಳನ್ನು ತಲುಪುವಂತೆ ಮಾಡಿ ಅವರನ್ನು ಘಾಸಿಗೊಳಿಸಿದ್ದನು. ಇದರಿಂದ ಅವರಿಗೆ ಏನೂ ಕಾಣದಂತಾಯಿತು.